ಉತ್ತಮ ಕಾರ್ಯಗಳ ಮೂಲಕ ಗುರುತಿಸಿಕೊಳ್ಳಬೇಕು : ಮಂಜುನಾಥ

0
56

ಅಂಕೋಲಾ : ಹಲವು ಜೀವಿಗಳ ನಂತರ ಮಾನವನಾಗಿ ಜನಿಸುತ್ತಾರೆ ಎಂಬ ಮಾತಿದೆ. ಇಂತಹ ಪವಿತ್ರ ಜನ್ಮದಲ್ಲಿ ನಾವು ಒಳ್ಳೆಯ ಕಾರ್ಯವನ್ನು ಮಾಡಬೇಕು. ಅದರ ಹೊರತಾಗಿ ಉಪದ್ರವಿಗಳಾದರೆ ಈ ಪ್ರಕೃತಿಯೂ ಕೂಡ ನಮ್ಮನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸಾಮಾಜಿ ಕಾರ್ಯಕರ್ತ ಮಂಜುನಾಥ ಪ್ರಭು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೋಳೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಲೇಖಕ ವಿಠ್ಠಲ ವಿ. ಗಾಂವಕರ ಅವರ ‘ಶಬ್ಧ ಕಾವ್ಯ’ ಚೌಪದಿಗಳ ಸಂಗ್ರಹ ಮತ್ತು ‘ಗಾದೆಗಳ ಗುಡಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಸುಮಾರು 30 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ವಿಠ್ಠಲ ಗಾಂವಕರ ಅವರು ತಮ್ಮದೇ ಆದ ಬರವಣಿಗೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಇವರು ಉದ್ಯೋಗದ ನಿಮಿತ್ತ ಉಡುಪಿಯಲ್ಲಿ ಹೆಚ್ಚು ವರ್ಷ ಕಳೆದಿದ್ದರಿಂದಾಗಿ ಅಲ್ಲಿ ಇವರ ಹೆಸರು ಚಿರಪರಿ ಚಿತವಾಗಿದೆ. ಮುಂದೆಯೂ ಕೂಡ ಇವರಿಂದ ಇನ್ನಷ್ಟು ಮಹತ್ವದ ಕೃತಿಗಳು ಹೊರಬರಲಿ ಎಂದರು.

ಈ ಸಂದರ್ಭದಲ್ಲಿ ಜಿ.ಪ.ಮಾಜಿ ಅಧ್ಯಕ್ಷ ರಮಾನಂದ ಬಿ. ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಅರವಿಂದ ಎಂ.ನಾಯಕ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಪ್ರಕಾಶ ನಾಯಕ ಮಾತ ನಾಡಿದರು. ಶಿಕ್ಷಕ ಗೌರೀಶ ನಾಯಕ ಪ್ರಾರ್ಥಿಸಿದರು. ಲೇಖಕ ವಿಠ್ಠಲ ಗಾಂವಕರ ಸ್ವಾಗತಿಸಿದರು. ಮನೋಹರ ನಾಯಕ ನಿರ್ವಹಿಸಿದರು. ಮಹಾಂತೇಶ ರೇವಡಿ ವಂದಿಸಿದರು.

loading...

LEAVE A REPLY

Please enter your comment!
Please enter your name here