ಕಾರ್ತಿಕ ನಾಯ್ಕ ಅವಿರೋಧ ಆಯ್ಕೆ

0
38

ಅಂಕೋಲಾ : 2017-2018 ಮತ್ತು 19ನೇ ಸಾಲಿನ 2 ವರ್ಷದ ಅವಧಿಗೆ ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಎಮ್‌ ಗಾಂವಕರ ಹೆಗ್ಗಾರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ ಎಸ್‌. ನಾಯ್ಕ, ಲಕ್ಷ್ಮೇಶ್ವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯತ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕಾ ಮಟ್ಟದ ಯುವಜನ ಮೇಳ ಸಂಘಟನೆ ಮತ್ತು ಯುವ ಒಕ್ಕೂಟದ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಹತ್ತಾರು ವರ್ಷಗಳಿಂದ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಯುವಜನ ಮೇಳ ಸೇರಿದಂತೆ ಇತರೆಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಉತ್ತಮ ಕೃಷಿಕರಾಗಿ ಗುರುತಿಸಿ ಕೊಂಡಿರುವ ಹೆಗ್ಗಾರ ರಾಘವೇಂದ್ರ ಎಮ್‌. ಗಾಂವಕರ ಪ್ರಸ್ತುತ ಅರುಣೋದಯ ಯುವಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತನ್ನ ಶಾಲಾ ದಿನಗಳಿಂದಲೂ ಕ್ರೀಡೆಯ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡು ಪ್ರಸ್ತುತ ಚಿನ್ನದಗರಿ ಯುವಕ ಸಂಘದ ಹತ್ತಾರು ವಿಧಾಯಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದು ವೈಯಕ್ತಿಕ ಜಿಲ್ಲಾ ಯುವ ಪ್ರಶಸ್ತಿ ಮತ್ತು ಸಾಂಘಿಕ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಕಾರ್ತಿಕ ಎಸ್‌. ನಾಯ್ಕ, ಲಕ್ಷ್ಮೇಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ತಿಕ ನಾಯ್ಕರವರು ಸುಗ್ಗಿ, ಧಾರ್ಮಿಕ ಕಾರ್ಯಗಳಲ್ಲಿ ಮಂಚೂಣಿ ಯಲ್ಲಿದ್ದು ವಂದಿಗೆ ಗ್ರಾಮ ಪಂಚಾಯತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಗೌರವಾಧ್ಯಕ್ಷರಾಗಿ ಸಂದೀಪ ಬಂಟ ಕೇಣಿ, ಉಪಾಧ್ಯಕ್ಷರಾಗಿ ಪ್ರಭಾಕರ ಕೋಟೆಮನೆ ಕಲ್ಲೇಶ್ವರ, ರಮೇಶ ಗೌಡ ಶಿರೂರ, ರಾಘವೇಂದ್ರ ಶೆಟ್ಟಿ ಕನಸಿಗದ್ದೆ, ಗಣಪತಿ ಗೌಡ ಬೈಲಕೇರಿ ಮತ್ತು ಕೋಶಾಧ್ಯಕ್ಷರಾಗಿ ನಾಗರಾಜ ಮಂಜುಗುಣಿ, ಸಹಕಾರ್ಯದರ್ಶಿಯಾಗಿ ವೈಭವ ನಾಯ್ಕ ವಾಸರೆ, ಮತ್ತು ಸಂತೋಷ ಪೇಡ್ನೇಕರ ಹಳ್ಳವಳ್ಳಿ ಸಂಘಟನಾ ಕಾರ್ಯದರ್ಶಿಯಾಗಿ ಹರೀಶ ನಾಯಕ ಅಗ್ರಗೋಣ, ನಾರಾಯಣ ಗಾಂವಕರ ಕನಕಹಳ್ಳಿ, ಸತೀಶ ನಾಯಕ ಬೊಮ್ಮಿಗುಡಿ, ಮಹಿಳಾ ಪ್ರತಿನಿಧಿಯಾಗಿ ಭವ್ಯ ಹಳ್ಳೇರ ಕುಂಟಕಣಿ ಮತ್ತಿತರರು ಆಯ್ಕೆ ಯಾಗಿದ್ದಾರೆ.

ತಾ.ಪಂ.ಅಧ್ಯಕ್ಷೆ ಸುಜಾತಾ ಗಾಂವಕರ, ಉಪಾಧ್ಯಕ್ಷೆ ತುಳಸಿ ಸುಕ್ರು ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಯ ಗೋಳಿಕಟ್ಟೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿ.ಎನ್‌.ಮಹಾಲೆ, ತಾ.ಪಂ. ಜನಪ್ರತಿನಿಧಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕಿನ ವಿವಿಧ ಯುವಕ ಮಂಡಳದ ಪದಾಧಿಕಾರಿಗಳು ಸೇರಿದಂತೆ ತಾಲೂಕು ಯುವ ಒಕ್ಕೂಟದ ಗೌರವಾಧ್ಯಕ್ಷ ವಿಲಾಸ ನಾಯಕ (ಪುಟ್ಟು) ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here