ರಾಜ್ಯಮಟ್ಟದ ಟಗರಿನ ಕಾಳಗ

0
161

ಕನ್ನಡಮ್ಮ ಸುದ್ದಿ-ಹಾನಗಲ್ಲ : ರಣಾಂಗದಲ್ಲಿ ಸೇಣಸಾಟಕ್ಕೆ ನಿಂತ ಕೊಬ್ಬಿದ ಟಗರುಗಳು ಸದ್ದಿಲ್ಲದೆ ಹಿಂದಡಿ ಇಡುತ್ತ ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಪ್ರತಿಸ್ಪರ್ಧಿಗೆ ಗುದ್ದುವ ರೋಚಕತೆಯು ಸುನಾಮಿಯ ಸಮಯದಲ್ಲಿ ಸಮುದ್ರದ ನೀರೆಲ್ಲ ಒಮ್ಮೆಲೇ ಹಿಂದಕ್ಕಿ ಜರಿದು ವೇಗದಲ್ಲಿ ಭೋರ್ಗರೆದು ಅನಾಹುತ ಸೃಷ್ಠಿಸುವ ಭಯಾನಕತೆಯ ದೃಶ್ಯದಂತೆ ಭಾಸವಾಗುತ್ತಿತ್ತು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಮಧ್ಯರಾತ್ರಿಯ ವರಗೂ ನಡೆದ ರಾಜ್ಯಮಟ್ಟದ ಟಗರಿನ ಕಾಳಗದಲ್ಲಿ ‘ಡಿಚ್ಚಿ’ ಹೊಡೆಯುವ ಕಲೆಯನ್ನು ಭೀಭತ್ಸವಾಗಿ ಪ್ರದರ್ಶಿಸುತ್ತಿದ್ದ ಟಗರುಗಳ ವೀರಾವೇಶವು ನೆರೆದವರನ್ನು ಬೆರಗಾಗಿಸುತ್ತಿತ್ತು.
ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ತುದಿಗಾಲ ಮೇಲೆ ನಿಂತು ನೋಡುವಂತೆ ನಡೆದ ಟಗರಿನ ಕಾಳಗದಲ್ಲಿ ಸೆಣಸಲೆಂದೆ ಸಜ್ಜುಗೊಂಡ ಬಲಿಷ್ಠ ಟಗರುಗಳ ರಭಸದ ಟಕ್ಕರ್‍ನಿಂದ ಹೊರಡುತ್ತಿದ್ದ ಶಬ್ದ ನೆರೆದ ಕಾಳಗದ ಅಖಾಡ ರಣಕೇಕೆಯ ರಂಗು ಪಡೆದುಕೊಳ್ಳುವಂತೆ ಮಾಡಿತ್ತಿತ್ತು.
ಒಂದೊಂದು ಟಗರು ತನ್ನದೇ ಆದ ರಣತಂತ್ರವನ್ನು ತೋರ್ಪಡಿಸುತ್ತಿದ್ದ ರೀತಿ ನಿಜಕ್ಕೂ ಮಜ ನೀಡುವಂತಿತ್ತು. ಅಖಾಡದಲ್ಲಿ ಪರಸ್ಪರ ಎದುರಾಗುತ್ತಿದ್ದ ಟಗರುಗಳು ಮಾಲೀಕನ ಗುಟುರಿನಿಂದ ರಣೋತ್ಸಾಹವನ್ನು ಮೈತುಂಬಿಕೊಂಡು ಬಲವಾಗಿ ಗುದ್ದುತ್ತಿದ್ದರೆ, ದೂಳು ಎಳುತ್ತಿತ್ತು.
ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲು ಹೀಗೆ ಟಗರುಗಳನ್ನು ವಿಂಗಡಿಸಿ ನಡೆದ ಈ ಸ್ಪರ್ಧೆಯಲ್ಲಿ 6 ಮತ್ತು 8 ಹಲ್ಲಿನ ಟಗರುಗಳ ಸೆಣಸಾಟ ರೋಮಾಂಚನ ಪಡೆದುಕೊಳ್ಳುತ್ತಿತ್ತು. 8 ಹಲ್ಲಿನ ಬಹು ಬಲಿಷಠ ಟಗರುಗಳ ಪರಸ್ಪರ ಟಕ್ಕರ್ ವಿಚಿತ್ರ ಶಬ್ದ ಹೊಮ್ಮಿಸುತ್ತಿತ್ತು.
ಸ್ಪರ್ಧೆಗೆ ಬಿಡುತ್ತಿದ್ದಂತೆ ಕಾಲು ಕೆರೆದುಕೊಂಡು ವೇಗವಾಗಿ ಓಡಿಬಂದು ಗುದ್ದುತ್ತಿದ್ದ ಟಗರುಗಳು ಮೊದಲ ಟಕ್ಕರ್‍ನಲ್ಲಿಯೇ ಪ್ರತಿಸ್ಪರ್ಧೆಯ ಶಕ್ತಿ ಸಾಮಥ್ರ್ಯವನ್ನು ಅಳೆದುಕೊಳ್ಳುತ್ತಿದ್ದವು. ನಂತರದ ಟಕ್ಕರ್‍ಗೆ ಬಲಿಷ್ಠ ಟಗರು ಹೂಂಕರಿಸುತ್ತಿದ್ದರೆ, ಕಡಿಮೆ ಶಕ್ತಿಯ ಟಗರು ಹಿಂಜರಿಯುತ್ತಿತ್ತು.
ಹೀಗೆ ನಾಲ್ಕೈದು ಗುದ್ದಾಟಗಳಲ್ಲಿ ವಿಜಯದ ಟಗರು ಯಾವುದೆಂಬ ಘೋಷಣೆಯಾಗುತ್ತಿತ್ತು. ಕೆಲವಷ್ಟು ಟಗರುಗಳು ಮೊದಲ ಟಕ್ಕರ್ ನಂತರದ ಮತ್ತೊಂದು ಗುದ್ದಿಗೆ ಹಿಂಜರಿದು ಅಖಾಡದಿಂದ ಕಾಲ್ಕಿಳುತ್ತಿದ್ದವು. ಕೆಲವಷ್ಟು ಟಗರುಗಳು ನಿಧಾನವಾಗಿ ಹಿಂದಡಿ ಇಟ್ಟು ಒಮ್ಮೇಲೆ ಮಿಂಚಿನ ವೇಗದಲ್ಲಿ ಪ್ರತಿಸ್ಪರ್ಧಿಯ ಮೇಲೆರಗಿ ದಾಳಿ ಮಾಡುತ್ತಿದ್ದ ದೃಶ್ಯ ಪ್ರೇರಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಿತ್ತು. ಗುದ್ದಲು ಬಂದ ಟಗರಿನ ಮೇಲೆ ಜಂಪ್ ಮಾಡುವ ಮೂಲಕ ಟಕ್ಕರ್ ತಪ್ಪಿಸಿಕೊಳ್ಳುವ ರಣತಂತ್ರವೂ ನಡೆಯುತ್ತಿದ್ದವು.
ಟ್ವಂಟಿ-ಟ್ವಂಟಿ, ಸುಲ್ತಾನ್ ಕಿಂಗ್ ಆಫ್ ಕಿಂಗ್, ಬುಲೆಟ್, ದ್ಯಾಮವ್ವ, ರಾಯಲ್, ಉಚ್ಚೆಂಗೆವ್ವದೇವಿ, ಮುತ್ಯಾ, ಮೈಲಾರಿ, ಸಂಗೊಳ್ಳಿ ರಾಯಣ್ಣ, ಮುಂತಾದ ಹೆಸರಿನ ಟಗರುಗಳು ಪ್ರೇಕ್ಷಕರಿಂದ ಶಹಬಾಶ್‍ಗಿರಿ ಗಿಟ್ಟಿಸಿದವು. 120 ಟಗರುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಖದರ್ ಪ್ರದರ್ಶಿಸಿದವು.
ಮೊದಲು ಹಾಲು ಹಲ್ಲಿನ ಟಗರುಗಳ ಸ್ಪರ್ಧೆ ನಡೆಯಿತು. ‘ಸ್ಪರ್ಧೆಗಾಗಿ ತಯಾರು ಮಾಡಿದ ಟಗರು ಗೆದ್ದಾಗ ಆಗುವ ಖುಷಿ ಅಷ್ಟಿಷ್ಟಲ್ಲ’ ಎಂದು ಈ ಸ್ಪರ್ಧೆಯಲ್ಲಿ ವಜೇತ ಬಾಗಲಕೋಟ ಜಿಲ್ಲೆ ಅಮ್ಮಿನಭಾವಿ ಗ್ರಾಮದ ಮಲ್ಲಪ್ಪ ಹಾಲಣ್ಣನವರ ತಮ್ಮ ಟಗರು ‘ಮೈಲಾರಿ’ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.
ಕೋಟ್:
‘ಹುಡ್ಡಿಯಾಡಲು (ಸೆಣಸಾಟಕ್ಕೆ) ವಿಶೇಷ ತರಬೇತಿ ಬೇಕಾಗಿಲ್ಲ. ಕೆಲವು ಟಗರುಗಳಿಗೆ ಈ ಕಲೆ ದೈವದತ್ತವಾಗಿ ಬಂದಿರುತ್ತದೆ. ಅಂತಹವನ್ನು ಗುರುತಿಸಿ ಹುಳ್ಳಿ, ಮೊಟ್ಟೆ, ಹಾಲು ಮುಂತಾದ ಪೌಷ್ಠಿಕ ಆಹಾರ ನೀಡಿ ಶಕ್ತಿವರ್ಧಿಸಲಾಗುತ್ತದೆ, ಟಗರು ಕಾಳಗದಲ್ಲಿ ಶಕ್ತಿಯೇ ನಿರ್ಣಾಯಕ’
‘ನನ್ನಲ್ಲಿ ಎರಡು ಹಲ್ಲಿನಿಂದ ಹಿಡಿದು ಎಲ್ಲ ಮಾದರಿಯ ಕಾಳಗದ ಟಗರುಗಳಿವೆ. ಅವುಗಳಿಗೆ ನಿತ್ಯವೂ ಸಂಜೆ ದಭಸದಿಂದ ಓಡುವ ಕಸರತ್ತು ಮಾಡಲಾಗುತ್ತದೆ, ಮಕ್ಕಳಂತೆ ನೋಡಿಕೊಳ್ಳುತ್ತೇವೆ. ಎಲ್ಲಿಯೇ ಸ್ಪರ್ಧೆ ನಡೆದರೂ ಒಂದಿಲ್ಲೊಂದು ಬಹುಮಾನ ಸಿಗುತ್ತದೆ’ .
2 ಹಲ್ಲಿನ ವಿಭಾಗದಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿದ ರಾಣೆಬೆನ್ನೂರಿನ ಆರ್‍ಎನ್‍ಆರ್ ಸರದಾರ ‘ಟಗರಿನ ಮಾಲೀಕ ನಾಗರಾಜ ಕೋಲಾರ ಅವರ ಅಭಿಪ್ರಾಯ ಇದು.
ಅಂಕಿ-ಅಂಶ:
ಸ್ಪರ್ಧೆಯ ನಗದು ಬಹುಮಾನಗಳು:
8 ಹಲ್ಲು: ಪ್ರಥಮ 25 ಸಾವಿರ ರುಪಾಯಿ ಮತ್ತು ಟದರೋಫಿ, ದ್ವಿತೀಯ-15 ಸಾವಿರ ರುಪಾಯಿ ಮತ್ತು ಟದರೋಫಿ.
6 ಹಲ್ಲು ಪ್ರಥಮ- 15 ಸಾವಿರ ರುಪಾಯಿ ಮತ್ತು ಟ್ರೋಫಿ, ದ್ವಿತೀಯ-10 ಸಾವಿರ ರುಪಾಯಿ ಮತ್ತು ಟ್ರೋಫಿ.
4 ಹಲ್ಲು: ಪ್ರಥಮ-10 ಸಾವಿರ ರುಪಾಯಿ ಮತ್ತು ಟ್ರೋಫಿ, ದ್ವಿತೀಯ-5 ಸಾವಿರ ರುಪಾಯಿ ಮತ್ತು ಟ್ರೋಫಿ ಮತ್ತು ಟ್ರೋಫಿ.
2 ಹಲ್ಲು: ಪ್ರಥಮ-10 ಸಾವಿರ ರುಪಾಯಿ ಮತ್ತು ಟ್ರೋಫಿ, ದ್ವಿತೀಯ 5 ಸಾವಿರ ರುಪಾಯಿ ಮತ್ತು ಟ್ರೋಫಿ.
ಹಾಲು ಹಲ್ಲು: ಪ್ರಥಮ 8 ಸಾವಿರ ರುಪಾಯಿ ಮತ್ತು ಟ್ರೋಫಿ, ದ್ವಿತೀಯ-4 ಸಾವಿರ ರುಪಾಯಿ ಮತ್ತು ಟ್ರೋಫಿ.

sಸೋಮವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಟಗರಿನ ಕಾಳಗ ಸ್ಫರ್ಧೇಯಲ್ಲಿ ದಾವಣಗೆರೆ ‘ಬಿಜಲಿ; ಸೂಪರ್‍ಸ್ಟಾರ್ ಪಟ್ಟ ಧರಿಸಿಕೊಂಡಿತು.
ಒಟ್ಟು 5 ಮಾದರಿಯ ಟಗರುಗಳ ಸ್ಪರ್ಧೆಯಲ್ಲಿ ಬಲಿಷ್ಠ ಟಗರು ಸೆಣಸಾಟವಾದ 8 ಹಲ್ಲಿನ ಟಗರು ಬಿಭಾಗದಲ್ಲಿ ಡಾವಣಗೆರೆ ಟಗರುಗಳು ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದುಕೊಂಡವು. ನಂತರದ ವಿಭಾಗವಾದ 6 ಹಲ್ಲಿನ ಸ್ಪರ್ಧೆಯಲ್ಲಿ ಹಾನಗಲ್ಲ ತಾಲೂಕಿನ ಅಕ್ಕಿಆಲೂರ ‘ಜಾಕಿ’ ಪ್ರಥಮ, ಹಾವೇರಿಯ ‘ಗಜನಿ’ ದ್ವಿತೀಯ ಬಹುಮಾನ ಗಿಟ್ಟಿಸಿದವು.
4ನೇ ಹಲ್ಲಿನ ವಿಭಾಗದಲ್ಲಿ ಗದಗ ‘ದುರ್ಗಾದೇವಿ’ ಪ್ರಥಮ ಮತ್ತು ಹರಿಹರದ ‘ನವಾಜ್ ಬೈಪಾಸ್’ ದ್ವಿತೀಯ ಬಹುಮಾನ ಪಡೆದವು. 2ನೇ ಹಲ್ಲಿನ ವಿಭಾಗದಲ್ಲಿ ರಾಣೆಬೆನ್ನೂರಿನ ‘ಆರ್‍ಎನ್‍ಆರ್ ಸರದಾರ’ ಪ್ರಥಮ ಮತ್ತು ಬನವಾಸಿಯ ‘ವಿನಾಯಕ’ ದ್ವಿತೀಯ ಬಹುಮಾನ ಪಡೆದವು.
ಹಾಲುಹಲ್ಲು ವಿಭಾಗದಲ್ಲಿ ಅಮ್ಮಿನಬಾವಿಯ ‘ಮೈಲಾರಿ’ ಪ್ರಥಮ ಮತ್ತು ಹಾನಗಲ್ಲನ ವಿನಾಯಕ ನಾಗಜ್ಜನವರ ಅವರ ಟಗರು ದ್ವಿತೀಯ ಬಹುಮಾನ ಪಡೆದವು.
ವಿಜೇತ ಟಗರುಗಳ ಮಾಲೀಕರಿಗೆ ಸ್ಪರ್ಧೆಯ ಸಂಘಟಕರಾದ ದಾನಪ್ಪ ಗಂಟೇರ, ಭೋಜರಾಜ ಕರೂದಿ, ರಾಮಚಂದ್ರ ಹೊಸಮನಿ, ಗಣಪತಿ ದೇಸಾಯಿ, ಮಹೇಶ ಪವಾಡಿ, ದೀಪಕ ಕಿತ್ತೂರ ಮತ್ತು ಪ್ರಕಾಶ ತಳ್ಳಳ್ಳಿ ಬಹುಮಾನ ವಿತರಿಸಿದರು.

loading...