ಕುಳ್ಳೂರ: ಕನಕದಾಸರ 524 ನೇ ಜಯಂತ್ಯೌತ್ಸವ

0
56

ಕುಳ್ಳೂರ,(ತಾ| ರಾಮದುರ್ಗ)17- ಇಲ್ಲಿಯ ಕನಕ ಸೇವಾ ಸಮಿತಿ ಆಶ್ರಯದಲ್ಲಿ  ದಾಸ ಶ್ರೇಷ್ಠ ಭಕ್ತ ಕನಕದಾಸರ 524 ನೇ ಜಯಂತ್ಯೌತ್ಸವವನ್ನು ಕಾರ್ಯಕ್ರಮ ವಿಜೃಂಭನೆುಂದ ಜರುಗಿತು.

ಸಮಾರಂಭದ ಸಾನಿಧ್ಯ ವಹಿಸಿದ ಸ್ಥಳಿಯ ಕಲ್ಮಠ ಮಠದ ಶ್ರೀ ಬಸವಾನಂದ ಭಾರತಿ ಸ್ವಾಮಿಜಿ ಮಾತನಾಡಿ, ಕನಕ ದಾಸರ ತತ್ವ ಆದರ್ಶಗಳನ್ನು ಜನಸಮಾನ್ಯರು ಅಳವಡಿಸಿಕೊಂಡು ಸರಳ ಜೀವನ ನಡೆಸಬೇಕೆಂದರು.

ಅತಿಥಿಗಳಾದ ಬೆಂಗಳೂರ ಜಯನಗರ ಆರ್.ಟಿ.ಒ ಮರಲಿಂಗನ್ನವರ ಮತ್ತು ಅಧ್ಯಕ್ಷತೆ ವಹಿಸಿದ ಎಮ್.ಎಸ್.ಬಸರಗಿ ಮಾತನಾಡಿದರು,

ಗೋಕಾಕ ಎಲ್ಇಟಿ ಕಾಲೇಜಿನ ಪ್ರೊ| ಶಿವಾನಂದ ತಿಪ್ಪನ್ನವರ ಮಾತನಾಡಿ, ಕನಕದಾಸರು ಕಂಡ ಜ್ಯಾತ್ಯಾತೀತ ಸಮಾಜ ನಿರ್ಮಾಣದ ಕನಸು ನನಸಾಗಬೇಕು ಎನ್ನುತಾ ಕುರಬ ಜನಾಂಗದ ಶಕ್ತಿ ಮತ್ತು ಅದರ ಸದ್ಭಳಕೆಯನ್ನು ಉತ್ತಮ ಸಮಾಜ ನಿರ್ಮಾನಕ್ಕೆ ಶ್ರಮೀಸಬೇಕೆಂದರು ಎಂದರು.

ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಬೋಳದೆಲ್ಲಿ ಸಿ.ಬಿ.ಪಾಟೀಲ, ಪಿ.ಎಸ್.ಶಿಂಧೆ, ಕೆ.ಎಚ್.ಹಿರೆಮನ್ನವರ, ಭೀಮಶಿ ಬಸರಗಿ, ಹನಮಂತ ತಿಪ್ಪನ್ನವರ, ಸುಭಾಸ ಕೋಣೆಕುಡಿ, ನಿಂಗನ್ನ ಕಳಸನ್ನವರ, ನಿಂಗಣ್ಣ ಬಳಗೇರಿ, ನಾಗಣ್ಣ ಜಂಬಗಿ ಮತ್ತು ಕನಕ ಸೇವಾ ಸಮಿತಿಯವರು ಮತ್ತಿತರರು ಇದ್ದರು. ಆರ್.ಎಸ್.ಉದನ್ನವರ ಸ್ವಾಗತಿಸಿ  ನಿರೂಪಿಸಿದರು.

ಇದಕ್ಕೂ ಮುಂಚೆ ಗ್ರಾಮದಲ್ಲಿ  ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಯು  ಡೋಳ್ಳು ಕುಣಿತ, ವಾದ್ಯ ಮೇಳದೊಂದಿಗೆ ಜರುಗಿತು.

 

loading...

LEAVE A REPLY

Please enter your comment!
Please enter your name here