ಪೊಲೀಸ್ ಬಂದೋಬಸ್ತ್‍ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

0
43

ಕನ್ನಡಮ್ಮ ಸುದ್ದಿ-ಶಿರಸಿ : ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ತಾಲೂಕಾಡಳಿತದಿಂದ ತಹಶೀಲ್ದಾರ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ನಿಷೇಧಾಜ್ಞೆ ಜಾರಿಯಲ್ಲಿದ್ದ ಪರಿಣಾಮ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಮಾತನಾಡಿ, ಟಿಪ್ಪು ಸುಲ್ತಾನ ದೇಶದ ಸ್ವಾಭಿಮಾನದ ಸಂಕೇತ. 15ನೇ ವಯಸ್ಸಿಗೆ ಯುದ್ಧಭೂಮಿಗೆ ಧುಮಿಕಿದ ವೀರ ಟಿಪ್ಪು ಸುಲ್ತಾನ ಸಾಮ್ರಾಜ್ಯದ ಜೊತೆಗೆ ಆಡಳಿತದ ಬಗ್ಗೆಯೂ ಗಮನ ನೀಡುತ್ತಿದ್ದ. ಸ್ವಂತ ಲೈಬ್ರರಿಯಲ್ಲಿ 2000 ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡು ಓದುತ್ತಿದ್ದ ಎಂದು ದಾಖಲೆ ಹೇಳುತ್ತವೆ. ಸಾಮ್ರಾಜ್ಯದ ಜೊತೆಗೆ ಜನರ ಹಾಗೂ ಆಡಳಿತದ ಹಿತದೃಷ್ಟಿ ಇಟ್ಟುಕೊಂಡು ಹೋರಾಡುತ್ತಿದ್ದ ಅಶೋಕ ಹಾಗೂ ಅಕ್ಬರರಂತೆ ಟಿಪ್ಪು ಸುಲ್ತಾನ ಕೂಡ ಮಹಾನ್ ರಾಜಾನಾಗಿದ್ದ ಎಂದರು. ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಜಿ.ಪಂ. ಸದಸ್ಯ ಬಸವರಾಜ ದೊಡ್ಮನಿ, ಡಿವೈಎಸ್‍ಪಿ ನಾಗೇಶ ಶೆಟ್ಟಿ, ಪ್ರಮುಖರಾದ ಅಬ್ಬಾಸ್ ತೋನ್ಸೆ, ಎಚ್.ಯು.ಪಠಾಣ್, ಖಾದರ ಆನವಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಹಶೀಲ್ದಾರ ಬಸಪ್ಪ ಪೂಜಾರಿ ಸ್ವಾಗತಿಸಿದರು. ಅಶೋಕ ದಾಸರಿ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here