ಯೋಧರ ದೌರ್ಜನ್ಯ ಎಂದು ಅಪಪ್ರಚಾರ ಮಾಡುವವರು ಯೋಧರಿಗೇನು ಗೌರವ ಕೊಟ್ಟಾರು?

0
221

ಕನ್ನಡಮ್ಮ ಸುದ್ದಿ: ಕಳೆದ ಹದಿನೈದು ದಿನದಿಂದ ಸಾಮಾಜಿಕ ಜಾಲ ತಾಣಗಲಲ್ಲಿ ಕಾಶ್ಮೀರಿ ಗೂಂಡಾಗಳು ನಮ್ಮ ಸೈನಿಕರ ಮೇಲೆ ಕಲ್ಲು ತೂರುತ್ತಿರುವ ಹಲವಾರು ವಿಡೀಯೋಗಳು ಹರಿದಾಡುತ್ತ ಬಮದರೂ ಕೂಡಾ ಅದನ್ನು ಟಿವಿ ಚಾನೆಲಗಳು, ಪತ್ರಿಕೆಗಳು ಅಷ್ಟೊಂದು ಅದರ ಬಗ್ಗೆ ಮಾತನಾಡಲೂ ಇಲ್ಲ, ಬರೆಯಲೂ ಇಲ್ಲ. ಆವತ್ತು ಚುನಾವಣಾ ಕೆಲಸ ಮುಗಿಸಿ ಹೊರಟ ಯೋಧರ ಮೇಲೆ ವಿವಿಧ ರೀತಿಯ ಅಸಹ್ಯಕರ ದೌರ್ಜನ್ಯಗಳು ನಡೆದರೂ ಎಲ್ಲವೂ ಮುಚ್ಚಿಕೊಂಡು ಕುಳಿತ್ತಿದ್ದವು. ಸೈನಿಕರ ಮೇಲಿರುವ ಗೌರವಕ್ಕಾಗಿ ಪ್ರಜ್ಞಾವಂತ ರಾಷ್ಟ್ರ ಭಕ್ತರು ಮಾತ್ರ ಸುಮ್ಮನಿರಲಿಲ್ಲ. ಸಾಮಾಜಿಕ ಜಾಲ ತಾಣಗಳ ಮುಖಾಂತರ ಪ್ರತಿಕ್ರಿಯೆಯನ್ನು ಕೊಡಲಾರಂಭಿಸಿದ್ದರು.
ಇಷ್ಟೆಲ್ಲ ನಡೆದ ಮೇಲೆ ವಾಸ್ತತವ ಸ್ಥತಿಗಳ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವರು ಸೈನಿಕರ ಬೆಂಬಲವಾಗಿ ಸರ್ಕಾರ ಇದೆ ಎಂದಾಗ ಎಲ್ಲರಿಗೂ ಅತ್ಯಂತ ಖುಷಿಯು ಆಯಿತು. ನಂತರ ದಿನದಲ್ಲಿ ಮತ್ತೊಂದು ವೀಡಿಯೋ ಹರಿದಾಡಲಾರಂಭಿಸಿತು. ಕಲ್ಲು ತೂರಾಟ ಪುಂಡರ ದಾಳಿ ತಡೆಯಲು ಕಲ್ಲು ತೂರಿದ ಪುಂಡನೊಬ್ಬನನ್ನು ಸೈನಿಕ ಜಿಪಿನ ಮುಂದೆ ಕಟ್ಟಿದಾಗ ಕೆಲವೊಂದು ಮಾಧ್ಯಮಗಳು ಜಾಗೃತವಾದವು. ಅದು ಯಾವ ಜಾಗೃತವೆಂದರೆ “ಯೋಧರ ದೌರ್ಜನ್ಯ?” ಹೆಸರಿನಡಿ ಕಾರ್ಯಕ್ರಮ ಕೊಡಲು!! ಯೋಧರ ದೌರ್ಜನ್ಯ ಎಂದು ಅಪಪ್ರಚಾರ ಮಾಡುವ ಇವರು ಯೋಧರಿಗೇನು ಗೌರವ ಕೊಟ್ಟಾರು? ಅಷ್ಟೆಯಲ್ಲ ಕೆಲವೊಂದು ಎಂಜಲು ಕಾಸಿನ ಗಂಜಿ ಗಿರಾಕಿಗಳು ತಮ್ಮ ಫೇಸಬುಕ್ ಗೋಡೆಯ ಮೇಲೆ ಅದೇ ಸೈನಿಕ ಜಿಪಿನ ಮುಂದೆ ಪುಂಡನೊಬ್ಬನನ್ನು ಕಟ್ಟಿದ ಪೋಟೋ ಹಾಕಿ “ಭಾರತೀಯ ಪ್ರಜೆಯಾಗಿ ನಾನಿದನ್ನು ಒಪ್ಪಲಾರೆ” ಮತ್ತೊಂದು ಪೋಸ್ಟನಲ್ಲಿ ಇನ್ನೊಂದು ಪೋಟೋ ಹಾಕಿ ಅದಕ್ಕೆ “ಶ್ರೀ ನಗರದ 18ರ ಹುಡುಗ ಸಜದ್ ಹಸನ್ ಕಾರಣವೇ ಇಲ್ಲದೇ ಮಿಲಿಟರಿಯವರಿಂದ ಗುಂಡೇಟು ತಿಂದು ಸತ್ತಿದ್ದಾನೆ. ಹಾಗೆನಾದರು ಕಾರನ ಬೇಕೆ ಬೇಕೆಂದರೆ ಆತ ಕಾಶ್ಮೀರಿ, ಮತ್ತು ಮುಸ್ಮಿ” ಬರಹದೊಂದಿಗೆ ಹಾಕಿ ತಮ್ಮ ದೇಶ ಪ್ರೇಮ ಮೆರೆಯಲಾಯಿತು. ಇಂತಹ ಭಯಂಕರ ಚಿಂತನೆ ಹಿಂದಿರುವ ಷಡ್ಯಂತ್ರ ಹುಡುಕುವುದೇನು ಕಷ್ಟವಲ್ಲ ಟಿವಿ ಚಾನೆಲ್ ತನ್ನ ಟಿ ಆರ್ ಪಿಗಾಗಿ ಮಾಡಿದರೆ ಫೇಸಬುಕ್ ಪ್ರೇಮಿ ಹಿಂದೂ ಮುಸ್ಲಿಂರನ್ನು ಕೆರಳಿಸಿ ಕೋಮು ಗಲಭೆ ಎಬ್ಬಿಸಿ ವಿಕೃತ ಮಜ ಉಡಾಯಿಸುವುದು ಮತ್ತು ಮಾಧ್ಯಮಗಳಿಂದ ಬಿಟ್ಟಿ ಪ್ರಚಾರ ಗಳಿಸಿಕೊಳ್ಳುವ ಉದ್ದೇಶ. ಇದು ಇವರ ರಾಷ್ಟ್ರ ಪ್ರೇಮ ಬಹುಶಃ ಈ ರೀತಿ ಪೋಸ್ಟ್ ಹಾಕುವಾಗ ನಮ್ಮ ಸೈನ್ಯದಲ್ಲಿ ಮುಸ್ಲಿಮರು ಇದ್ದಾರೆಂಬುವ ಪರಿಜ್ಞಾನವು ಇರಲಿಕ್ಕಿಲ್ಲ.
ಕಾಶ್ಮೀರದಲ್ಲಿ ಇಂತಹ ಘಟನೆಗಳೇನು ಹೊಸದಲ್ಲ. ನಮ್ಮ ಸೈನಿಕರು ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸುವ ಪ್ರತಿ ಸಂಧರ್ಭದಲ್ಲಿಯು ಈ ಪ್ರತ್ಯೇಕವಾದಿ ಪುಂಡರು ಅಡ್ಡಿಪಡಿಸುವುದಲ್ಲದೆ ಮಾರಣಾಂತಿಕ ಹಲ್ಲೆ ನಡೆಸುತ್ತಾರೆ. ಒಬ್ಬಂಟಿಯಾಗಿ ಸಿಕ್ಕ ಯೋಧರನ್ನು ಭಯಂಕರವಾಗಿ ಹತ್ಯೆ ಮಾಡುತ್ತಾರೆ. ಕಾಶ್ಮೀರ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆ ಸಂಧರ್ಭದಲ್ಲಿ ಕಲ್ಲು ತೂರುವ ಗುಂಡಾಗಳೆ ಭಯೋತ್ಪಾದಕರ ರಕ್ಷಣೆಗೆ ನಿಲ್ಲುತ್ತಾರೆ. ನಮ್ಮ ಸ್ಯನಿಕರ ಮೇಲೆ ಬೀಳುವ ಪ್ರತಿಯೊಂದು ಕಲ್ಲಿಗೂ ಪಾಕಿಸ್ತಾನದಿಂದ ಪ್ರೋತ್ಸಾಹ ಧನ ಬರುತ್ತದೆ. ಇವರು ಹೊಡೆಯುವ ಪ್ರತಿ ಕಲ್ಲಿಗೂ ಪಾಕಿಸ್ತಾನ ಬೆಲೆ ಕಟ್ಟುತ್ತಿದೆ. ಕಲ್ಲು ತೂರಾಟಕ್ಕೆ ನಮ್ಮ ದೇಶದ ಹಲವಾರು ಯೋಧರು ಬಲಿಯಾಗಿದ್ದಾರೆ. ಯೋಧರಿಗಾಗಿ ಯಾವುದೇ ಬುದ್ದಿಜೀವಿಗಲು ಬಾಯಿ ತೆರೆಯುವುದಿಲ್ಲ. ಮಾನವ ಹಕ್ಕಿನ ಹೋರಾಟಗಾರರು ಹೋರಾಟಕ್ಕೆ ನಿಲ್ಲುವುದಿಲ್ಲ. ಬದಲಾಗಿ ದುಡ್ಡಿನ ಆಸೆಯಿಂದ ಸೇನೆಗೆ ಸೇರುತ್ತಾರೆಂದು ಆಡಿಕೊಳ್ಳುತ್ತಾರೆ. ನಮ್ಮ ದೇಶದ ಜನ ಯಾವತ್ತೂ ದುಡ್ಡಿಗಾಗಿ ಸೇನೆ ಸೇರಿದವರಲ್ಲ. ದುಡ್ಡಿಗಾಗಿಯೆ ಸೇನೆ ಸೇರಿದರೆ ಇಂದು ನಮ್ಮ ಸೈನಿಕರ ಸಂಖ್ಯೆ ಎಷ್ಟಿರತ್ತಿತ್ತು? ಅಣ್ಣ ತಮ್ಮ, ಅಕ್ಕ ತಂಗಿ, ಅಪ್ಪ ಅಮ್ಮ, ಗಂಡ ಹೆಂಡತಿ ಹೀಗೆ ಎಲ್ಲರನ್ನೂ ಬಿಟ್ಟು ಹೋಗುತ್ತಾರೆಂದರೆ ಅದಕ್ಕೆ ಹಣವೇ ಕಾರಣವಲ್ಲ. ಇಂದಿನ ದಿನಮಾನಗಲಲ್ಲಿ ಹಲವಾರು ದಾರಿ ಇವೆ. ಒಬ್ಬ ಸಾಮಾನ್ಯ ಮನುಷ್ಯ ದಿನಕ್ಕೆ ಕನಿಷ್ಠ ಐನೂರರಾದರು ಗಳಿಸಬಹುದು. ಅಷ್ಟಕ್ಕಾಗಿ ಆತ ಜೀವದ ಹಂಗು ತೊರೆದು ಸಿಯಾಚಿನ್ ಗಡಿಗೆ ಹೋಗಬೇಕಿಲ್ಲ! ಇಂತಹ ಗೂಂಡಾಗಳೂ ಕಾಶ್ಮೀರದಲ್ಲಿ ಮಾತ್ರವಲ್ಲ, ಜೆ.ಎನ್.ಯು. ಮತ್ತು ಹೈದರಾಬಾದ್ ವಿಶ್ವವಿದ್ಯಾಲಯಗಳಲ್ಲಿ ತುಂಬಿದಲ್ಲದೆ ಭಯೋತ್ಪಾದಕರ ಸ್ಮರಣಾರ್ಥ ಕಾರ್ಯಕ್ರಮ ಮಾಡಿ ಕ್ಯಾಂಡಲ್ ಲೈಟ್ ಬೆಳಗುತ್ತ ಭಾರತೀಯ ಸೈನ್ಯಕ್ಕೆ ಧಿಕ್ಕಾರ ಕೂಗುತ್ತಾರೆ. ಪದೇ ಪದೇ ಇಂಡಿಯನ್ ಆರ್ಮಿ ಗೋಬ್ಯಾಕ್ ಎನ್ನತ್ತಾರಲ್ಲ; ಒಂದು ವೇಳೆ ಭಾರತೀಯ ಸೈನ್ಯವೇನಾದರೂ ಹಿಂದೆ ಬಂದರೆ ಕಾಶ್ಮೀರ ಬಿಡಿ ದೆಹಲಿ ಕೂಡ ನಮ್ಮ ವಶದಲ್ಲಿರುವುದಿಲ್ಲ.
ಕಾಶ್ಮೀರ ಯುವಕರ ರೀತಿಯ ನಡುವಳಿಕೆಗೆ ಯಾರು ಕಾರಣವೆಂದು ಅವಲೋಕನ ಮಾಡುತ್ತ ಹೋದರೆ ಕೆಲವೊಂದು ಕಟುಸತ್ಯಗಳು ಕಣ್ಣಿಗೆ ರಾಚುತ್ತವೆ. ಇಂತಹ ತಂಟೆ ತಕರಾರು ಗಲಭೆಗಳಿಗೆ ಮೂಲ ಕಾರಣವೆ ಬುದ್ದಿಜೀವಿಗಳು, ಪ್ರತ್ಯೇಕವಾದಿಗಳು, ಉಗ್ರರ ಹತ್ಯೆಯಾದಾಗ ಎದ್ದು ನಿಲ್ಲುವ ಮಾನವ ಹಕ್ಕು ಆಯೋಗದ ಮಹಾನುಭಾವರು, ಇಂತಹ ಗಲಭೆ, ತಂಟೆ, ತಕರಾರುಗಳಲ್ಲಿ ಯಾವುದೇ ಬುದ್ದಿಜೀವಿಗಳ ಮಕ್ಕಳಾಗಲಿ, ಅಥವಾ ಪ್ರತ್ಯೇಕವಾದಿಗಳ ಮಕ್ಕಳಾಗಲಿ ಕಾಣಸಿಗುವುದಿಲ್ಲ. ತಮ್ಮ ತಮ್ಮ ಮಕ್ಕಳಿಗೆ ಅವರು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸಿ ಇದರಿಂದ ದೂರ ಇಡುತ್ತಾರೆ. ಸಾಮಾನ್ಯ ಜನರ ಮಕ್ಕಳನ್ನು ಶಿಕ್ಷಣದಿಂದ ದೂರ ಇರಿಸಿ, ಶಾಲಾ ಕಾಲೇಜುಗಳಿಗೆ ಬೆಂಕಿ ಹೆಚ್ಚಿಸಿ ಅಲ್ಲಿನ ಯುವಕರನ್ನು ದಾರಿ ತಪ್ಪಿಸಿ ನಿರುದ್ಯೋಗಿಗಳನ್ನು ಮಾಡುತ್ತಾರೆ. ಪಾಕಿಸ್ತಾನದಿಂದ ಬರುವ ಖೋಟಾ ನೋಟಾ ಹಂಚಿ ಧರ್ಮದ ಅಫೀಮು ತಲೆಗೆರಿಸಿ ಭಯೋತ್ಪಾದಕರನ್ನಾಗಿ ಮಾರ್ಪಡಿಸುತ್ತಾರೆ.
ಇಂದು ನಾವೆಲ್ಲ ನೆಮ್ಮದಿಯ ಹಗಲು ರಾತ್ರಿಗಳನ್ನು ಅನುಭವಿಸುತ್ತಿದ್ದೆವಲ್ಲ ಅದಕ್ಕೆ ಶ್ರೀ ರಕ್ಷೆಯಾಗಿ ನಿಂತಿದ್ದು ಬುದ್ದಿಜೀವಿ ಎನಿಸಿಕೊಂಡವರ ಒಣ ಸಿದ್ದಾಂತಗಲಲ್ಲ. ರಕ್ತ ಸಿಕ್ತವಾಗಿ ನಿದ್ರ ನೀರಡಕೆ, ಹಸಿವನ್ನು ಸಹಿಸಿಕೊಂಡು ನಿಂತಿರುವ ಇಂಡಿಯನ್ ಆರ್ಮಿಯಿಂದ ಮಾತು ಮಾತಿಗೆ ಉಮರ್ ಖಾಲಿದ, ಕಣ್ಣಯ್ಯನನ್ನು ಸಮರ್ಥಿಸುವ ಬುದ್ದಿ ಜೀವಿಗಳ ಬಾಯಿಗಳು ಇಂದು ಬಂದಾಗಿದ್ದು ಯಾಕೆ ಅಂತ ತಿಳಿಯುತ್ತಿಲ್ಲ. ಗೊತ್ತು ನಮಗೆ!! ಅವರ ಪೇಸ್ಬುಕಗಳ ಪ್ರೊಪೈಲ್ ಜಾಗಕ್ಕೆ ದೇಶ ಒಡಕು ಘೋಷಣೆ ಕೂಗುವ ಕಣ್ಣಯ್ಯನ, ಉಮರ್ ಖಾಲಿದರನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ಕೊಡುವುದಿಲ್ಲ ಅಂತ. ಪದೇ ಪದೇ ಸಾಮಾನ್ಯರ ಪರವೆಂದು ಬಿಟ್ಟಿ ಭಾಷಣ ಬಿಗಿಯುವ ಇವರು ಸಾಲು ಸಾಲು ಸೈನಿಕರ ಹತ್ಯೆಗಳಾದರೂ ಕೂಡ ಒಂದೇ ಒಂದು ಸಲ ಸೈನಿಕರಿಗೆ ಸಾಂತ್ವನ ಹೇಳುವುದಿಲ್ಲ. ಹಾಗೆಯೇ ಮಾನವ ಹಕ್ಕು ಹೋರಾಟಗಾರರು ಎಂದೆನಿಸಿಕೊಂಡವರೂ ಅಷ್ಟೇ, ಉಗ್ರ “ಬುರ್ಹಾನ ವಾನಿ” ಸತ್ತಾಗ ಹೋರಾಟಕ್ಕೆ ಇಳಿದಿದ್ದನ್ನು ನೋಡಿದರೆ ಮಾನವ ಹಕ್ಕು ಹೋರಾಟಗಾರರೋ ಇಲ್ಲ ಭಯೋತ್ಪಾದಕರ ರಕ್ಷಕರೋ ಎನ್ನುವಂತಿತ್ತು, ಮಾನವ ಹಕ್ಕುಗಳು ಭಯೋತ್ಪಾದಕರಿಗೊ ಅಥವಾ ಜನಸಾಮಾನ್ಯರಿಗೊ ಒಂದು ತಿಳಿಯದು. ಎಷ್ಟೊಂದು ಸೈನಿಕರ ಹತ್ಯೆ ಮಾಡಲಾಗಿದೆ. ಸೈನಿಕರ ಮೇಲೆ ನಿರಂತರವಾಗಿ ಕಲ್ಲು ತೂರಾಟ ನಡೆಯುತ್ತಿವೆ ಈಗ ಅವರು ಎಲ್ಲಿಯೂ ಪ್ರತಿಭಟಿಸುತ್ತಿಲ್ಲ. ಅಂದರೆ ಅವು ರಕ್ಷಕರನ್ನು ಹೊರತುಪಡಿಸಿ ರಾಕ್ಷಸರಿಗೆ ಮಾತ್ರವೆಂದು ಸಾಬೀತಾಗಿವೆ.
ಕಾಶ್ಮೀರಕ್ಕಾಗಿ ಭಾರತ ಏನೆಲ್ಲ ಮಾಡುತ್ತಿದೆ! ಆದರೆ ಕಾಶ್ಮೀರೆನು ಭಾರತಕ್ಕೆ ಮಾಡುತ್ತಿದೆ? ಕಾಶ್ಮೀರಗಳಿಗೆ ಇತರರಷ್ಟು ತೆರಿಗೆ ಇಲ್ಲ. ಕಾಶ್ಮೀರಿ ಗೂಂಡಾಗಳು ಎಷ್ಟೊಂದು ವಿರೋಧಿ ಮಾಡಿದರೂ ವರ್ಷದ ಹನ್ನೆರಡು ತಿಂಗಳು ಭಾರತೀಯ ಸೇನೆ ಅವರ ರಕ್ಷಣೆಗಾಗಿಯೆ ಶ್ರಮಿಸುತ್ತಿದೆ. ಆರ್ಮಿ ಕ್ಯಾಂಪಗಳಿಂದ ಸಾವಿರಾರು ಯುವಕರಿಗೆ ಶಿಕ್ಷಣ ನೀಡಲಾಗುತ್ತದೆ. ಅಲ್ಲಿನ ಸರ್ಕಾರ ನೀಡದೆ ಇರುವ ಶೈಕ್ಷಣಿಕತೆಯನ್ನು ಸ್ವತಹಃ ಆರ್ಮಿಯವರೆ ಸ್ಕೂಲುಗಳನ್ನು ನಡೆಸುತ್ತಿದ್ದಾರೆ. ಆನರ ಆರೋಗ್ಯ ಸಮಸ್ಯೆಗೆ ಆರ್ಮಿಯವರೆ ಹಾಸ್ಪಿಟಲಗಳ ವ್ಯವಸ್ಥೆ ಮಾಡಿದ್ದಾರೆ. ಮಹಿಳೆಯರ ನಿರುದ್ಯೋಗ ತಣ್ಣಿಸಲು ಕರಕುಶಲ ತರಬೇತಿ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಯಾವುದಕ್ಕೂ ಕೊರತೆ ಇಲ್ಲದಂತೆ ಕಾಶ್ಮೀರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಭಾರತೀಯ ಸೈನಿಕರು ಇಂದು ಕಾಶ್ಮೀರಿಗಳ ಕಲ್ಲು ಹೊಡೆತ ಸಹಿಸಿಕೊಂಡು ಸುಮ್ಮನೆ ಇದ್ದಾರೆಂದರೆ ಅದಕ್ಕೆ ಬೇರೆ ಅರ್ಥ ಕೊಡಬೇಕಿಲ್ಲ. ಕಾಶ್ಮೀರದಲ್ಲಿ ಈ ಪ್ರತ್ಯೇಕವಾದಿಗಳ ಸದ್ದಡಿಗಿಸಲು ಹೆಚ್ಚಿನ ಸಮಯವೇನು ಬೇಕಿಲ್ಲ. ಪಾಕಿಸ್ತಾನಕ್ಕೆ ಋಣಿಯಾಗಿದ್ದವರ ತಲೆ ಉರುಳಿಸಲಿಕೆ ಕ್ಷಣ ಮಾತ್ರ ಸಾಕು. ಭಾರತ ಎಂದರೆ ಏನೆಂದು ಇನ್ನಾದರೂ ಅರಿಯಲಿ.

ಲೇಖನ
ಶಿವಾನಂದ ಶಿವಲಿಂಗಪ್ಪ ಸೈದಾಪೂರ
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

loading...