ಎಪಿಎಂಸಿ ಚುನಾವಣೆಯಲ್ಲಿ ನಾಲ್ವರ ಗೆಲವು, ಶಾಸಕರ ಜನಪ್ರಿಯತೆ ಹಿನ್ನೆಡೆ : ನಾಗರಾಜ ನಾಯಕ

0
36

ಅಂಕೋಲಾ : ತಾಲೂಕಿನ ಪಟ್ಟಣ ಹಾಗೂ ಜಿಲ್ಲಾ ಪಂಚಾಯತ ಕ್ಷೇತ್ರ ಸೇರಿದಂತೆ ಎ.ಪಿ.ಎಂ.ಸಿ. ಚುನಾವಣೆ ಯಲ್ಲಿ 5 ಸ್ಥಾನಗಳ ಪೈಕಿ 4 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಂಕೋಲಾದಲ್ಲಿ ಗೆಲವು ಪಡೆದಿ ರುವುದು ಶಾಸಕ ಸತೀಶ ಸೈಲ್‌ ಅವರ ಜನಪ್ರಿಯತೆಗೆ ಹಿನ್ನೆಡೆಯಾಗಿದೆ ಎಂದು ಬಿಜೆಪಿ ಪ್ರಮುಖರ ಹಾಗೂ ನ್ಯಾಯವಾದಿ ನಾಗರಾಜ ನಾಯಕ ಸ್ಪಸ್ಟಪಡಿಸಿದರು.

ಅವರು ಶನಿವಾರ ಪಟ್ಟಣದ ಜೈಹಿಂದ್‌ ವೃತ್ತದಲ್ಲಿ ಎಪಿಎಂಸಿ ಗೆಲುವಿನ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ಪಟ್ಟಣ ಕ್ಷೇತ್ರದಿಂದ ಗಣಪತಿ ನಾಯಕ ಶಿಳ್ಯ, ಅಗಸೂರು ಕ್ಷೇತ್ರದಿಂದ ಸುಬ್ರಾಯ ಹಸನ್‌ ಸಿದ್ದಿ, ಬೆಳಸೆ ಕ್ಷೇತ್ರದಿಂದ ಸೀತಾ ಗೌಡ, ಸಹಕಾರಿ ಕ್ಷೇತ್ರದಿಂದ ನಾರಾಯಣ ಶಿವರಾಮ ಹೆಗಡೆ ಇವರ ಗೆಲವು ಈಗ ಅಂಕೋಲಾದಲ್ಲಿ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಧೂಳಿಪಟವಾಗಲಿದೆ.

ಶಾಸಕ ಸತೀಶ ಸೈಲ್‌ ತನ್ನ ಸಹಪಾಠಿ ಚಂದ್ರಕಾಂತ ಗಣಪು ನಾಯ್ಕ ಲಕ್ಷ್ಮೇಶ್ವರ ಇವರನ್ನು ಪಟ್ಟಣದ ಕ್ಷೇತ್ರ ದಿಂದ ಎಪಿಎಂಸಿ ಚುನಾವಣೆ ಕಣಕ್ಕೆಳಿಸಿದರೂ ಗೆಲುವು ಸಾಧಿಸುವಲ್ಲಿ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಸೋಲಿಗೆ ಶಾಸಕರೇ ನೇರ ಕಾರಣರಾಗಿದ್ದಾರೆ ಎಂದು ನಾಗರಾಜ ನಾಯಕ ಹೇಳಿದರು.

ಬಿಜೆಪಿ ತಾಲೂಕ ಮಂಡಳದ ಅಧ್ಯಕ್ಷ ನಿತ್ಯಾನಂದ ಗಾಂವಕರ ಅವರು ಮಾತನಾಡಿ ಪಕ್ಷದ ಭಿನ್ನಮತೀಯರು ಇನ್ನಾದರೂ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಒಂದಾಗುವ ಮೂಲಕ ಅಂಕೋಲಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವ ಸಾಧಿಸಲು ಕಾರ್ಯಪ್ರವೃ ತ್ತರಾಗಬೇಕಾಗಿದೆ ಎಂದರು.

ಬಿಜೆಪಿ ಪ್ರಮುಖ ರಾಮಚಂದ್ರ ನಾಯ್ಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿನಾಯಕ ಗಾಂವಕರ (ಪಡ್ತಿ), ಸದಾನಂದ ಗುಡಿಗಾರ, ರಾಮಚಂದ್ರ ಹೆಗಡೆ, ಬಿಂದೇಶ ನಾಯಕ ಹಿಚ್ಕಡ ಯುವ ಮೋರ್ಚಾ ಅಧ್ಯಕ್ಷ ವಿಶಾಲ ಬಂಟ, ತಾ.ಪಂ.ಸದಸ್ಯ ಸಂಜೀವ ಕುಚಿನಾಡ, ಗೋವಿಂದ ನಾಯ್ಕ, ಮಾದೇವ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here