ಸುದ್ದಿಗೊಂದು ಚುಚ್ಚು ಮಾತು

0
57

ನೋಟಿಸಿಗೆ ಉತ್ತರ ಕೊಡುವುದಿಲ್ಲ ತಾಕತ್ತಿದ್ದರೆ  ನಮ್ಮನ್ನು ವಜಾ ಮಾಡಿ  ಎಂದು ಬೆಳಗಾವಿಯ  ಮೇಯರ ಮತ್ತು ಉಪ ಮೇಯರ ಸರಕಾರಕ್ಕೆ ಸವಾಲು ಹಾಕಿದ್ದಾರೆ.

– ಸುದ್ದಿ

ಅವರಿಬ್ಬರ ಬಾಲಗಳು ಉದ್ದಾಗಿ ಬೆಳೆದಿರುವುದರಿಂದ ಸರಕಾರ ಹರಿತವಾದ ಕತ್ತರಿಯಿಂದ ಬಾಲ ಕತ್ತರಿಸುವ ಕಾರ್ಯವನ್ನು ಮಾಡಬೇಕು.

ಕಾಂಗ್ರೆಸ್ ಪಕ್ಷದ ಅಧಿನಾಯಕಿ  ಸೋನಿಯಾ ಗಾಂಧಿಯವರು ರಾಜ್ಯದ ಕೈ ಅಧಿಪತಿಯಾಗಿದ್ದ ಪರಮೇಶ್ವರ ಅವರ ಅಧಿಕಾರಕ್ಕೆ ಕತ್ತರಿ ಪ್ರಯೋಗ  ಮಾಡಿದ್ದಾರೆ.

-ಸುದ್ದಿ

ಪರಮೇಶ್ವರ ಎಂಬ ಹೆಸರಿದ್ದರೂ ಪರಮೇಶ್ವರನ ಶಕ್ತಿ ಇಲ್ಲವೆಂಬುದು ಸಾಬೀತಾಗಿದ್ದರಿಂದ ಅವರು ಈ ರೀತಿಯ ಕ್ರಮವನ್ನು ತೆಗೆದುಕೊಂಡಿರಬಹುದು.

ಶೆಟಗೊಂಡು ಕುಳಿತಿರುವ ಶ್ರೀ ರಾಮಲು ಅವರ ಗದ್ದ ತುಟಿ ಹಿಡಿಯುವ  ಕಾರ್ಯವನ್ನು  ಕಮಲದ ನಾಯಕರು ಮಾಡತೊಡಗಿದ್ದಾರೆ.

– ಸುದ್ದಿ

ರಾಮಲು ಅವರನ್ನ ಬಿಟ್ಟರೆ ಬಳ್ಳಾರಿಯಲ್ಲಿ  ಕಮಲ ಅರಳಿಸುವುದು  ಕಷ್ಟವೆಂಬ ಅರಿವು  ಕಮಲದ ಣಾಯಕರಿಗೆ  ಇರುವುದರಿಂದ ಈ ರೀತಿ ಗದ್ದ ತುಟಿ ಹಿಡಿಯುವ ಕಾರ್ಯ ನಡೆದಿದೆ.

ಸಬ್ ರಜಿಸ್ಟರ್ ಕಚೇರಿಯಲ್ಲಿ ಕಂಪ್ಯೂರಕರಣ ಮಾಡಿ ಭ್ರಷ್ಟಾಚಾರಕ್ಕೆ ತೆರೆ ಎಳೆಯಲಾಗಿದೆ ಎಂದು ಸರಕಾರ ಹೇಳುತ್ತಿದ್ದರು ಭ್ರಷ್ಟಾಚಾರ ಅಲ್ಲಿ ನಿಂತಿಲ್ಲವೆಂದು  ಜನರು ಹೇಳುತಿದ್ದಾರೆ.

-ಸುದ್ದಿ                 ಸರಕಾರ ಚಾಪೆಯ ಕೆಳಗೆ ನುಸುಳಿದರೆ ಅಧಿಕಾರಿಗಳು ರಂಗೋಲಿಯ ಕೆಳಗೆ ನುಸುಳುತ್ತಾರೆ ಎಂಬುದು ಸರಕಾರಕ್ಕೆ ಗೊತ್ತಿಲ್ಲದಿರುವಂತೆ  ಕಂಡು ಬರುತ್ತದೆ.

ಜನರಿಗೆ ಪುಕ್ಕಟೆ ಮನರಂಜನೆ ಒದಗಿಸುವ ಕಾರ್ಯವನ್ನು ಕಳೆದ ಬಾನುವಾರ ಜನಪ್ರತಿನಿಧಿಗಳು ಅಂಕಲೇ ಗ್ರಾಮದಲ್ಲಿ  ಮಾಡಿದ್ದಾರೆ.

           -ಸುದ್ದಿ

ಅಭಿವೃದ್ದಿ ಆಂಡದಿದ್ದರೂ ಮನರಂಜೆ ನೀಡಿದ ಹೆಗ್ಗಳಿಕೆಯಾದರೂ  ಇರಲಿ ಎಂದು  ಜನ ಪ್ರತಿನಿಧಿಗಳು ಈ ರೀತಿ  ಮಾಡಿರಬಹುದು.

ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ಟೊಮೆಟೋಗೆ ಒಳ್ಳೇಯ ಧಾರಣೆ ಉಂಟಾಗಿದೆ ಎಂದು ಹೇಳಲಾಗಿದೆ.

-ಸುದ್ದಿ

ಇದರಿಂದ ಟೊಮೆಟೋ ಬೆಳೆದ  ರೈತರು ಖಷಿ ಪಡುವಂತೆ ಆಗಿದೆ ಎಂದು  ಹೇಳಲಾಗಿದೆ.

ನಮ್ಮ ಮನೆತನ ಯಾರ ಕೈಕಾಲನ್ನೆ  ಹಿಡಿಯುವ ಜಾಯಮಾನವನ್ನು  ಹೊಂದಿಲ್ಲ  ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

-ಸುದ್ದಿ

ಅವರ ಮನೆತನಕ್ಕೆ ಹಣದ ಬಲ ಇರುವುದರಿಂದ  ಅವರು  ಕೈಕಾಲು  ಹಿಡಿಯುವ  ಪ್ರಸಂಗ ಉಂಟಾಗಿಲ್ಲ ಎಂಬುದು ಅವರ ಭಾವನೇ ಆಗಿರಬಹುದು.

ಜನರಲ್ಲಿ  ಇಂಗ್ಲೀಷ ಮೋಹ ಹೆಚ್ಚಾಗುತ್ತಿರುವುದರಿಂದ ಕನ್ನಡ ಭಾಷೆಗೆ ಮತ್ತು ಶಾಲೆಗಳಿಗೆ ಕುತ್ತು ಉಂಟಾಗಿದೆ.

-ಸುದ್ದಿ

ಈಗಿನ ತಂದೆ ತಾಯಿಗಳಿಗೆ ಮಕ್ಕಳಿಂದ ಮಮ್ಮಿ ಡ್ಯಾಡಿ ಎಂದು ಕರೆಡಿಕೊಂಡರೆ ಮಾತ್ರ ಅವರ ಜೀವನ ಸ್ವಾರ್ಥಕವಾಗುವುದರಿಂದ ಕನ್ನಡ ಭಾಷೆ ಮತ್ತು ಶಾಲೆಗೆ ಈ ಗತಿ ಬಂದಿದೆ.

 

 

loading...

LEAVE A REPLY

Please enter your comment!
Please enter your name here