ಮುಸ್ಲಿಂ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ಹಿಂದೂ ಸಂಘಟನೆಗಳು ವಿರೋಧಿಸುವದಿಲ್ಲ: ಮೂರ್ತಿ

0
66

ಕನ್ನಡಮ್ಮ ಸುದ್ದಿ-ಕುಷ್ಟಗಿ : ಹಿಂದೂ ಧರ್ಮದ ಸಂಘಟನೆಗಳು ಮುಸ್ಲೀಂ ಹಾಗೂ ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಬದಲಾಗಿ ಹಿಂದೂ ರಾಷ್ಟ್ರವನ್ನು ಚೂರು ಮಾಡುವ ಕನಸನ್ನು ಕಾಣುತ್ತಿರುವ ಉಗ್ರರ ಹಾಗೂ ದುಷ್ಟಕೂಟಗಳ ಕಡುವಿರೋಧವನ್ನು ಹಿಂದೂ ಸಂಘಟನೆಗಳು ಮಾಡುತ್ತಿವೆ ಎಂದು ದಕ್ಷ್ಷಿಣ ಕರ್ನಾಟಕ ಹಿಂದೂ ಧರ್ಮದ ಸಂಘಟನೆಗಾರ ಕೇಶವಮೂರ್ತಿ ಹೇಳಿದರು.
ಹಿಂದೂ ರಾಷ್ಟ್ರನಿರ್ಮಾಣದ ಮಹಾನ್ ನಾಯಕ ಛತ್ರಪತಿ ಶಿವಾಜಿಯ 387ನೇ ಜಯಂತ್ಯೋತ್ಸವ ನಿಮಿತ್ಯ ಸಾಯಂಕಾಲ ಪಟ್ಟಣದ ಹಸನಸಾಬ ದೋಟಿಹಾಳ ಇವರ ಜಾಗೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂ ಜಾಗೃತ ಸಮಾವೇಶದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹಿಂದೂ ಸಂಘಟನೆಗಳು ಅನ್ಯ ಸಮುದಾಯಗಳನ್ನು ಯಾವತ್ತು ವಿರೋಧಿಸುವದಿಲ್ಲ. ಹಿಂದೂ ರಾಷ್ಟ್ರವನ್ನು ಒಡೆಯುವ ಕನಸು ಕಾಣುತ್ತಿರುವ ಪ್ರಚೋದನಕಾರಿ ಶಕ್ತಿಗಳ ವಿರೋಧಿಸುತ್ತದೆ. ಆದರೆ ಹಿಂದು ಸಂಘಟನೆಗಳನ್ನು ಇಂದಿನ ಕೆಲ ಅಪ್ರಬುದ್ಧರು ಕೋಮುವಾಧಿ ಸಂಘಟನೆ ಎಂಬ ಹಣೆಪಟ್ಟಿ ಕಟ್ಟುತ್ತಿವೆ. ಹಿಂದೂ ಧರ್ಮದ ಅಪ್ರತಿಮ ಧರ್ಮ ಪ್ರಚಾರಕ, ನಿಷ್ಠೆಯುಳ್ಳ ಸೇನಾಧಿಪತಿ ಛತ್ರಪತಿ ಶಿವಾಜಿ ಮಾಹಾರಾಜರು ಮಹಿಳೆಯರ ಪರ ಹೆಮ್ಮೆಯ ಗೌರವವನ್ನು ಹೊಂದಿದ್ದವರು. ಅವರ ಆಡಳಿತದಲ್ಲಿ ಹೆಣ್ಣಿನ ದೌರ್ಜನ್ಯವೆಸಗಿದವರನ್ನು ಕಠಿಣ ಶಿಕೆಗೆ ಗುರಿಪಡಿಸಿದ ಮಹಾನ್ ವ್ಯಕ್ತಿ. ಮುಸ್ಲೀಂ ಮಹಿಳೆಯರನ್ನೇ ರಕ್ಷಣೆ ಮಾಡಿ ಮಾನವಿಯತೆ ಮೆರೆದಿದ್ದಾರೆ. ಶಿವಾಜಿ ಮಹಾರಾಜರ ತಾಯಿ ಜೀಜಾ ಬಾಯಿಯಂತೆ ಮಕ್ಕಳನ್ನು ಬೆಳೆಸಿ ಉತ್ತಮ ನಡತೆ ಸಂಸ್ಕøತಿಯನ್ನು ಬೆಳಸಿಕೊಳ್ಳಬೇಕೆಂದು ದಕ್ಷಣ ಕರ್ನಾಟಕ ಹಿಂದು ಧರ್ಮದ ಸಂಘಟನೆಗಾರ ಕೇಶವ ಮೂರ್ತಿ ಹೇಳಿದರು.
ಇದೇ ವೇಳೆ ಇನ್ನೂರ್ವ ಬಳ್ಳಾರಿ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಸಂತೋಷ ಸಾಮ್ರಾಟ ಮಾತನಾಡಿ ಈ ಭಾರತ ಮಾತೆಯ ಮಾತೃ ಭೂಮಿಯಲ್ಲಿ ಹಲವಾರು ಮುಸ್ಲೀಂ ಧರ್ಮದವರು ಇದ್ದಾರೆ. ಅವರುಗಳನ್ನು ಹಿಂದು ಧರ್ಮ ರಕ್ಷಣೆ ಮಾಡುತ್ತಿದೆ. ಆದರೆ ಮುಸ್ಲೀಂ ಧರ್ಮದ ಕೆಲ ಉಗ್ರಗಾಮಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಈ ನೆಲದ ನಾಡಿನಲ್ಲಿ ಶಿಶುನಾಳ ಶರೀಫ್, ಡಾ. ಅಬ್ದುಲ್ ಕಾಲಾಂ, ಬಿಸ್ಮೀಲ್ಲಾ ಖಾನ್, ಅಶ್ಪಾಕಉಲ್ಲಾಖಾನ, ಇವರುಗಳನ್ನು ಎಲ್ಲ ಧರ್ಮದವರೂ ಒಪ್ಪಿಕೊಳ್ಳುತ್ತಾರೆ. ಇಲ್ಲಿನ ಮುಸ್ಲೀಂರೆ ನಮ್ಮ ದೇಶದ ಸಂಸ್ಕøತಿಯನ್ನು ಮೆಚ್ಚಿ ನಮ್ಮ ಜೊತೆ ಸಹಬಾಳ್ವೆ ನಡೆಸುತ್ತಿದ್ದಾರೆ. ನಾವುಗಳು ಇಲ್ಲಿ ಇರುವ ಮುಸ್ಲೀಂ ಹಾಗೂ ಅಲ್ಪಸಂಖ್ಯಾತರ ಮೇಲೆ ನಮ್ಮ ವಿರೋಧವಲ.್ಲ ಏನೇ ಇದ್ದರೂ ಹಿಂದು ಧರ್ಮವನ್ನು ಹತ್ತಿಕ್ಕಬೇಕು ಎಂದು ನೋಡುತ್ತಿರುವ ಅಮೇರಿಕಾ, ಚೀನಾ ಹಾಗೂ ಉಗ್ರ ಪಾಕಿಸ್ತಾನ ದಂತಹ ದುಷ್ಟ ಶಿಖಾಮಣಿಗಳು ಒಳ ಸಂಚನ್ನು ರೂಪಿಸಿ ಭಾರತ ದೇಶವನ್ನು ಸರ್ವನಾಶವನ್ನು ಮಾಡಲು ನೋಡಿತ್ತಿವೆ. ಹಿಂದೂ ಧರ್ಮ ಶ್ರೇಷ್ಠತೆಯನ್ನು ಸಾರುತ್ತದೆ. ಹೆಣ್ಣಿಗೆ ಗೌರವವನ್ನು ಸೂಚಿಸುತ್ತದೇ. ಗೋವನ್ನು ತಾಯಿ ಎಂದು ಪೂಜಿಸುವ ಮಹಾನ್ ಧರ್ಮ ಇದ್ದರೆ ಅದು ಹಿಂದು ಧರ್ಮ ಎಂದರು. ಆದ್ದರಿಂದ ರಾಜಕೀಯವಾಗಿ ಹಿಂದು ಸಂಘಟನೆಯನ್ನು ಬೆಳಸಬೇಡಿ ರಾಜಕೀಯವನ್ನು ಬಿಟ್ಟು ಹಿಂದು ಧರ್ಮವನ್ನು ಕಟ್ಟಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ದೊಡ್ಡನಗೌಡ ಪಾಟೀಲ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಕುರಿತು ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಪ್ರಾಸ್ಥವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ನೇಮಣ್ಣ ಮೇಲಸಕ್ರೀ, ವಿಜಯ ನಾಯಕ, ಮಲ್ಲಣ್ಣ ಪಲ್ಲೇದ್, ಶರಣು ತಳ್ಳಿಕೇರಿ, ಚಂದ್ರಕಾಂತ ವಡಗೇರಿ, ತಮ್ಮಣ್ಣಾಚಾರ ದಿಗ್ಗಾವಿ ಸೇರಿದಂತೆ ಹಲವಾರು ಗಣ್ಯವಕ್ತಿಗಳು ಉಪಸ್ಥಿತರಿದ್ದರು.

loading...