ಹಿರಿಯ ನಾಗರಿಕರ ಸೇವೆ ಪ್ರತ್ಯಕ್ಷ ದೇವರ ದರ್ಶನವಿದ್ದಂತೆ: ಕುಲಕರ್ಣಿ

0
67

ನರೇಗಲ್ಲ : ಸಮಾಜದಲ್ಲಿ ಕಣ್ಣಿಗೆ ನೇರವಾಗಿ ಕಾಣುವ ಹಿರಿಯ ನಾಗರಿಕರ ಸೇವೆಯನ್ನು ಮಾಡುವುದು ಪ್ರತ್ಯಕ್ಷ ದೇವರ ಸೇವೆಯನ್ನು ಮಾಡಿದಂತೆ ಎಂದು ಹಾಲಕೆರೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ ಮಲ್ಲಿಕಾರ್ಜುನ ಕುಲಕರ್ಣಿ ಹೇಳಿದರು.

ಸಮಿಪದ ಹಾಲಕೆರಿಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‍ನಲ್ಲಿ ಆಯೋಜಿಸಿದ್ದ ವಿಶ್ವ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನುದ್ದೇಸಿಶಿ ಮಾತನಾಡಿ ಬಾಲ್ಯ, ಯವೌನ. ಮುಪ್ಪು ಎನ್ನುವುದು ಪ್ರತಿಯೊಬ್ಬ ಜೀವಿಯ ಮೂರು ಹಂತಗಳಾಗಿದ್ದು ಮೊದಲೆರಡು ಹಂತಗಳನ್ನು ಸುಕಮಯವಾಗಿರುತ್ತದೆ. ಮುಪ್ಪು ಜೀವನ ಮಾತ್ರ ಕಷ್ಟಕರವಾಗಿರುತ್ತದೆ. ಸಮಾಜದಲ್ಲಿ ವೃದ್ಧರನ್ನು ಹಿರಿಯ ನಾಗರಿಕರನ್ನು ವೃದ್ದಾಶ್ರಮಕ್ಕೆ ಸೇರಿಸುವದು ಅತ್ಯಂತ ಹೀನಾಯ ಸಂಗತಿಯಾಗಿದ್ದು ಅದು ಮನುಕುಲಕ್ಕೆ ಮಾರಕವಾಗಿದೆ. ಇಂದಿನ ಯುವ ಪೀಳಿಗೆ ತಮ್ಮ ಮನೆಯಲ್ಲಿನ ಗುರು ಹಿರಿಯರಿಗೆ ಗಣ್ಯ ನಾಗರಿಕರಿಗೆ ಗೌರವಯುತವಾಗಿ ನಡೆದುಕೊಂಡು ನಮ್ಮ ದೇಶದ ಸಂಸ್ಕಾರಯುತ ಜೀವನ ಸಾಗಿಸುವಂತಾಗಬೇಕು ಎಂದು ತಿಳಿಸಿದರು.
ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪರಸ್ಕøತ ಸಿದ್ದಲಿಂಗಯ್ಯ ಸೊಪ್ಪಿಹಿರೇಮಠ ಮಾತನಾಡಿ ಬ್ಯಾಂಕಿನ ಶಾಖಾಧಿಕಾರಿಗಳು ನಮ್ಮಂತ ಹಿರಿಯ ನಾಗರಿಕರನ್ನು ಸನ್ಮಾನಿಸಿ ಪ್ರೊತ್ಸಾಹಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ ಮತ್ತು ಈ ಕಾಲಚಕ್ರದಲ್ಲಿ ಮನುಷ್ಯನಿಗೆ ಯೌವನದ ನಂತರ ಮುಪ್ಪು ಬರುವುದು ಖಚಿತ ಆದರೆ ಯೌವನದ ವಯಸ್ಸಿನಲ್ಲಿ ನಾವು ಹಿರಿಯ ನಾಗರಿಕರನ್ನು ಗೌರವದಿಂದು ಕಂಡು ಅವರ ಸೇವೆಯನ್ನು ನಿಸ್ವಾರ್ಥ ಭಾವನೆಯಿಂದ ಮಾಡಿದರೆ ಮುಂದೆ ನಮ್ಮ ಮುಪ್ಪಿನ ವಯಸ್ಸಿನಲ್ಲಿ ಮುಂಬರುವ ನಮ್ಮ ಮಕ್ಕಳು ನಮ್ಮನ್ನು ಸೇವಾಭಾವನೆಯಿಂದ ಗೌರವಿತವಾಗಿ ನೊಡಿಕೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ವಿರೇಶ ದೇಸಾಯಪಟ್ಟಿ ಬ್ಯಾಂಕಿನ ಎಲ್ಲಾ ಯೋಜನೆಗಳನ್ನು ವಿವರವಾಗಿ ತಿಳಿಸುವದರ ಜೊತೆಗೆ ಬ್ಯಾಂಕಿನ ಉಳಿತಾಯ ಮಾಡುವದು, ಸಾಲವನ್ನು ಸಕಾಲದಲ್ಲಿ ಪಾವತಿಸುವ ಕುರಿತು ಬ್ಯಾಂಕಿನ ಪ್ರಗತಿಗೆ ಸಹಕರಿಸಲು ವಿನಂತಿಸಿದರು. ಹಿರಿಯ ನಾಗರಿಕ ವೀರಣ್ಣ ಹಳ್ಳಿ ಹಾಗೂ ಬ್ಯಾಂಕ ಸಿಬ್ಬಂದಿ ಉಪಸ್ತತರಿದ್ದರು. ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ, ಶಿವಪ್ಪ ಬುರುಡಿ, ದೇವಮ್ಮ ಪಾಟೀಲ, ಶ್ರೀಮತಿ ಹುನಗುಂದ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

loading...

LEAVE A REPLY

Please enter your comment!
Please enter your name here