ಧನಗರ ಗೌಳಿ ಸಮುದಾಯ ಗ್ರಾಮಕ್ಕೆ ಕಂದಾಯ ಗ್ರಾಮನ್ನಾಗಿ ಘೋಷನೆ

0
117

ಕನ್ನಡಮ್ಮ ಸುದ್ದಿ-ಯಲ್ಲಾಪುರ : ಧನಗರ ಗೌಳಿ ಸಮುದಾಯದವರು ವಾಸಿಸುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಧನಗರ ಗೌಳಿ ಸಮಾಜದ ಮುಖಂಡರು ತಾಲೂಕಿನ ಕಿರವತ್ತಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೇ ಆಗೃಹಿಸಿ ಧನಗರ ಗೌಳಿ ಸಮುದಾಯದ ಮುಖಂಡರು ಕಳೆದ ಬೆಳಗಾವಿ ಅದಿವೇಶನದ ವೇಳೆ ಧರಣಿ ನಡೆಸಿ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಗೌಳಿ ಸಮುದಾಯದವರು ವಾಸಿಸುವ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವುದನ್ನು ಸಮಸ್ತ ಗೌಳಿ ಸಮುದಾಯದವರು ಸ್ವಾಗತಿಸಿದ್ದಾರೆ. ಈ ಕುರಿತ ತಮ್ಮ ಬೇಡಿಕೆಗಳು ಈಡೇರಿದ ಕಾರಣ ತಾಲೂಕಿನ ವಿವಿಧ ಭಾಗಗಳ ಗೌಳಿ ಸಮುದಾಯದವರು ಸಂಭ್ರಮಿಸಿದರು.

loading...