ಇಂದಿನ ವಿದ್ಯಾರ್ಥಿಗಳು ದೇಶದ ಆಸ್ತಿ: ಶಾಸಕ ಮನೋಹರ

0
51

ಹಾನಗಲ್ಲ:ಜವಾಹರ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ದೇಶದ ಆಸ್ತಿಯಾಗುತ್ತಾರೆ ಎಂದು ಶಾಸಕ ಮನೋಹರ ತಹಶೀಲ್ದಾರ ಹೇಳಿದರು.
ತಾಲೂಕಿನ ಗುಂಡೂರ ಹಾಗೂ ಮಹರಾಜಪೇಟ ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ ನಿರ್ಮಿಸಲಾದ ಲೋಕೋಪಯೋಗಿ ಇಲಾಖೆಯಿಂದ ರೂ. 59 ಲಕ್ಷದಲ್ಲಿ ನಿರ್ಮಿಸಲಾದ ಶ್ರೀಕುಮಾರೇಶ್ವರ ಕಲಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು. ಉನ್ನತ ಶಿಕ್ಷಣ ನೀಡುವ ವಿದ್ಯಾಲಯಗಳಿಗೆ ಎಲ್ಲ ಜನಪ್ರತಿ ನಿದಿಗಳು ಮೂಲಭೂತ ಸೌಕ್ಯರ್ಯ ವದಗಿಸಲು ಮುಂದಾಗಬೇಕು ಹಾಗೂ ಶಾಸಕರ ಅನುದಾನದಲ್ಲಿ ರೂ. 12 ಲಕ್ಷದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಿ ಕೊಡಲಾಗುವುದು ಮತ್ತು ಸರಕಾರದ ಯೋಜನೆಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗುವುದು ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ. ದೇಶದ 589 ಜಿಲ್ಲೆಗಳಲ್ಲಿ ಜವಾಹರ ನವೋದಯ ವಿದ್ಯಾಲಯಗಳಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯ ನವೋದಯ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರಿಸಿದೆ. ಸಂಸದರ ನಿದಿಗೆ ಪ್ರತಿ ವರ್ಷ ಬರುವ ಅನುದಾನದಲ್ಲಿ ಶಿಕ್ಷಣಕ್ಕೆ 3.4 ಕೋಟಿ ನೀಡಲಾಗುತ್ತಿದೆ ಎಂದ ಅವರು, ಡಿಜಿಟಲ್ ಶಿಕ್ಷಣದ ವ್ಯವಸ್ಥೆಗೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಜವಾಹರ ನವೋದಯ ವಸತಿ ಶಾಲೆ ಆಯ್ಕೆಗೊಂಡಿದ್ದು, ಸಧ್ಯದಲ್ಲಿ ಡಿಜಿಟಲ್ ಶಿಕ್ಷಣ ಆರಂಭಗೊಳ್ಳಲಿದೆ ಎಂದರು.
ನವೀದಯ ಶಾಲೆಯಲ್ಲಿ ವ್ಯಾಸಂಗ ಮಾಡುವ ಪ್ರತಿ ವಿದ್ಯಾರ್ಥಿಗೆ ಕೇಂದ್ರ ಸಕಾರ ವರ್ಷಕ್ಕೆ ರೂ. 85 ಸಾವಿರ ಹಣ ಖರ್ಚು ಮಾಡುತ್ತದೆ. ಪ್ರತಿ ವರ್ಷ 19 ಸಾವಿರ ಕೋಟಿ ಹಣವನ್ನು ನವೋದಯ ವಿದ್ಯಾಲಯಗಳಿಗೆ ವಿನಿಯೋಗಿಸಲಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಮೂಲಕ ಅಭಿವೃದ್ಧಿಹೊಂದಿದ ದೇಶಗಳ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರೋಡಕ್ಟ) ಸಮನಾಗಿ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಮೀಸಲಿಡುತ್ತಿದೆ. ಮಕ್ಕಳ ಒತ್ತಡ ಹೇರುವ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಚಿಂತನೆ ನಡೆಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಮಾಜಿ ಸಚಿವ ಸಿ.ಎಂ ಉದಾಸಿ ಮಾತನಾಡಿ ಗುಣಮಟ್ಟದ ಶಿಕ್ಷಣದ ಸೌಭಾಗ್ಯ ನವೋದಯ ಶಾಲೆಯಲ್ಲಿದೆ. ಈ ಶಾಲೆಗೆ ಪೈಪೋಟಿ ನೀಡುವ ಶಾಲೆ ಮತ್ತೊಂದಿಲ್ಲ, ಶಾಸಕನಾಗಿದ್ದ ಅವಧಿಯಲ್ಲಿ ಒಟ್ಟು ರೂ. 21 ಲಕ್ಷ ಅನುದಾನ ಈ ಶಾಲೆಗೆ ನೀಡಿದ್ದೇನೆ. ನವೋದಯ ಶಾಲೆಯ ಶೈಕ್ಷಣಿಕ ಉನ್ನತಿಯು ಹಾವೇರಿ ಜಿಲ್ಲೆಯ ಹೆಮ್ಮೆ ಆಗುತ್ತದೆ ಎಂದರು.
ಹಿರೇಕೆರೂರ ಶಾಸಕ ಯು.ಬಿ ಬಣಕಾರ ಮಾತನಾಡಿ, ನವೋದಯ ಶಾಲೆಯಲ್ಲಿನ ಸೌಕರ್ಯ ಬಳಸಿಕೊಂಡು ವಿದ್ಯಾರ್ಥಿ ಜೀವನವನ್ನು ಸದ್ವಿನಿಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತವರ ಪಾಲಕರು ಅದೃಷ್ಟವಂತರು ಎಂದು ಅಭಿಪ್ರಾಯಪಟ್ಟರು.
ನವೋದಯ ವಿದ್ಯಾಲಯದ ಸಹಾಯಕ ಆಯುಕ್ತ ಮತ್ತು ಧಾರವಾಡ ವಲಯ ಪ್ರಭಾರಿ ವಿದ್ಯಾಲಯ ಸಮೀತಿ ಹೈದ್ರಾಬಾದ ವಿಭಾಗದ ಟಿ ಗೋಪಾಲಕೃಷ್ಣ ಮಾತನಾಡಿ, ದೇಶದ ಉತ್ತಮ ಶಾಲೆಗಳಲ್ಲಿ ಹಾವೇರಿ ಜಿಲ್ಲೆಯ ನವೋದಯ ಶಾಲೆಯೂ ಒಂದಾಗಿದೆ. ಇಲ್ಲಿ ನಿರ್ಮಾಣಗೊಂಡ ಕಲಾ ಭವನವು ಎಲ್ಲ ಶಾಲೆಗಳಿಗೆ ಮಾಗರಿಯಾಗಿದೆ. ಇಲ್ಲಿಯ ಜನಪ್ರತಿನಿದಿಗಳು ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಜೀವ ತುಂಬುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಗುದರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಲ್ಲಪ್ಪ ಅಕ್ಕಿ ವಹಿಸಿದ್ದರು, ನವೋದಯ ವಿದ್ಯಾಲಯ ಸಮೀತಿ ಹೈದ್ರಾಬಾದ ವಿಭಾಗದ ಆಯುಕ್ತ ಎ.ವೈ ರೆಡ್ಡಿ, ವಿದ್ಯಾಲಯದ ಪ್ರಾಚಾರ್ಯ ಕೆ.ರಾಮಿರೆಡ್ಡಿ, ಲೋಕೋಪಯೋಗಿ ಇಲಾಖೆಯ ಇಮಜನಿಯರ ಎಂ.ಬಿ ತುರುಮರಿ, ತಾ.ಪಂ ಸದಸ್ಯಸೋಮನಾಥ ಚೌವ್ಹಾಣ, ಗ್ರಾ.ಪಂ ಉಪಾಧ್ಯಕ್ಷ ಸೋಮಲೆಪ್ಪ ಕೊಪ್ಪದ, ಪಾಲಕರ ಸಂಘದ ಸದಸ್ಯರಾದ ಅಶೋಕ ಆರೇಗೊಪ್ಪ, ನಾಗರಾಜ ಚಂದಾಪೂರ, ಎಸ್.ವಿ ಮಠದ, ಜ್ಯೋತಿ ಜೋಶಿ, ಕೆ.ಪಿ ಬ್ಯಾಡಗಿ, ಬಸವರಾಜ ಚಿಂದಿ, ಈ .ಸಿ ಅಗಸೀಬಾಗಿಲ, ಗೀತಾ ಕುಮಾರಿ, ಮಾಲತೇಶ. ಎಸ್, ಪಿ.ಡಿ ದೊಡ್ಡಮನಿ, ನಾಗೇಶ ರೆಡ್ಡಿ, ಎನ್.ಕೆ ಪಾಟೀಲ ಹಾಗೂ ಗುತ್ತಿಗೆದಾರ ನಾಸೀರ ಎಮುಸಾಬನವರ ಇದ್ದರು.

loading...

LEAVE A REPLY

Please enter your comment!
Please enter your name here