ಸಂಧಾನ ಸಭೆಯ ಮುನ್ನ ಜನಪ್ರತಿನಿಧಿಗಳ ಮತ್ತು ರೈತಮುಖಂಡರ ಸಭೆ ಕರೆಯಿರಿ- ಲೋಕನಾಥ ಹೆಬಸೂರ.

0
55

ನವಲಗುಂದ: ಅಕ್ಟೊಬರ್ 21ರೊಳಗಾಗಿ ಮುಖ್ಯಮಂತ್ರಿಗಳು ಒಂದು ಸಭೆಯನ್ನು ನಡೆಸಿ ಅದರಲ್ಲಿ ತಜ್ಞರನ್ನು , ಜನಪ್ರತಿನಿಧಿಗಳನ್ನು ಮತ್ತು ರೈತ ಮುಖಂಡರನ್ನು ಕರೆಸಿ ಮಹದಾಯಿ ಸಂಧಾನದ ಸಭೆಯಲ್ಲಿ ತೆಗೆದುಕೂಳ್ಳುವ ನಿರ್ಣಯದ ಕುರಿತು ಚರ್ಚಿಸಬೇಕೆಂದು ಮಲಪ್ರಭಾ ಮಹದಾಯಿ ಕಳಸಾ-ಬಂಡೂರಿ ರೈತಹೋರಾಟ ಒಕ್ಕೂಟದ ಅಧ್ಯಕ್ಷರಾದ ಲೋಕನಾಥ ಹೆಬಸೂರ ಆಗ್ರಹಿಸಿದರು.
ರೈತಭವನದಲ್ಲಿ 434 ನೇ ದಿನದ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಅವರು ಏನು ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸರವರು ಮಹದಾಯಿ ಹಾಗೂ ಕಳಸಾ-ಬಂಡೂರಿ ವಿವಾದವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಸಭೆಯನ್ನು ಕರೆದಿದ್ದಾರೋ ಆ ಸಭೆಯಲ್ಲಿ ಭಾಗವಹಿಸುವುದಕ್ಕಿಂತ ಪೂರ್ವದಲ್ಲಿ ಒಂದು ವಿಶೇಷವಾದಂತಹ ಸಭೆಯನ್ನು ಮುಖ್ಯಮಂತ್ರಿಗಳು ಕರೆಯಬೇಕು ಅದರಲ್ಲಿ ಕಾನೂನು ತಜ್ಞರು, ಜನಪ್ರತಿನಿಧಿಗಳು, ಮತ್ತು ರೈತಮುಖಂಡರನ್ನು ಕರೆದು ಆ ದಿನ ಸಂಧಾನದ ಸಭೆಯಲ್ಲಿ ತೆಗೆದುಕೂಳ್ಳಬೇಕೆಂಬ ನಿರ್ಣಯದ ಕುರಿತು ಕೂಲಂಕುಷವಾಗಿ ಚರ್ಚಿಸಿ ಒಂದು ಒಮ್ಮತದ ನಿರ್ಣಯವನ್ನು ತೆಗೆದುಕೂಳ್ಳಬೆಕೆಂದು ರಾಜ್ಯ ಸರ್ಕಾರವನ್ನು ಆಗ್ರಹ ಮಾಡಿದರು.
ಮತ್ತೂಬ್ಬ ರೈತ ಮುಖಂಡ ಡಿ.ವಿ.ಕುರಹಟ್ಟಿ ಮಾತನಾಡಿ ಈ ವರ್ಷ ಮಳೆಯಾಗದೆ ಎಲ್ಲ ಬೆಳೆಗಳು ಒಣಗಿ ಹೋಗಿವೆ. ರೈತರು ಕಂಗಾಲಾಗಿ ಹೋಗಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ನವಲಗುಂದ ತಾಲೂಕನ್ನು ಬರಗಾಲ ಅಂತಾ ಘೋಷಣೆಯನ್ನು ಮಾಡಿ ಬರಗಾಲದ ವಿಶೇಷ ಪ್ಯಾಕೇಜನ್ನು ಬಿಡುಗಡೆ ಮಾಡಬೇಕು ಮತ್ತು ಮಹದಾಯಿಗಾಗಿ ವಿಶೇಷ ಅಧಿವೇಶನ್‍ದ ಅವಶ್ಯಕತೆಯಿಲ್ಲ ಎನ್ನುತ್ತಿರುವಂತಹ ಎಚ್.ಕೆ.ಪಾಟೀಲರವರು ಇದರ ಒಳಗುಟ್ಟನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತಪರ ಹೋರಾಟಗಾರರಾದ ಡಿ.ಜಿ.ಹೆಬಸೂರ, ಮಲ್ಲೇಶ ಉಪ್ಪಾರ, ರವಿಗೌಡ ಪಾಟಿಲ್, ಅಲ್ಲಾಭಕ್ಷ ಹಂಚಿನಾಳ, ಯಲ್ಲಪ್ಪ ದಾಡಿಬಾವಿ, ಬಸಪ್ಪ ಬಿರಣ್ಣವರ, ತಿಪ್ಪಣ್ಣ ಕರಿಗಾರ, ಯಲ್ಲಪ್ಪ ದಾಡಿಬಾವಿ, ಚನ್ನಯ್ಯ ಮಠಪತಿ, ಮಾಬುಸಾಬ ನದಾಫ, ಸೊಮಣ್ಣಾ ಕಿಲಾರಿ, ಮಲ್ಲಯ್ಯ ಪೂಜಾರ, ಹುಸೇನಸಾಬ ನದಾಪ, ಶಿವನಗೌಡ ಮರಿಗೌಡ್ರ, ಹನುಮಂತ ಪೂಜಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here