ಇಂದು ಯೂಥ್ ಕ್ಲಬ್ ಸ್ಥಾಪನೆ

0
67

ಕನ್ನಡಮ್ಮ ಸುದ್ದಿ-ಧಾರವಾಡ : ಮಕ್ಕಳಿಗಾಗಿ ಮತ್ತು ಯುವಜತೆಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಿ ಸಮಾಜಕ್ಕೆ ಉತ್ತಮ ಕೊಡುಗಳನ್ನು ನೀಡುವ ಉದ್ದೇಶದಿಂದ ಸ್ನೇಹಿತರೆಲ್ಲರೂ ಸೇರಿಕೊಂಡು ಧಾರವಾಡ ಯೂಥ್ ಕ್ಲಬ್‍ನ್ನು ಸ್ಥಾಪನೆಯ ಸಮಾರಂಭವನ್ನು ಮಾರ್ಚ 26 ರಂದು ಸಂಜೆ 5 ಕ್ಕೆ ಆಲೂರ ವೆಂಕಟರಾವ್ ಭವನದಲ್ಲಿ ಏರ್ಪಡಿಸಿದೆ ಎಂದು ಕ್ಲಬ್‍ನ ಅಧ್ಯಕ್ಷ ಗೊವಿಂದರಾಜ್ ಮಾಕಡವಾಲೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜಿಕ ಹಾಗೂ ಸಾಂಸ್ಕøತಿಕ ಜೊತೆಗೆ ಅನೇಕ ಕಾರ್ಯಕ್ರಮ ಆಯೋಜಿಸುವ ಯೋಜನೆ ಹೊಂದಿದ್ದು ಮುಂಬರುವ ದಿನದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಅಂದು ಮನಸೂರು ಮಹಾಮಠದ ಶ್ರೀ ಬಸವರಾಜ ದೇವರು ಸ್ವಾಮೀಜಿ ಸಾನಿಧ್ಯವನ್ನು ವಹಿಸಲಿದ್ದು ಜಿಲ್ಲಾ ಉಸ್ತವಾರಿ ಸಚಿವ ವಿನಯ ಕುಲಕರ್ಣಿ ಕ್ಲಬ್ ಉದ್ಘಾಟಿಸಲಿದ್ದಾರೆ. ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್.ಕೊನರಡ್ಡಿ, ಮಾಜಿ ಸಭಾಪತಿ ವೀರಣ್ಣಾ ಮತ್ತಿಕಟ್ಟಿ, ವಾ.ಕ.ರ.ಸಾ.ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಕಾಂಗ್ರೇಸ್ ಪಕ್ಷದ ಧಾರವಾಡ ಗ್ರಾಮೀಣ ಅಧ್ಯಕ್ಷ ಎ.ಎಚ್.ಮಾಡಳ್ಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮಾಜಿ ಸಚಿವ ಎ.ಆರ್.ಮೊರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‍ನ ಉಪಾಧ್ಯಕ್ಷ ಬಸವರಾಜ ಕೊರಸರ, ಪ್ರದಾನ ಕಾರ್ಯದರ್ಶಿ ಛತ್ರಪತಿ ಫಿರಗಿ, ಸಹಕಾರ್ಯದರ್ಶಿ ರಾಘವೇಂದ್ರ ಕೊರಸರ, ಸಂಘಟನಾ ಕಾರ್ಯದರ್ಶಿ ಹಣಮಂತರಾಜ ಮಾಕಡವಾಲೆ ಉಪಸ್ಥಿತರಿದ್ದರು.

loading...