ವಕೀಲರಿಂದ ಧರಣಿ ಸತ್ಯಾಗ್ರಹ

0
22

ಜಮಖಂಡಿ- ನಗರ ಸಭೆಯ ನಡೆಯುತ್ತೀರುವ ದುರಾಢಳಿತದ ವಿರುದ್ಧ ಸ್ಥಳಿಯ ವಕೀಲರು ಸಂಘ ಇಂದು ನಗರ ಸಭೆಯ ಕಾರ್ಯಲಯದ ಏದುರುಗೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿತು.ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ದೇವರವರ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ವಕೀಲರು ಇಂದಿನ ಧರಣಿ ಸತ್ಯಾಗ್ರಹದಲ್ಲಿ ಪಾಲುಗೊಂಡಿದ್ದರು ಎಂದು ಸ್ಥಳಿಕ್ಕೆ ಬೇಟ್ಟಿ ನೀಡಿದ ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ. ನಗರ ಸಭೆಯ ವ್ಯಾಪ್ತಿಯಲ್ಲಿ ಬರುವ ನಾಗರಿಕರಿಗೆ ಮೂಲಭೂತ ಸೌಲಭ್ಯಗಳಲ್ಲಿ 9 ಪ್ರಮುಖ ಬೇಡಿಕೆಗಳನ್ನು ವತ್ತಾುಸಿ ಇಂದಿನ ಧರಣಿ ಪ್ರಾರಂಭಿಸಲಾಗಿದೆ. ಧರಣಿ ಪೂರ್ವದಲ್ಲಿ ಹಿರಿಯ ವಕೀಲರಾದ ಆರ್.ಡಿ.ಹಳಂಗಳಿ, ಎಸ್.ಆರ್.ಕಾಡಗಿ, ಅರುಣ ಪತ್ತಾರ. ಕೆ.ಎ.ಜಾಧವ, ಸುರೇಶ ಬಾಡಗಿ, ರವಿ ಯಡಹಳ್ಳಿ, ಮುಂತಾದವರು ಮಾತನಾಡಿ ಕೂಡಲೆ ನಾಗರಿಕ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ವತ್ತಾುಸಿದರು.

ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ನಗರ ಸಭೆ ಅಧ್ಯಕ್ಷ ಶ್ರೀಶೈಲ ರಾಮಬಳ್ಳಿ ಹಾಗೂ ಪರಾಯುಕ್ತ ಎಸ್.ಎಸ್.ಜುಯಧರ ವಕೀಲರ ಬೇಡಿಕೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು ಆದರೆ ವಕೀಲರ ಸಂಘದ ಅದ್ಯಕ್ಷ ಎನ್.ಎಸ್.ದೇವರವರ ನಮಗೆ ಮೌಖಿಕ ಭರವಸೆ ಬೇಡಾ ಲಿಖಿತವಾಗಿ ಭರವಸೆ ಪತ್ರ ನೀಡಬೇಕು ಎಂದು ಪಟ್ಟು ಹಿಡಿದರು ಎಂದು ವರದಿಯಾಗಿದೆ.

 

loading...

LEAVE A REPLY

Please enter your comment!
Please enter your name here