ಸಾಹಿತಿ ಡಾ. ಹೆಬ್ರಿ ಅವರಿಗೆ ಆತ್ಮೀಯ ಸನ್ಮಾನ

0
76

ಅಂಕೋಲಾ : ಖ್ಯಾತ ಸಾಹಿತಿ ಡಾ.ಪ್ರದೀಪ ಕುಮಾರ್‌ ಹೆಬ್ರಿಯವರನ್ನು ಹಿರಿಯ ಬಹುಭಾಷಾ ಸಾಹಿತಿ, ಕವಿ ಎನ್‌.ಬಿ. ಕಾಮತ್‌ ಅವರು ತಮ್ಮ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಹೆಬ್ರಿಯವರು ಮಾತನಾಡಿ ಎನ್‌.ಬಿ.ಕಾಮತ್‌ ಅವರ ಸಾಹಿತ್ಯ ಸೇವೆಯ ಮೂಲಕ ಭಾಷೆ, ಸಾರಸ್ವತ ಲೋಕವನ್ನು ಸಮೃದ್ಧಗೊಳಿಸುತ್ತಿರುವ ಕಾರ್ಯ ಮಾದರಿ. ನಮ್ಮ ಸಮಾಜ ಇಂದು ಒಳ್ಳೆಯದನ್ನು ಗುರುತಿಸುವ ಪ್ರವೃತ್ತಿಯನ್ನೇ ಕಳೆದುಕೊಳ್ಳುತ್ತಿದೆ. ಎಲ್ಲವೂ ನಾನು ಎಂಬ ಶಬ್ದದ ಸುತ್ತಲೇ ಸುತ್ತುವ ವಿಷಮ ಕಾಲವಿದ್ದು, ಭಗವಂತ ನಮಗೆ ನಿರ್ದಿಷ್ಠ ಕಾರ್ಯ ಮಾಡಲೆಂದೇ ಭೂಮಿಗೆ ಕಳಿಸುತ್ತಾನೆ. ಹೀಗಿದ್ದಾಗ ನಾನು ಮಾಡಿದ್ದು ಎಂದು ಅಹಂ ತೋರಿದರೆ ಅದು ದೇವರಿಗೆ ಮಾಡಿದ ಅನ್ಯಾಯ ಎಂದರು. ಅಧ್ಯಕ್ಷತೆ ವಹಿಸಿದ ಹಿರಿಯ ಕಲಾವಿದ ಬಿ. ಹೊನ್ನಪ್ಪ ಮಾತನಾಡಿ ಎನ್‌.ಬಿ. ಕಾಮತ್‌ ಅವರ ಸಾಹಿತ್ಯ ಸೇವೆ ಯುವ ಪೀಳಿಗೆಗೆ ಪ್ರೇರಣೆ ನೀಡುವಂತದ್ದು ಎಂದರು. ಸಮಾಜಸೇವಕ ಶ್ರೀಕಾಂತ ಭಟ್‌ ಕುಮಟಾ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್‌ ಮಾತನಾಡಿದರು. ದೀಕ್ಷಾ ನಾಯ್ಕ ಪ್ರಾರ್ಥನೆ ಹಾಡಿದರು. ಡಾ.ಹೆಬ್ರಿ ಕುರಿತಾಗಿ ಎನ್‌.ಬಿ.ಕಾಮತ್‌ ಅವರು ಬರೆದ ಚುಟುಕು ಪುಸ್ತಕದ ಸಾರಂಶವನ್ನು ನಿವೃತ್ತ ಶಿಕ್ಷಕ ಜಿ.ಆರ್‌.ನಾಯಕ ಓದಿದರು. ಪಿ.ಎಂ.ಹೈಸ್ಕೂಲ್‌ನ ಎನ್‌.ಸಿ.ಸಿ.ಕಮಾಂಡರ್‌ ಜಿ.ಆರ್‌.ತಾಂಡೆಲ್‌ ಮಂಜಗುಣಿ ಅವರು ನಿರ್ವಹಿಸಿದರು. ನಿವೃತ್ತ ಶಿಕ್ಷಕಿ ಕುಮುದಾ ಕಾಮತ್‌ ವಂದಿಸಿದರು.

loading...

LEAVE A REPLY

Please enter your comment!
Please enter your name here