ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಸಾಹಿತ್ಯ ವಲಯದಿಂದಲೇ ನಡೆಯಲಿ

0
51

ಕನ್ನಡಮ್ಮ ಸುದ್ದಿ-ಧಾರವಾಡ : ಕನ್ನಡ ಮಾತೃಭಾಷೆ ಬಗ್ಗೆ ಅಭಿಮಾನ ಇರಿಸಿಕೊಂಡೇ ಬದುಕು ಕಟ್ಟಿಕೊಳ್ಳುವ ದೃಷ್ಟಿಯಿಂದ ಉಳಿದ ಭಾಷೆ ಕಲಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ಮಾತನಾಡಿ, ವಸೂಲಿ ಮೂಲಕ ಸಾಹಿತಿಗಳು ಪ್ರಶಸ್ತಿ ಪಡೆಯುವ ಪ್ರವೃತ್ತಿ ಬಿಡಬೇಕು. ವಸೂಲಿ ಮೂಲಕ ಪ್ರಶಸ್ತಿ ಪಡೆಯುವುದಕ್ಕೆ ಸಂಪೂರ್ಣ ಕಡಿವಾಣ ಹಾಕುವ ಮೂಲಕ ಅರ್ಹರನ್ನು ಗುರುತಿಸಿ ನೀಡುವ ಕೆಲಸ ಸಾಹಿತ್ಯ ವಲಯದಿಂದಲೇ ನಡೆಯಬೇಕು. ಸಂವಹನ ಕೌಶಲ್ಯ ಬೆಳೆಸಿಕೊಂಡು ನಾಡು-ನುಡಿ ಉಳುವಿಗೆ ಪ್ರತಿಯೊಂದು ಕನ್ನಡ ಮನಸ್ಸುಗಳ ಪ್ರಯತ್ನಿಸಬೇಕು ಎಂದರು.
ಡಾ. ಬಸವರಾಜ ಸಾದರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅಪಾಯಕಾರಿ ಜಗತ್ತಿನಲ್ಲಿ ಬದುಕುತ್ತಿರುವ ಕವಿ-ಸಾಹಿತಿಗಳಿಗೆ ಭಯ ಹುಟ್ಟಿಉವ ಹುನ್ನಾರುಗಳು ನಿತ್ಯ ನಡೆಯುತ್ತಿವೆ. ಅಭದ್ರತೆಯ ಭಯ ಎಲ್ಲ ಮಾನವರನ್ನು ಕಾಡುತ್ತಿದೆ. ಈ ಬಗೆಯ ವಾತಾವರಣದಲ್ಲಿ ಬದುಕುತ್ತಿರುವ ಸಾಹಿತಿಗಳು ತಮ್ಮ ಜವಾಬ್ದಾರಿಯನ್ನು ಹೇಗೆ ನಿಬಾಯಿಬೇಕು ಎಂಬ ಕುರಿತಂತೆ ಚಿಂತಿಸಬೇಕಿದೆ. ಬಹುತೇಕರ ಮಹನೀಯರ ಕಣ್ಣುಗಳು ವಿಧಾನಸೌಧದ ಮೆಟ್ಟಿಲುಗಳ ಕಡೆಗೆ ನೆಟ್ಟಿವೆ. ಇಲ್ಲಿನ ಸಮಸ್ಯೆಗಳಿಗೆ ಕಡೆಗೆ ಗಮನ ನೀಡುತ್ತಿಲ್ಲ. ಒಂದು ವೇಳೆ ಇಲ್ಲಿನ ವಿದ್ಯಾಮಾನಗಳ ಕಡೆಗೆ ಗಮನ ಹರಿಸಿದದ್ದರೆ, ಡಾ. ಎಂ.ಎಂ.ಕಲಬುರ್ಗಿ ಹತ್ಯೋಕರರ ಪತ್ತೆ, ಮಹಾದಾಯಿ-ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಗೆ ಚಾಲನೆಗೆ ಸಿಗುತ್ತಿತ್ತು ಎಂದರು.
ಸಾಹಿತಿ ಡಾ. ಶಾಂತಿನಾಥ ದಿಬ್ಬದ ಆಶಯ ನುಡಿ ಸಲ್ಲಿಸಿ ಮಾತನಾಡಿ, ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಮನರಂಜನೆ ಆಗಿತ್ತು. ಇದೀಗ ಸಾಹಿತಿಗಳ ಸಂಖ್ಯೆ ಹೆಚ್ಚಿದರೆ ಸಾಲದು. ಸ್ವಂತಿಕೆ, ಸತ್ವ, ಜೀವನ ಮೌಲ್ಯಗಳನ್ನು, ಹೆಚ್ಚಿಸಬೇಕು. ಸಾಹಿತ್ಯದಿಂದ ಸಮಾಜ ತಿದ್ದಬಹದು ಎಂಬ ಮಾತಿದೆ ಸಾಹಿತಿ, ವೈಚಾರಿಕ, ಮನಸ್ಸು ಮಾಡಿದರೆ ಅಲ್ಪವಾದರೂ ಸಮಾಜವನ್ನು ತಿದ್ದಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಮಕ್ಕಳಿಗೆ ಯಾವ ಭಾಷೆ ಕಲಿಸಬೇಕು ಎಂಬುದನ್ನು ಪಾಲಕರಿಗೆ ಬಿಟ್ಟ ವಿಚಾರ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ ಪರಿಣಾಮ ಒಂದನೇ ತರಗತಿಯಿಂದ ಆಂಗ್ಲಮಾಧ್ಯಮ ಆರಂಭವಾಗಿದ್ದು ದುರಂತ. ಇದರಿಂದ ಕನ್ನಡದ ಸ್ಥಿತಿ ಅಧೋಗತಿಗೆ ಇಳಿದಿದೆ. ಕನ್ನಡ ನೆಲ-ಜಲ, ಭಾಷೆ ಬಗ್ಗೆ ಹೋರಾಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಂಚೂಣಿಯಲ್ಲಿ. ಈ ಪರಿಷತ್ ಇರದಿದ್ದರೆ ಕನ್ನಡದ ಸ್ಥಿತಿ ಊಹಿಸುಉವುದು ಅಸಾಧ್ಯ ಆಗುತ್ತಿತ್ತು. ದ.ರಾ.ಬೇಂದ್ರೆ, ಕೀರ್ತಿನಾಥ ಕುರ್ತಕೋಟಿ, ಸೋಮೇಶಖರ ಇಮ್ರಾಪೂರ, ಡಾ. ಎಂ.ಎಂ.ಕಲಬುರ್ಗಿ, ಚಂದ್ರಶೇಖರ ಕಂಬಾರ ಸಾಹಿತ್ಯ ವಯಲ ಬೆಳೆವಣಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜೇಂದ್ರ ಚನ್ನಿ, ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಎಚ್.ಎಂ.ಬಿಳಗಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗಾರಾಜ ಅಂಗಡಿ, ಪ್ರೊ. ಕೆ.ಎಸ್.ಕೌಜಲಗಿ, ಡಾ. ಜಿನದತ್ತ ಹಡಗಲಿ, ಪ್ರೊ. ಎಸ್.ಎಸ್.ದೊಡಮನಿ ಉಪಸ್ಥಿತರಿದ್ದರು.

loading...