ಆಯುಷ ಮನೆಮದ್ದು ಕಾರ್ಯಾಗಾರ

0
133

ಕನ್ನಡಮ್ಮ ಸುದ್ದಿ-ಯಲ್ಲಾಪುರ : ಮನೆಮದ್ದು ನಮ್ಮ ನಿತ್ಯ ಜೀವನದಲ್ಲಿ£ ಪ್ರಾಮುಖ್ಯತೆಯನ್ನು ಪಡೆದಿದೆ., ಅಡುಗೆ ಮನೆಯಲ್ಲಿ ಉಪಯೋಗಿಸುವಂತಹ ಜೀರಿಗೆ,ಸಾಸಿವೆ,ಅರಿಸಿಣ,ಶುಂಠಿ , ಬೊಳಕಾಳು ಇನ್ನೊ ಹಲವಾರು ಪದಾರ್ಥಗಳು ಹಾಗೂ ಮನೆಅಂಗಳದಲ್ಲಿ ಬೇಳಸಬಹುದಾದಂತಹ ತುಳಸಿ,ಮೆಂತೆ,ಲೋಳೆಸರ,ದಾಸವಾಳ,ಕೊತ್ತಂಬರಿ,ಒಂದೆಲಗ,ಅಂಬೃತಬಳ್ಳಿ ಇತ್ಯಾದಿ ಸಸ್ಯಗಳ ಔಷಧೀಯ ಗುಣಗಳಿಂದ ತುರ್ತು ಸಂದರ್ಭದಲ್ಲಿ ವಿವಿದ ಖಾಯಿಲೆ ಗಳಿಗೆ ಜನಸಾಮಾನ್ಯರು ಯಾವರಿತಿ ಪ್ರಯೋಗಿಸಬಹುದು ಎಂಬುವುದನ್ನುಉಮ್ಮಚಗಿ ಸರಕಾರಿ ಆರ್ಯುವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗ ಡಾ. ಯೋಗೇಶ ಮಡಗಾಂವ ತಿಳಿಸಿದರು. ಹಾಗೂ ಪ್ರತಿಯೋಬ್ಬರೊ ಕನಿಷ್ಟ ಹತ್ತು ಔಷಧಿ ಸಸ್ಯಗಳನ್ನಾದರು ಮನೆಅಂಗಳದಲ್ಲಿ ಬೇಳಸಬೆಕೆಂದರು. ಅವರು ಜಿಲ್ಲಾ ಪಂಚಾಯತ ಆಯುಷ ಇಲಾಖೆ ಪರಿಶಿಷ್ಠ ಪಂಗಡ ಫಲಾನುಭವಿಗಳ ಯೋಜನೆಯಡಿಯಲ್ಲಿ , ಸರಕಾರಿ ಆರ್ಯುವೇದ ಚಿಕಿತ್ಸಾಲಯ, ,ಉಮ್ಮಚಗಿಗ್ರಾಮ ಪಂಚಾಯತ ಸಹಯೋಗದೊಂದಿಗೆ ತಾಲೂಕಿನ ಸಿಧ್ಧಿ ಸಮುದಾಯ ಭವನ ನಂದಿಬಾವಿ(ತೋಟಗಟ್ಟು) ದಲ್ಲಿ ಹಮ್ಮಿಕೊಳ್ಳಲಾದ ಆಯುಷ ಮನೆಮದ್ದು ಕಾರ್ಯಾಗಾರದಲ್ಲಿ ಮಾತನಾಡಿದರು.ಹಿತ್ಲಳ್ಳಿ ಆರ್ಯುವೇದ ಚಿಕಿತ್ಸಾಲಯ ಡಾ. ಮಂಜುನಾಥ ಭಟ್ಟ ಇವರು ಎಡ್ಸ್ ,ಚಿಕನಗೊನ್ಯಾ,ಹಾಗೂ ಡೆಂಗ್ಯೊ,ಇಂತಹ ಹಲವಾರು ಗಂಭೀರ ಖಾಯಿಲೆಯನ್ನು ನಿತ್ಯಮನೆಮದ್ದುವಿನ ಪ್ರಯೋಗದಿಂದ ಖಾಯಿಲೆಯ ಗಂಭೀರತೆಯನ್ನು ಹತೋಟಿಯಲ್ಲಿಡಲು ಸಹಕಾರಿ ಎಂದರು.
ಮಾಜಿ ಎ.ಪಿ.ಎಮ್.ಸಿ ಸದಸ್ಯ ನಾರಾಯಣ ಸಿದ್ದಿ ಉದ್ಘಾಟಿಸಿದರು. ಗ್ರಾಮ ಪಂಚಾಯತ ಸದಸ್ಯೆತ್ರಿವೇಣಿ ಎನ್ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ದಾಂಡೇಲಿ ಗ್ರೀನ ಇಂಡಿಯಾ ಟ್ರಸ್ಟಸಿದ್ದಿ ಸಂಘಟನಾ ಕಾರ್ಯದರ್ಶಿ ಸೋಮ ಹಾಗೂಲ್ಯಾಮ್ ಸೊಸೈಟಿ ಕಾರ್ಯದರ್ಶಿ ರಾಮಚಂದ್ರ ಸಿದ್ದಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಫಲಾನಭವಿಗಳಿಗೆ ವಿವಿಧ ಔಷಧಿ ಸಸ್ಯಗಳನ್ನು ವಿತರಿಸಲಾಯಿತು

loading...

LEAVE A REPLY

Please enter your comment!
Please enter your name here