ಸೀಮೇ ಎಣ್ಣೆಯು ಉರುಳಿ ಮನೆಗೆ ಬೆಂಕಿ: 8 ಲಕ್ಷಕ್ಕೂ ಹೆಚ್ಚು ರೂ ಹಾನಿ

0
43

ಶಿಗ್ಗಾಂವಿ: ಸೀಮೇ ಎಣ್ಣೆಯು ಉರುಳಿ ಮನೆಗೆ ಬೆಂಕಿ ತಾಗಿ ಓರ್ವ ಮಹಿಳೆಗೆ ತೀವೃ ಗಾಯಗೋಂಡು ಸುಮಾರು 8 ಲಕ್ಷಕ್ಕೂ ಹೆಚ್ಚು ರೂ ಹಾನಿಯಾದ ಘಟನೆ ತಾಲೂಕಿನ ಕುನ್ನೂರ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಕುನ್ನೂರ ಗ್ರಾಮದ ಲಕ್ಷವ್ವ ರಾಯಪ್ಪ ಸಾವಂತಣ್ಣವರ ತೀವೃ ಗಾಯಗೋಂಡು ಶಿಗ್ಗಾಂವಿ ಆಸ್ಪತ್ರೆಗೆ ಧಾಖಲಾಗಿದ್ದು ರಾಯಪ್ಪ ತಿಪ್ಪಣ್ಣಾ ಸಾವಂತಣ್ಣವರ ವಾಸೀಸುವ ಮನೆಯಲ್ಲಿಟ್ಟ 1 ಲಕ್ಷ .20 ಸಾವೀರ ರೂಪಾಯಿಗಳು ಹಾಗು 120 ಗ್ರಾಮ ಬಂಗಾರ ದಿನಬಳಕೆ ವಸ್ತುಗಳು ಹಾಗೂ ಕೃಷಿ ಚಟುವಟಿಕೆಯ ಪರೀಕರಗಳು ಸಂಪೂರ್ಣವಾಗಿ ಭಸ್ಮವಾಗಿದೆ.
ಘಟನೆ ವಿವರ : ತಾಲೂಕಿನ ಕುನ್ನೂರ ಗ್ರಾಮದ ರಾಯಪ್ಪ ತಿಪ್ಪಣ್ಣಾ ಸಾವಂತಣ್ಣವರ ಇವರು ವಾಸೀಸುವ ಮನೆಯಲ್ಲಿ ನೀರೋಲಿಗೆ ಬೆಂಕಿಯನ್ನು ಹಾಕಲಾಗಿತ್ತು ಸೀಮೇಎಣ್ಣೆ ತುಂಬಿದ ಕ್ಯಾನಲ್ಲಿದ್ದದ್ದನ್ನ್ದುಲ್ಲಿಯೇ ಇಡಲಾಗಿತ್ತು ಉರುವಲು ಕಟ್ಟಿಗೆ ಹಾಗೂ ಬಟ್ಟೆಗಳನ್ನು ಇಡಲಾಗಿತ್ತು ಸೀಮೇ ಎಣ್ಣೆಯು ಒಮ್ಮಿದೋಂಮ್ಮೆಲೆ ಸೀಮೇ ಎಣ್ಣೆ ಕ್ಯಾನ್ ಉರುಳಿದ್ದು ಮಹಿಳೆ ಸೀರೆಗೆ ಅಲ್ಲಿದ್ದ ಬಟ್ಟೆಗಳಿಗೆ ಹಾಗೂ ಉರುವಲು ಕಟ್ಟಿಗೆಗೆಗಳಿಗೆ ಬೆಂಕಿ ತಗಿಲಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಮನೇಯನ್ನು ಬೆಂಕಿ ಆವರಿಸಿತು ಗ್ರಾಮದ ಎಲ್ಲಾ ವರ್ಗದ ಜನರು ಸೇರಿ ನೀರನ್ನು ಹಾಕಿ ಮಣ್ಣನ್ನು ಉಗ್ಗಿ ಬೇಂಕಿಯನ್ನು ನಂದಿಸಲು ಮುಂದಾದರು.
ತಪ್ಪಿದ ಅನಾಹುತ: ನಾಲ್ಕು ಮನೆಗಳು ಬೆಂಕಿಗೆ ಆಹುತಿಯಾಗುವದನ್ನು ತಪ್ಪಿಸಲು ಮುಂದಾದ ಸಾರ್ವಜನಿಕರು ಬೇಂಕಿ ಹತ್ತಿದ ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರು ಕೋಡ ನೀರನ್ನು ಉಗ್ಗಿ ಮಣ್ಣು ಉಗ್ಗಿ ಆರಿಸಲು ಮುಂದಾಗಿದ್ದೆ ಮೂರು ಮನೆಗಳು ಬೇಂಕಿಯಿಂದ ಪಾರಾಯಿತು ಎಂದು ಪ್ರತ್ಯೆಕ್ಷದಾರರು ಹೇಳಿದರು. ಸ್ಥಳದಲ್ಲಿ ಎಪಿಎಸಿ ಮಾಜಿ ಅಧ್ಯಕ್ಷ ಬಿ.ಎಂ.ಪಾಟೀಲ, ತಾಲೂಕ ಪಂಚಾಯತ ಸದಸ್ಯ ಮಲ್ಲೇಶಪ್ಪ ಹರಿಜನ, ಗ್ರಾ.ಪಂ.ಸದಸ್ಯರಾದ ನೀಲಕಂಠಗೌಡ ಬ್ಯಾಹಟ್ಟಿ, ಸುರೇಶಗೌಡ ಪಾಟೀಲ, ಸೇರಿದಂತೆ ಗ್ರಾಮದ ಎಲ್ಲಾ ವರ್ಗದ ಜನರು ಬೇಂಕಿನ್ನು ನಂದಿಸಲು ಮುಂದಾದರು.
ಬೆಂಕಿ ನಂದಿಸಿದ ನಂತರ ಬಂದ ಅಗ್ನಿ ಶಾಮಕ ವಾಹನ: ಅಗ್ನಿ ಶಾಮಕ ದಳದ ವಾಹನಕ್ಕೆ ಸಾಕಷ್ಟು ಸಲ ದೂರವಾಣಿ ಮಾಡಿದರೂ ಒಂದು ಮನೆಯೂ ಸಂಪೂರ್ಣವಾಗಿ ಭಸ್ಮವಾದ ನಂತರ ಬಂದಿತು ಬೆಂಕಿ ಬಿದ್ದ ತಕ್ಷಣವಾಗಿ ದೂರವಾಣಿ ಮಾಡಿದ್ದರೂ ಸುಟ್ಟು ಭಸ್ಮವಾದ ಮೇಲೆ ಬಂದಿದ್ದಕ್ಕೆ ಗ್ರಾಮಸ್ಥರು ಅಕ್ರೋಶವನ್ನು ವ್ಯಕ್ತಪಡಿಸಿದರು ಆದರೆ ಈ ರೀಯಾಗದಂತೆ ಅಗ್ನಿ ಶಾಮಕ ದಳದ ಅಧಿಕಾರಿಗಳು ಮಾಡದಂತೆ ಕ್ರಮವನ್ನು ವಹಿಸಬೇಕು ಎಂದು ಆಗ್ರಹವನ್ನು ಕೂಡಾ ವ್ಯಕ್ತಪಡಿಸಿದರು.
ಪರಿಹಾರಕ್ಕೆ ಆಗ್ರಹ: ಆಕಸ್ಮೀಕ ಬೇಂಕಿಯಿಂದ ಹಾನಿಗೋಳಗಾದ ಬಡ ಕುಟುಂಬಕ್ಕೆ ತೀವೃವಾಗಿ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಗ್ರಾಮದ ಮುಖಂಡರಾದ ಎಲ್ ಆರ್ ಪಾಟೀಲ, ಗ್ರಾಪಂ ಸದಸ್ಯರಾದ ರಾಮಣ್ಣಾ ಇಂದೂರ, ಸೋಮಯ್ಯ ಹಿರೇಮಠ, ರೈಮನ್‍ಸಾಬ ಮುಲ್ಲಾ ಸೇರಿದಂತೆ ಹಲವಾರು ಗಣ್ಯರು ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here