ಜೇನು ಸಾಕಾಣಿಕೆ ತರಬೇತಿ

0
384

ಕನ್ನಡಮ್ಮ ಸುದ್ದಿ-ಯಲ್ಲಾಪುರ : ನಮ್ಮ ದೇಶದ ಜೇನು ತಳಿಗಳಲ್ಲಿ ಹೆಜ್ಜೇನು, ಕೋಲುಜೇನು, ಮಿಶ್ರಿಜೇನು, ತುಡವೆ ಜೇನು ಹೀಗೆ ನಾಲ್ಕು ತಳಿಗಳಿವೆ. ಹೆಜ್ಜೇನು, ಕೋಲುಜೇನು ಸಾಕಾಣಿಕೆ ಮಾಡಲು ಬರುವುದಿಲ್ಲ. ಇದನ್ನು ಸಂರಕ್ಷಣೆ ಮಾಡಿಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಜೇನಿನ ತುಪ್ಪದ ಭಾಗವನ್ನು ಮಾತ್ರ ತೆಗೆದು ಮರಿಗಳನ್ನು ಹಾಗೆಯೇ ಬಿಡಬೇಕು. ಈ ಪದ್ಧತಿ ಕೊಯ್ಲು ಮಾಡುವುದರಿಂದ ಹೆಜ್ಜೇನು ಸಂತತಿ ವೃದ್ಧಿಸುತ್ತಾ ಹೋಗುತ್ತದೆ. ಈ ವರ್ಷ ಒಂದು ತುಡವೆ ಜೇನು ಕುಟುಂಬವನ್ನು ಸಾಕಾಣಿಕೆ ಮಾಡಿದರೆ ವರ್ಷ ಕಳೆದಂತೆ ತುಡವೆ ಜೇನು ಸಂತತಿ ವೃದ್ಧಿಸುತ್ತಾ ಹೋಗುತ್ತದೆ ಎಂದು ಯಲ್ಲಾಪುರದ ಹೆಜ್ಜೇನು ತಜ್ಞ ರಾಮಾ ಮರಾಠಿ ಹೇಳಿದರು. ಅವರು ಕೃಷಿ ವಿಶ್ವವಿದ್ಯಾಲಯ ಧಾರವಾಡ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿ£ ಹನುಮನಮಟ್ಟಿ ಕೃಷಿ ವಿಜ್ಞಾನಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆದ ಜೇನು ಸಾಕಾಣಿಕೆ ತರಬೇತಿಯಲ್ಲಿ ರೈತರಿಗೆ ತರಬೇತಿ ನೀಡಿ ಮಾತನಾಡಿದರು. ಸುಸ್ಥಿರ ಹೆಜ್ಜೇನು ಕೊಯ್ಲು ಸಹಾಯಕ ಆರ್.ಜಿ.ಭಟ್ಟ ಬೆಳಸೂರು ಮಾತನಾಡಿ ಜೇನುತುಪ್ಪ ಔಷಧಿಯ ಗುಣ ಹೊಂದಿದ್ದು ಆಹಾರವೂ ಹೌದು. ತುಡವೆ ಜೇನು ಸಾಕಾಣಿಕೆ ಕೃಷಿಗೆ ಪೂರಕ ಉದ್ಯೋಗವಾಗಿದೆ. . ಕೃಷಿಕರು ಬೆಳೆಯುವ ಆಹಾರದ ಬೆಳೆ, ಹಣ್ಣಿನ ಬೆಳೆ, ತರಕಾರಿ ಬೆಳೆ, ತೋಟಗಾರಿಕೆ ಬೆಳೆ ಹಾಗೂ ಅರಣ್ಯದ ಕಿರುಉತ್ಪನ್ನಗಳು. ತುಡವೆಜೇನು ಹುಳುಗಳ ಪರಾಗಸ್ಪರ್ಶದಿಂದ ಅತ್ಯುತ್ತಮವಾದ ಬೆಳೆ ಸಿಗುತ್ತದೆ. ಕೃಷಿ ಪ್ರದಾನವಾದ ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ತುಡವೆಜೇನು ಸಾಕಾಣಿಕೆ ಉಪ ಕಸುಬಾಗಿ ನಡೆಸಿಕೊಂಡು ಬಂದಿರುತ್ತಾರೆ. ಈ ಸಂತತಿಯನ್ನು ಊಳಿಸಿ, ಬೆಳೆಸಿ, ಮುಂದಿನ ಸಂತತಿಗೆ ತಿಳಿಸಿ ಕೊಡುವ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಕಾರ್ಯಕ್ರಮದ ಸಂಯೋಜಕಿ ಡಾ. ಯಶಸ್ವಿನಿ ಶರ್ಮಾ ಸ್ವಾಗತಿಸಿ ವಂದಿಸಿದರು. ಈ ತರಬೇತಿಯಲ್ಲಿ ಹಾವೇರಿ ಜಿಲ್ಲೆಯ 30 ಕ್ಕೂ ಹೆಚ್ಚು ಜನ ರೈತರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here