ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

0
38

ಕನ್ನಡಮ್ಮ ಸುದ್ದಿ-ಕಾರವಾರ : ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಡಿಸೆಂಬರ್ 2 ರಂದು ಜಿಲ್ಲೆಗೆ ಆಗಮಿಸುವರು.
ಅವರು ಅಂದು ರಾತ್ರಿ 7.30 ಗಂಟೆಗೆ ಹಳಿಯಾಳಗೆ ಆಗಮಿಸಿ ವಾಸ್ತವ್ಯ ಹೂಡುವರು. ಡಿಸೆಂಬರ್ .3 ರಂದು ರಂದು ಬೆಳಿಗ್ಗೆ 9 ಗಂಟೆಗೆ ಹಳಿಯಾಳ ಕಿಲ್ಲಾ ಪ್ರವಾಸಿ ಮಂದಿರ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಎಲ್.ಪಿ.ಜಿ.ಗ್ಯಾಸ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಕಂದಾಯ ಇಲಾಖೆಯಿಂದ ಅತಿಕ್ರಮಣದಾರರಿಗೆ ಪಟ್ಟಾ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11 ಗಂಟೆಗೆ ತತ್ವಣಗಿಯಲ್ಲಿ ಎಸ್.ಟಿ. ಕಾಲೋನಿಯಲ್ಲಿ ಮಂಜೂರಿಯಾದ ಕಾಮಗಾರಿಗಳಿಗೆ ಚಾಲನೆ ನೀಡುವರು. ಮ.12 ಗಂ ನಾಗಶೆಟ್ಟಿಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿದ ಪಶುಚಿಕಿತ್ಸಾಲಯದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವರು. ಹಳಿಯಾಳದಲ್ಲಿ ಸಂಜೆ ವಾಸ್ತವ್ಯ ಹೂಡುವರು.ಡಿಸೆಂಬರ್ 4 ರಂದು ಬೆಳಿಗ್ಗೆ 10 ಗಂಟೆಗೆ ಎಮ್.ಆರ್.ಪಿ.ಎಲ್. ಕಂಪನಿಯ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ಹಳಿಯಾಳ ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಿಸಿದ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ 11 ಗಂಟೆಗೆ ಹಳಿಯಾಳದಿಂದ ದಾಂಡೇಲಿಗೆ ನಿರ್ಗಮಿಸುವರು. ಬೆಳಿಗ್ಗೆ 11.30 ಗಂ ದಾಂಡೇಲಿಯ ಯು.ಕೆ.ಸೌಹಾರ್ದ ಸಹಕಾರಿ ಸೊಸೈಟಿ ದಾಂಡೇಲಿ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮದ್ಯಾಹ್ನ 12.15 ಕ್ಕೆ ಆಲೂರುನಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಮಂಜೂರಾದ ಆಶ್ರಯ ಪಟ್ಟಾ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಹಾಗೂ ನೂತನವಾಗಿ ನಿರ್ಮಾಣವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮದ್ಯಾಹ್ನ 2 ಗಂಟೆಗೆ ಕೇರವಾಡದಲ್ಲಿ ನೂತನವಾಗಿ ನಿರ್ಮಾಣವಾದ ಗ್ರೇ ಬೋರ್ಡ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. 2.15 ಕ್ಕೆ ಕೇರವಾಡದಿಂದ ನಿರ್ಗಮಿಸುವರು. ಮದ್ಯಾಹ್ನ 3.30 ಗಂ ಕುಂಬರವಾಡಾಗೆ ಆಗಮಿಸಿ ಶಾಂಡಿಲ್ಯ ಮಹಾರಾಜರ ಮಂದಿರಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಚಾಲನೆ ನೀಡುವರು ಹಾಗೂ ನೂತನವಾಗಿ ನಿರ್ಮಿಸಿದ ಪಶು ಚಿಕಿತ್ಸಾಲಯ ಕಟ್ಟಡ ಉದ್ಘಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30 ಕ್ಕೆ ಕುಂಬರವಾಡದಿಂದ ನಿರ್ಗಮಿಸುವರು ಸಂಜೆ 5 ಗಂಟೆಗೆ ಜೋಯಿಡಾ ಆಗಮಿಸಿ ಜೋಯಿಡಾ ಉತ್ಸವ ಅಂಗವಾಗಿ ನಡೆಯುವ ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವರು. ಹಾಗೂ ಶ್ರೀರಾಮ ಪ್ರೌಡಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 6.30 ಗಂ ಜೋಯಿಡಾ ಉತ್ಸವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಸಂಜೆ 7.30ಕ್ಕೆ ಜೋಯಿಡಾದಿಂದ ಹುಬ್ಬಳ್ಳಿಗೆ ನಿರ್ಗಮಿಸುವರು.

loading...

LEAVE A REPLY

Please enter your comment!
Please enter your name here