ಬಸವೇಶ್ವರರ ಮೂರ್ತಿಗೆ ಅವಮಾನ: ಬೃಹತ್‌ ಪ್ರತಿಭಟನೆ

0
75

ಬಸವನಬಾಗೇವಾಡಿ : ವಿಜಯಪುರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಸ್ಥಳೀಯ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಜಿ ಹಾಗೂ ಸಿದ್ದಲಿಂಗ ಸ್ವಾಮಿಜಿ ಸಮ್ಮುಖದಲ್ಲಿ ವಿಶ್ವಬಂಧು ಬಸವ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು.

ಸ್ಥಳೀಯ ವಿರಕ್ತಮಠದಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯು ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು, ಮಹಾ ಪುರುಷರ ಮೂರ್ತಿಗಳ ಅವಮಾನ ತಪ್ಪಿಸಲು ರಾಜ್ಯ ಸರಕಾರ ಸೂಕ್ತಕ್ರಮಕೈಗೊಳ್ಳಬೇಕೆಂಬ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ವಿವೇಕಾನಂದ ಗಲ್ಲಿ, ಅಗಸಿ ಒಳಗಡೆ ಹಾಯ್ದು ಬಸವೇಶ್ವರ ವೃತ್ತ, ಬಸ್‌ ನಿಲ್ದಾಣ ಮುಖಾಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ರಸ್ತೆತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಜಿ ಮಾತನಾಡಿ ಸಮಾಜಕ್ಕೆ ಉದಾತ್‌ ಸಂದೇಶಗಳನ್ನು ನೀಡಿದ ಬಸವಣ್ಣನವರ ವಿಚಾರಧಾರೆಗಳು ಅನುಕರಣೀಯವಾಗಿದ್ದು ಆದರೇ ಮಹಾ ಪುರುಷರ ಮೂರ್ತಿಗಳ ಅವಮಾನ ಹೇಯಕೃತ್ಯ ನಿರಂತರವಾಗಿ ನಡೆದಿದ್ದು ಖಂಡನೀಯವಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ, ಎಂ.ಎಸ್‌.ಕೋಟ್ಲಿ, ಭೋವಿ ಸಮಾಜದ ಮುಖಂಡ ಸಿದ್ರಾಮ ಪಾತ್ರೋಟ, ರುಕ್ಮೀಣಿ ಬಿಂಜಲಭಾವಿ, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಸುರೇಶ ಮಣ್ಣೂರ, ಕಸಾಪ ತಾಲೂಕ ಅಧ್ಯಕ್ಷ ಆರ್‌.ಜಿ.ಅಳ್ಳಗಿ ಮಾತನಾಡಿದರು, ಪುರಸಭೆ ಅಧ್ಯಕ್ಷ ಬಸವರಾಜ ತುಂಬಗಿ, ಜಿಪಂ ಸದಸ್ಯ ಸಂತೋಷ ನಾಯಕ, ಸಾಹಿತಿ ಲ.ರು.ಗೊಳಸಂಗಿ, ಉದಯ ಮಾಂಗಲೇಕರ, ವಿಶ್ವನಾಥ ನಿಡಗುಂದಿ, ಅಜೀಜ ಬಾಗವಾನ, ಬಸವರಾಜ ನಾಯ್ಕೋಡಿ, ಪರಶುರಾಮ ಜಮಖಂಡಿ, ಸಾವಿತ್ರಿ ಕಲ್ಯಾಣಶೆಟ್ಟಿ, ಶಿವಾನಂದ ನಾಗರಾಳ, ಬಸವರಾಜ ಹಂಚಲಿ, ವಿವೇಕಾನಂದ ಕಲ್ಯಾಣಶೆಟ್ಟಿ, ಗಂಗಪ್ಪ ಬೇವನೂರ, ಗಂಗಾಬಾಯಿ ಕುಂಬಾರ, ಸುರೇಶ ನಾಯಕ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ಇದೇ ಸಂದರ್ಭದಲ್ಲಿ ವಿಶ್ವಬಂಧು ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ: ಅಮರೇಶ ಮಿಣಜಗಿ ತಹಶೀಲದಾರ ಎಂ.ಎನ್‌.ಚೋರಗಸ್ತಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

loading...

LEAVE A REPLY

Please enter your comment!
Please enter your name here