ಕಾವiಗಾರಿ ಹಣ ದುರ್ಬಳಕೆ: ಪಕ್ಕಿರಪ್ಪ ಆರೋಪ

0
64

ಸವಣೂರ : ಒಂದೆ ಕಾಮಗಾರಿಗೆ 2 ಬೀಲ್‍ನ್ನು ಉಪಯೋಗಿಸಿ ಸನ್ 2012-13 ರಲ್ಲಿ ಸುಮಾರು 10 ಲಕ್ಷ ಅನುದಾನ ಬಿಡುಗಡೆಯಾದರೂ ಅದನ್ನು ಬಳಕೆಗೆ ತೆಗೆದುಕೊಳ್ಳದೆ ಮತ್ತೆ ಅದೇ ಕಾವiಗಾರಿಗೆ ಸನ್ 2013- 14 ಮತ್ತೆ 6 ಲಕ್ಷ ಅನುದಾನವನ್ನು ಬಿಡುಗಡೆಗೋಳಿಸಿ ನಿರ್ಮಿತಿ ಕೇಂದ್ರದವರು 6 ಲಕ್ಷ ಹಣವನ್ನು ಉಪಯೋಗಿಸಿಕೊಂಡು ತಿಮ್ಮಣ್ಣ ಬಂಡಿವಂಡರ ಮನೆಯಿಂದ ವಾಯ ಯಲ್ಲಪ್ಫ ಹರಿಜನ ಮನೆಯ ಮುಂದುಗಡೆ ಹಾದು ಪಂಪ್‍ಹೌಸ್‍ವರೆಗೆ ಅಂದರೆ 160 ಮೀಟರ ಕಾಮಗಾರಿ ಕೈಗೊಂಡು ಸನ್ 2012- 13 ರಲ್ಲಿಯೆ ಹಣವನ್ನು 10 ಲಕ್ಷ ಹಣವನ್ನು ಮಂಗಮಾಯ ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಪಕ್ಕಿರಪ್ಪ ಹರಿಜನ ಆರೋಪಿಸುತ್ತಾರೆ.
ತಾಲೂಕಿನ ಕಳಲಕೊಂಡ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದವರು ಗ್ರಾಮೀಣ ಜನರ ಕಣ್ಣಿಗೆ ಮಣ್ಣು ಎರೆಚಿ ತಮ್ಮ ಜೇಬುಗಳನ್ನು ತುಂಬಿಸಿಕೊಂಡು ಹೊದ ಪ್ರಸಂಗ ಮಾಹಿತಿ ಹಕ್ಕಿನಡಿಯಲ್ಲಿ ಬಯಲಿಗೆ ಬಂದಿದೆ ಅಂದರೆ 2012-13 ರಲ್ಲಿಯೆ ನೇಹರೂ ಓಲೇಕಾರ ಶಾಸಕರು ಎಸ್.ಸಿ.ಪಿ. ಯೋಜನೆಯಡಿ ಅನುದಾನ ಬಿಡುಗಡೆಗೊಳ್ಳಿಸಿ ತಮ್ಮ ಓಣಿಗೆ ಸಿ,ಸಿ. ರಸ್ತೆ ಆಗುತ್ತದೆ ಎಂದು ಜನರಿಗೆ ಆಶ್ವಾಸನೆ ನೀಡಿ ಇನ್ನೆನೂ ಕಾಮಗಾರಿಗೆ ಚಾಲನೆ ನೀಡಬೇಕು ಎನ್ನುವಷ್ಟರಲ್ಲಿಯೆ ಶಾಸಕರ ಅವದಿ ಕೊನೆಗೊಂಡಿದ್ದರಿಂದ ಕಾಮಗಾರಿ ನೆನೆಗುದಿಗೆ ಬಿದ್ದು ಮತ್ತೆ ಅದೇ ಕಾಮಗಾರಿಗೆ ಬಾವಿ ಶಾಸಕರು ಎಸ್.ಸಿ,ಪಿ. ಯೋಜನೆಯಡಿಯಲ್ಲಿ ಸುಮಾರು 6 ಲಕ್ಷ ಅನುದಾನ ಬಿಡುಗಡೆಗೊಳ್ಳಿಸಿ ಕಾಮಗಾರಿ ಕೈಗೊಂಡು ಹಿಂದಿನ 10ಲಕ್ಷ ಹಾಗೂ 6 ಲಕ್ಷ ಹಣವನ್ನು ಒಂದೆ ಕಾಮಗಾರಿಗೆ ಎರಡು ಬಿಲ್ಲ್‍ಗಳನ್ನು ತೆಗೆದುಕೊಂಡು ಗ್ರಾಮದ ಜನತೆಯ ಕಣ್ಣಿಗೆ ಮಣ್ಣು ಎರೆಚ್ಚಿ ಹೊಗಿರುವದಾಗಿ ಮಾಹಿತಿ ಹಕ್ಕಿನಡಿಯಲ್ಲಿ ಪ್ರಕರಣ ಬಯಲಿಗೆಳೆದು ಸಂಬಂದಿಸಿದ ಅಧಿಕಾರಿಗಳಾದ ತಹಶೀಲ್ದಾರ ಸವಣೂರ, ಉಪವಿಭಾಗಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾವೇರಿ, ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಸುಮಾರು 3 ತಿಂಗಳು ಗತಿಸಿದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ. ಕ್ರೀಯಾ ಯೋಜನೆ ಇಲ್ಲದ 42 ಮೀಟರ ಮಾಲಕಿ ಹದ್ದಿನಲ್ಲಿ ಸಿ.ಸಿ.ರಸ್ತೆ ನಿರ್ಮಿಸಿ ಕೈತೊಳದುಕೊಂಡಿದ್ದಾರೆ. ಕೂಡಲೆ ಮೇಲ್ದಾಕಾರಿಗಳು ಈ ಕಾಮಗಾರಿಯ ಸ್ಥಳವನ್ನು ಪರಿಶೀಲನೆ ಕೈಗೊಂಡು ತಪ್ಪಿತಸ್ಥರ ಮೇಲೆ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಆಗ್ರಹಿಸಿದ್ದಾರೆ.
****
ಮಾಹಿತಿ ಹಕ್ಕಿನಡಿಯಲ್ಲಿ ಕಾಮಗಾರಿಯ ಬಿಲ್ ಹಾಗೂ ಕ್ರೀಯಾ ಯೋಜನೆಯ ದಾಖಲೆಗಳನ್ನು ಪರಿಶೀಲನೆ ಮಾಡಿ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ ಹಾಗೂ ಒಂದೆ ರಸ್ತೆಗೆ ಎರಡು ಬಿಲ್ಲ್‍ಗಳನ್ನು ತೆಗೆದಿರುವದು ಬೆಳಕಿಗೆ ಬಂದಿದ್ದರಿಂದ ತಹಶೀಲ್ದಾರ ಸವಣೂರ, ಉಪವಿಭಾಗಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾವೇರಿ, ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಸುಮಾರು 3 ತಿಂಗಳು ಗತಿಸಿದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಪಕ್ಕಿರಪ್ಪ ಹರಿಜನ ಆರೋಪಿಸುತ್ತಾರೆ.

loading...

LEAVE A REPLY

Please enter your comment!
Please enter your name here