ಶ್ರೀ ಸರ್ವೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

0
54

ಅಂಕೋಲಾ : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಆಯೋಜಿಸಿರುವ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನದಡಿ ಶುಕ್ರವಾರ ಬೆಳಿಗ್ಗೆ ಇಲ್ಲಿಯ ವಂದಿಗೆಯ ಶ್ರೀ ಸರ್ವೇಶ್ವರ ದೇವ ಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ಸಮಿತಿ, ದೇವಸ್ಥಾನ ಆಡಳಿತ ಮಂಡಳಿ, ಸಾರ್ವಜನಿಕರು ಸೇರಿದಂತೆ ನೂರಾರು ಕಾರ್ಯಕರ್ತರು ದೇವಸ್ಥಾನದ ಸುತ್ತ ಇರುವ ಕಸಕಡ್ಡಿ, ಗಿಡಗಂಟಿ ತೆಗೆದು ಶುಚಿಗೊಳಿಸಿದರು. ಈ ಸಂದರ್ಭದಲ್ಲಿ ಜನಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಗಂಗಾಧರ ಭಟ್ಟ ಮಾತನಾಡಿ, ಸ್ವಚ್ಛತೆಯ ಭಾವ ಎಲ್ಲರಲ್ಲೂ ಜಾಗೃತವಾಗಬೇಕಿದೆ. ಪೂಜಾಸ್ಥಾನಗಳು ಸ್ವಚ್ಛವಾಗಿದ್ದರೆ, ಶ್ರದ್ಧೆ, ಭಕ್ತಿ ಜಾಗೃತವಾಗುತ್ತದೆ ಎನ್ನುವುದು ಡಾ. ಹೆಗ್ಗಡೆಯವರ ಅಭಿಪ್ರಾಯ. ಹೀಗಾಗಿ ನಾಡಿನ ಶ್ರದ್ಧಾಕೇಂದ್ರಗಳ ಸ್ವಚ್ಛತೆಗೆ ಆಂದೋಲನ ರೂಪಿಸಲಾಗಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಭಾಸ್ಕರ ನಾರ್ವೇಕರ್‌, ಜನಜಾಗೃತಿ ಸಮಿತಿ ಸದಸ್ಯೆ ಅನುಕಳಸ್‌, ದೇವಸ್ಥಾನ ಕಮಿಟಿ ಅಧ್ಯಕ್ಷ ವಾಮನ ನಾಯ್ಕ, ಗ್ರಾ.ಪಂ.ಅಧ್ಯಕ್ಷ ನಾರಾಯಣ ನಾಯಕ ಮಾತನಾಡಿದರು. ಯೋಜನಾಧಿಕಾರಿ ನಾಗರತ್ನ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕ ಈಶ್ವರ ದೇಸಾಯಿ ವಂದಿಸಿದರು. ಹಿರಿಯ ಸಮಾಜ ಸೇವಕ , ನ್ಯಾಯವಾದಿ ಉಮೇಶ ನಾಯ್ಕ, ನ್ಯಾಯವಾದಿ ಸಂಪದಾ ಗುನಗಾ, ಪುರಸಭೆ ಉಪಾಧ್ಯಕ್ಷ ಮಂಜುನಾಥ ನಾಯ್ಕ, ಜನಜಾಗೃತಿ ಸಮಿತಿ ಸದಸ್ಯರಾದ ವಿಠ್ಠಲದಾಸ ಕಾಮತ್‌, ಶ್ರೀಕೃಷ್ಣ ಕಾಮತ್‌ ,ಪ್ರಮುಖರಾದ ವಿಜಯ ಹನುಮಟ್ಟೇಕರ್‌, ಗುರು ನಾಗ್ವೇಕರ್‌, ನಾಗರಾಜ ಮೋಹನ ನಾಯ್ಕ, ವಿನಾಯಕ ನಾಯಕ, ರಮೇಶ ನಾಯಕ, ಅನುರಾಧಾ ನಾಯ್ಕ, ಸೇವಾ ಪ್ರತಿನಿಧಿ ಸುರೇಖಾ ನಾಯ್ಕ, ಪ್ರತಿಮಾ, ಗ್ರಾ.ಪಂ ಸದಸ್ಯರಾದ ಆಶಾ ಆಗೇರ್‌, ನಾಗೇಶ ವಂದಿಗೆ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here