ನ್ಯಾಯಬೆಲೆ ಅಂಗಡಿಯಿಂದ ಬಡಜನತೆಗೆ ಆಗುತ್ತಿರುವ ವಂಚನೆ ತಡೆಗಟ್ಟುವಂತೆ ಒತ್ತಾಯ

0
62


ಕನ್ನಡಮ್ಮ ಸುದ್ದಿ
ಬೆಳಗಾವಿ 30: ನ್ಯಾಯ ಬೆಲೆ ಅಂಗಡಿಗಳಿಂದ ಬಡ ಜನತೆಗೆ ಆಗುತ್ತಿರುವ ಅನ್ಯಾಯ ಹಾಗೂ ವಂಚನೆಯನ್ನು ತಡೆಗಟ್ಟುವಂತೆ ಒತ್ತಾಯಿಸಿ ಭ್ರಷ್ಟಚಾರ ನಿರ್ಮೂಲನಾ ಸಮಿತಿಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾಗಳಿಗೆ ಮನವಿ ಸಲ್ಲಿಸಿದರು.
ನಗರದಲ್ಲಿರುವ ಹಲವಾರು ನ್ಯಾಯಬೆಲೆ ಅಂಗಡಿಗಳು ಬಡವರ ಸೇವೆಗೆಂದು ಸರಕಾರ ಕಲ್ಪಸಿ ಕೊಟ್ಟದೆ. ಆದರೆ ಅಲ್ಲಿ ಬಡ ಜನತೆ ಮೇಲೆ ದಬ್ಬಾಳಿಕೆ ನಡೆಸಿ ್ಲ ಚಹಾ ಫೌಡರ, ಸಾಬೂನು, ಎಣ್ಣೆ ಇನ್ನಿತರ ಕಿರಾಣಿ ಸಾಮಾನು ಖರಿದಿಸುವ ಸಲುವಾಗಿ ಗ್ರಾಹಕ ಮೇಲೆ ಒತ್ತಾಯ ಹಾಕುತ್ತಿದ್ದಾರೆ ಇದರಿಂದ ಫಲಾನುಭವಿಗಳಿಗೆ ತೊಂದರೆ ಆಗುತ್ತಿದೆ. ಆಹಾರ ಮತ್ತು ನಾಗರಿಕ ಸೌಲಭ್ಯ ಸಚಿವ ಯು.ಟಿ ಖಾದರ ಅವರು ಬಡವರ ಮೇಲೆ ಅನ್ಯಾಯ ಕಂಡುಬಂದಲ್ಲಿ ಅಂತಹ ರೇಶನ್ ಅಂಗಡಿ ಪರವಾಣಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರಕಾರದಿಂದ ಸಿಗುವ ಆಹಾರ ಹಾಗೂ ನಾಗರಿಕ ಸೌಲಭ್ಯಗಳನ್ನು ಮಾತ್ರ ಕೊಡಬೇಕು ಹೊರತಾಗಿ ಇನ್ನು ಉಳಿದ ಯಾವುದೇ ವಸ್ತುಗಳನ್ನು ಬಡ ಜನತೆಗೆ ತೆಗೆದುಕೊಳ್ಳಲು ಒತ್ತಾಯ ಮಾಡಬಾರದು ಅಂತ ಸ್ಪಷ್ಟವಾಗಿ ಕಾನೂನು ಹೇಳಿದರು. ಸಹ ಅದನ್ನೂ ಲೆಕ್ಕಿಸದೆ ರಾಜಾರೋಷವಾಗಿ ಅನಧಿಕೃತವಾಗಿ ಕಿರಾಣಿ ಸಾಮಗ್ರಿಗಳನ್ನು ಖರೀದಿಸಲು ಗ್ರಾಹಕರ ಮೇಲೆ ಒತ್ತಾಯ ಹೇರುತ್ತಿದ್ದಾರೆ.
ಇದಕ್ಕೆ ಕಾರಣ ಫುಡ್ ಕಾರ್ಪೋರೇಶನ್ ಆಫ್ ಕರ್ನಾಟಕ ಹಾಗೂ ಫುಡ್ ಆ್ಯಂಡ್ ಸಿವಿಲ್ ಸಪಲಾಯ್ ಇಲಾಖೆ ಅಧಿಕಾರಿಗಳು ಅಂತಹ ಅಧಿಕಾರಿಗಳನ್ನು ಗಮನಿಸಿ ಅವರನ್ನು ಸರಕಾರಿ ಕೆಲಸದ ಜವಾಬ್ದಾರಿಯಿಂದ ಅಮಾನತಿನಲ್ಲಿ ಇಟ್ಟು ಮಾಡಿ ಯಾರಾದರೂ ಈ ರೀತಿ ಬಡ ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಅಂತಹ ಅಂಗಡಿಗಳ ಅನುಮತಿಯನ್ನು ರದ್ದು ಮಾಡಿ ಬಡವರಿಗೆ ಆಗುತ್ತಿರುವ ಅನ್ಯಾಯದಿಂದ ರಕ್ಷಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುಜಿತ ಮುಳಗುಂದ, ನಾಗಪ್ಪ ಲಾಡ್, ಸೋಮನಾಥ, ನಾಗರಾಜ, ಸಂತೊಶ, ಹರಿಶ, ಮಹೇಶ, ದಯಾನಂದ, ಪ್ರವೀಣ, ಕಿರಣ, ಶಿವನಂದ ಅನೇಕರು ಭಾಗವಹಿಸಿದ್ದರು

loading...