ಸುದ್ದಿಗೊಂದು ಚುಚ್ಚು ಮಾತು

0
40

ದೇವರು ಅಪ್ಪಣೆ ಕೊಟ್ಟರೆ ಮಾತ್ರ ನಾನು  ಬಳ್ಳಾರಿಗೆ ಚುನಾವಣಾ ಪ್ರಚಾರಕ್ಕಾಗಿ  ಹೋಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ

– ಸುದ್ದಿ

ಅವರು ಲೆಕ್ಕ ವಿಲ್ಲದಷ್ಟು ದೇವರ ಪೂಜೆ ಮಾಡುತ್ತಿರುವುದರಿಂದ  ಯಾವ ದೇವರು  ವರ ಕೊಡಬೇಕು ಎಂಬುದು  ಸಮಸ್ಯೆಯಾಗಿದೆ.

ಚುನಾವಣಾ ಆಯೋಗ ಶ್ರೀರಾಮಲು ಅವರಿಗೆ ಫ್ಯಾನ್ ಚಿನ್ಹೆಯನ್ನು ನೀಡಿದೆ. ಅವರು ಸಹ ಅದೇ ಚಿನ್ನೆಯನ್ನು ನೀಡಲು ಕೋರಿಕೆಯನ್ನು ಸಲ್ಲಿಸಿದ್ದರು.

-ಸುದ್ದಿ

ಫ್ಯಾನಿನ ಗಾಳಿಗೆ ಕಮಲ ಹಾರಿ ಹೋಗಲಿ ಎಂದು ರಾಮಲು ಅವರು ಫ್ಯಾನ ಚಿತ್ರವನ್ನು  ತೆಗೆದುಕೊಂಡಿರಬಹುದು.

ಬೆಳಗಾವಿ  ಮಹಾಪೌರ ಮತ್ತು ಉಪ ಮಹಾಪೌರರನ್ನು ಒಳಗೊಂಡು 28 ನಗರ ಸೇವಕರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

– ಸುದ್ದಿ

ಮಂಗ ತಾನು ಕೆಡುವ ಬದಲು ವನವನ್ನೇ ಹಾಳು ಮಾಡಿತು. ಎಂಬಂತೆ  ಉಳಿದ 26 ಸದಸ್ಯರ ಸ್ಥಿತಿಯಾಗಿದೆ.

ಇದುವರೆಗೆ 21 ರೂಪಾಯಿ ಪೆಟ್ರೌಲ ದರವನ್ನು ಹೆಚ್ಚು ಮಾಡಿದ್ದ ಸರಕಾರ ಈಗ ಕೇವಲ 2 ರೂಪಾಯಿ ದರ ಇಳಿಸಿದೆ.                                                                                                                                                     -ಸುದ್ದಿ                     

ಮಕ್ಕಳ ಮೈಮೇಲೆ  ಇದ್ದ ಬಂಗಾರ  ಕಿಸೆಯಲ್ಲಿ ಇದ್ದ ಹಣ ಕಿತ್ತುಕೊಂಡು ಮಕ್ಕಳ ಕೈಗೆ ಚಾಕಲೆಟ ನೀಡಿದಂತೆ ಸರಕಾರ ಜನರಿಗೆ ಮಾಡಿದೆ.

ಪ್ರಚಾರಕ್ಕೆ ಬರುವಂತೆ ಯಡಿಯೂರಪ್ಪನವರಿಗೆ ಸೂಚನೆ ನೀಡುವ ಸ್ಥಿತಿಯನ್ನು ನಾವು ಇಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಹೇಳಿದ್ದಾರೆ.

                                -ಸುದ್ದಿ

ಪ್ರತಿ ದಿನ ನೂರು ಸುಳ್ಳು ಮಾತಾಡುವ  ಈ ಈಶ್ವರಪ್ಪ  ಈಗ ಒಂದೇ ಒಂದು ಸತ್ಯವನ್ನು  ಹೇಳಿದಂತೆ ಆಗಿದೆ.

ನನಗೆ ಪ್ರತಿಪಕ್ಷದವರು ಮಾತ್ರವಲ್ಲ ನನ್ನ ಪಕ್ಷದವರು ಮಾನಸಿಕ ಹಿಂಸೆಯನ್ನು ನೀಡಿದ್ದಾರೆ, ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

-ಸುದ್ದಿ

ಹೊರಗಿನ ಜನರ ಕಾಟಕ್ಕಿಂತ ಮನೆಯವರ ಕಾಟ ಹೆಚ್ಚಾಗಿದೆ ಎಂದು ಅವರು ಈ ಮೂಲಕ ತಮ್ಮ ಅಳಲನ್ನು ತೋಡಿಕೊಂಡಂತೆ  ಕಂಡು ಬರುತ್ತದೆ.

ಇದುವರೆಗೆ ಯಡಿಯೂರಪ್ಪ ಮತ್ತು ರೆಡ್ಡಿಗಳು ಬೆನ್ನು ಬಿದ್ದಿದ್ದ ಜೆಡಿ ಎಸ್ ರಾಜ್ಯಾಧ್ಯಕ್ಷ ಹಾಗೂ  ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಈಗ ಕಾಂಗ್ರೆಸ್ ಬೆನ್ನು ಬಿದ್ದಿದ್ದಾರೆ.

-ಸುದ್ದಿ

ಈ ಕುಮಾರಸ್ವಾಮಿ ಯಾವಾಗ ಎತ್ತಕಡೆಗೆ ಹೊರಳುತ್ತಾರೋ  ಎಂಬುದು ಅವರ ತಂದೆ ದೇವೇಗೌಡರಿಗೂ ಗೊತ್ತ್ತಾಗುವುದಿಲ್ಲ.

ಮಕ್ಕಳ ದಿನದಂದು 80 ಮಕ್ಕಳು ಮುಖ್ಯ ಮಂತ್ರಿ ಸದಾನಂದ ಗೌಡರಿಗೆ ಒಂದರ ಮೇಲೆ ಒಂದು  ಪ್ರಶ್ನೆ ಕೇಳಿ ತಬ್ಬಿಬ್ಬು ಗೊಳಿಸಿದ್ದಾರೆ.

-ಸುದ್ದಿ

ನೀವು ಮುಖ್ಯ ಮಂತ್ರಿ ಇರಬಹುದು ಆದರೆ ನಿಮ್ಮನ್ನು ತಬ್ಬಿಬ್ಬು ಗೊಳಿಸುವ ಶಕ್ತಿ ನಮಗಿದೆ. ಎಂದು ಮಕ್ಕಳು ಮುಖ್ಯ ಮಂತ್ರಿಗಳಿಗೆ ಮನವರಿಕೆ  ಮಾಡಿ ಕೊಟ್ಟಿರಬಹುದು.

 

 

loading...

LEAVE A REPLY

Please enter your comment!
Please enter your name here