ಹಾವೇರಿ : ನೂರಾರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಕಾರಣಾಂತರಗಳಿಂದ ನಶಿಷಿ ಹೋಗಿರುವ ಶಿಗ್ಗಾವಿ ತಾಲೂಕಿನ (ಬೇಚರಕ) ಅತಿಕ್ರಮಣಗೊಂಡ ಗಲಗಿನಕಟ್ಟಿ ಗ್ರಾಮವನ್ನು ಅಭಿವೃದ್ದಿ ಪಡಿಸಿ ಜನವಸತಿಗೆ ಅವಕಾಶ ಕಲ್ಪಿಸಲು ಆಗ್ರಾಹಿಸಿ ಕನಾರ್ಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಕರವೇ ಜಿಲ್ಲಾ ಅಧ್ಯಕ್ಷ ರಾಮು ತಳವಾರ ಮಾತನಾಡಿ ನೂರಾರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಕಾರಣಾಂತರಗಳಿಂದ ನಶಿಷಿ ಹೋಗಿರುವ ಶಿಗ್ಗಾವಿ ತಾಲೂಕಿನ (ಬೇಚರಕ) ಅತಿಕ್ರಮಣಗೊಂಡ ಗಲಗಿನಕಟ್ಟಿ ಗ್ರಾಮವು ಬೀಕರ ರೋಗಗಳು, ಸುತ್ತ ಮುತ್ತಲೂ ಅರಣ್ಯ ಪ್ರದೇಶ ವ್ಯಾಪಿಸಿದ್ದರಿಂದ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಇಲ್ಲಿನ ಜನರು ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಕಾರಣ ಈ ಗ್ರಾಮವನ್ನು ಅಭಿವೃದ್ದಿ ಪಡಿಸಿ ವಸತಿಗೆ ಜಾಗೆರಹಿತ ಬಡ ಕುಟಂಬಗಳಿಗೆ ವಿತರಿಸುವಂತೆ ವತ್ತಾಯಿಸಿದರು
ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಎಂ.ಕೆ ತಿಮ್ಮಾಪುರ ಮಾತನಾಡಿ ಹೆಚ್ಚುತ್ತಿರುವ ಜನ ಸಂಖ್ಯೆಯಿಂದಾಗಿ ನಶಿಷಿಹೋಗಿರುವ ಗಲಗಿನಕಟ್ಟಿ ಗ್ರಾಮವನ್ನು ಅಭಿವೃದ್ದಿ ಪಡಿಸುವುದು ಅವಶ್ಯಕವಿದ್ದು, ಕಂದಾಯ ಇಲಾಖೆಯೂ ಈ ಗ್ರಾಮವನ್ನು ಹಲವಾರು ವರ್ಷಗಳಹಿಂದೆ ಅಂದಲಗಿ ಗ್ರಾಮದಲ್ಲಿ ವೀಲಿನಗೊಳಿಸಿದ್ದು ಆ ಗ್ರಾಮದ ಗ್ರಾಮ ಪಂಚಾಯತಿಯೂ ಈ ಬಗ್ಗೆ ಯಾವುದೆ ದಾಖಲಾತಿಗಳನ್ನು ಇಟ್ಟಿರುವುದಿಲ್ಲ. ಕನಿಷ್ಠ ಪಕ್ಷ ಪಂಚಾಯತ ಆಸ್ತಿ ರಜಿಷ್ಟಾರನಲ್ಲಿಯೂ ಈ ಬಗ್ಗೆ ನಮೂದಿಸಿರುವುದಿಲ್ಲ ಕಾರಣ ನಶಿಷಿ ಹೋಗಿರುವ ಅತಿ ಕ್ರಮಣಗೊಂಡ ಗಲಿಗಿನಕಟ್ಟಿ ಗ್ರಾಮವನ್ನೂ ಅತಿ ಕ್ರಮಣದಾರರಿಂದ ತೆರವು ಗೊಳಿಸು ವಸತಿ ರಹಿತ ಗಲಗಿನಕಟ್ಟಿ ಗ್ರಾಮಸ್ಥರಿಗೆ ಜಾಗೆ ವಿತರಿಸಲು ಜಿಲ್ಲಾಅಧಿಕಾರಿಗಳಲ್ಲಿ ವಿನಂತಿಸಿದರೂ.
ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಬಸವರಾಜ.ಪು.ವರ್ದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಹೀರೆಮಠ, ಜಿಲ್ಲಾ ಮಹಿಳಾ ಅಧ್ಯಕ್ಷರಾದ ವಿಜಯಾ ಬಳ್ಳಾರಿ, ಶಡಗರವಳ್ಳಿ ಗ್ರಾಮ ಘಟಕದ ಅಧ್ಯಕ್ಷ ಚಂದ್ರಪ್ಪ ತಿ ಮುಂಚಿನಕೊಪ್ಪ, ಉಪಾಅಧ್ಯಕ್ಷ ರಾಘವೇಂದ್ರ ಯ ಕೆಳಗಿನಮನಿ, ಪಕ್ಕಿರೇಶ ಯ ಬಜಂತ್ರಿ, ಮಾಲತೇಶ ನಿ ಮತ್ತಿಘಟ್ಟಿ, ಬಸವಂತಪ್ಪ ಹ ನೆಗಳೂರು, ನಾಗಯ್ಯ ಹೀರೆಮಠ ಪಕ್ಕೀರಪ್ಪ ಹ ಹರಿಜನ, ಪಕ್ಕಿರೇಶ ಚ ಚಲವಾದಿ, ಜಗದೀಶ ಪ ಕಾಳೆ, ಬಸವರಾಜ ಹ ಕೆಳಗಿನಮನಿ, ರಾಮಪ್ಪ ಯಲ್ಲಾಪುರ, ರಾಮಣ್ಣ ಹೀರಗಣ್ಣನವರ, ಜಗದೀಶ ರ ಓಲೇಕಾರ, ನಿಂಗಪ್ಪ ಪು ಬಸರಿಕಟ್ಟಿ,ತಿಪ್ಪ ಶ್ಯಾಬಳ.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...