ಸಹಕಾರಿ ಸಪ್ತಾಹ ದಿನಾಚರಣೆ ಇಂದು

0
32

ಮೂಡಲಗಿ,17-ಇಲ್ಲಿಯ ಸಹಕಾರಿ ಸಂಘಗಳ ಒಕ್ಕೂಟ ಮತ್ತು ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ದಿ ಸಂಘ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ 58 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ದಿನಾಚರಣೆ ಕಾರ್ಯಕ್ರಮ ಇಂದು  ದಿ.18 ರಂದು ಸಾಯಂಕಾಲ 4 ಕ್ಕೆ ಪಿಕೆಪಿಎಸ್ ಸಭಾ ಭವನದಲಿ ಏರ್ಪಡಿಸಲಾಗಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಲಿಸಿದ್ದಾರೆ.

ಸಾನಿಧ್ಯವನ್ನು ಶ್ರೀ ಶ್ರೀಪಾದಬೋಧ ಸ್ವಾಮಿಜಿ ವಹಿಸುವರು. ಇಲ್ಲಿಯ ಭಾಗ್ಯಲಕ್ಷ್ಮೀ ಅರ್ಬನ ಕೊ-ಆಪ್ ಕ್ರೇಡಿಟ್ ಸೊಸಾಯಟಿ ಅಧ್ಯಕ್ಷ ಡಾ: ಪ್ರಕಾಶ ಎಸ್.ನಿಡಗುಂದಿ ಅಧ್ಯಕ್ಷತೆ ವಹಿಸುವರು.

ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಸುಭಾಸ ಜಿ. ಢವಳೇಶ್ವರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪಿಕೆಪಿಎಸ್ ಅಧ್ಯಕ್ಷ  ಮಲ್ಲಪ್ಪ ಬಿ.ಢವಳೇಶ್ವರ ಉಪನ್ಯಾಸಕರಾಗಿ  ಮೂಡಲಗಿ  ಶಿಕ್ಷಣ ಸಂಸ್ಥೆಯ ಡಿಎಡ್ ಕಾಲೇಜ ಪ್ರಾ|| ಸುರೇಶ ಲಂಕೆಪ್ಪನವರ ಭಾಗವಹಿಸುವರು

loading...

LEAVE A REPLY

Please enter your comment!
Please enter your name here