ಧಾರವಾಡ ಶಿಕ್ಷಣದ ಕಾಶಿಯಾಗಲು ಶ್ರಮಿಸೋಣ- ನಾಗೂರ

0
62

ನವಲಗುಂದ – ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ಒದಗಿಸಬೇಕು ಅದರಲ್ಲಿ ಮುಖ್ಯವಾದ ವಿಷಯಗಳು ಗಣಿತ, ಇಂಗ್ಲೀಷ, ವಿಜ್ಞಾನ, ವಿಷಯಗಳ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವಿಶೇಷ ಪಾಠ ಬೋದನೆ ಮಾಡಬೇಕು. ಎಲ್ಲ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯಬೇಕು. ಜೋತಗೆ ಜ್ಞಾನದ ಹಸಿವು ನಿರಂತರ ಮಾನವ ಜನ್ಮಕ್ಕೆ ಈ ಹಸಿವು ಹೆಚ್ಚಿದಷ್ಟು ಜೀವನ ಅರ್ಥಪೂರ್ಣವಾಗುತ್ತದೆ. ಅಲ್ಲದೆ ನಿಜ ಅರ್ಥದಲ್ಲಿ ಧಾರವಾಡ ಜಿಲ್ಲೆಯನ್ನು ಶಿಕ್ಷಣದ ಕಾಶಿಯಾಗಲು ಶ್ರಮಿಸೋಣ. ಈ ಕಾರ್ಯಾಗಾರ ಅದಕ್ಕೆ ಮೊದಲ ಮೆಟ್ಟಿಲಾಗಲೆಂದು ಡಿ.ಡಿ.ಪಿ.ಆಯ್ ಎನ್.ಎಚ್.ನಾಗೂರ ತಿಳಿಸಿದರು.
ನಗರದ ಎಮ್.ಇ.ಬಿ. ಪ್ರೌಢಶಾಲೆಯಲ್ಲಿ ನಡೆದ ನವಲಗುಂದ ತಾಲೂಕಿನ 9ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ಎಸ್.ಸಿ, ಎಸ್.ಟಿ ಹಾಗೂ ಓ.ಬಿ.ಸಿ ವರ್ಗದ ಮಕ್ಕಲಿ ವಿಶೇಷ ಬೋಧನೆ ಕಾರ್ಯಗಾರ್ಯಕ್ಕೆ ಭೇಟಿ ನೀಡಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರಿ, ಬಿ.ವಾಯ್. ತೊಗರಿ, ಪಿ.ಎಚ್. ದೇಶಪಾಂಡೆ, ಎಸ್.ಎಸ್. ಪಾಟೀಲ್, ಆರ್ ಬಾಗೋಜಿ, ಎಸ್.ವಿ. ಬದಾಮಿ. ಪವಾಡಶೆಟ್ಟರ, ಮೆಣಸಿಕಾಯಿ, ಮಾಕ್ಕಣ್ಣವರ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here