ಬಿಎಸ್‍ವೈ ಅವರಿಂದ ಹಾವು ಬಿಡುವ ಕೆಲಸ

0
42

ಕನ್ನಡಮ್ಮ ಸುದ್ದಿ-ವಿಜಯಪುರ –ಹಲವಾರು ದಿನಗಳಿಂದ ಬಿ.ಎಸ್. ಯಡಿಯೂರಪ್ಪನವರು ಕೇವಲ ಹಾವು ಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಕಾಂಗ್ರೆಸ್ ಸಚಿವರು ಜೈಲಿಗೆ ಹೋಗುತ್ತಾರೆ. ಆದರೆ ಹಾಗಾಗಲಿಲ್ಲ. ನಾನು ಬಿ.ಎಸ್. ಯಡಿಯೂರಪ್ಪನವರಿಗೆ ಸದಾ ಗೌರವದಿಂದ ಕಂಡಿದ್ದೇನೆ, ಬಿ.ಎಸ್. ಯಡಿಯೂರಪ್ಪನವರು ಹಿರಿಯರು, ನನ್ನ ತಂದೆಯ ವಯಸ್ಸಿನವರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ವಿನಾಕಾರಣ ಅವರು ಹಾವು ಬಿಡುವ ಕೆಲಸ ಮಾಡಬಾರದು ಎಂದು ದೂರಿದರು.

ಜಿಂದಾಲ್‍ಗೆ ನೀರು ಬಿಡುವ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ….!!

ಬಿಜೆಪಿಯ ಅಧಿಕಾರದಲ್ಲಿದ್ದಾಗ 500 ಕೋಟಿ ರೂ. ಪಡೆದುಕೊಂಡು ಜಿಂದಾಲ್‍ಗೆ 5 ಟಿಎಂಸಿ ನೀರು ಹರಿಸಿದ್ದಾರೆ, ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತೇನೆ, ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ. ಈ ವಿಷಯದ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದರು. ನಾವು ಜಿಂದಾಲ್‍ಗೆ ಕೇವಲ 25 ಸಾವಿರ ಕ್ಯೂಸೆಕ್ಸ್ ಮಾತ್ರ ನೀರು ಹರಿಸಲಾಗಿದೆ, ಅಂದರೆ 0.116 ಟಿಎಂಸಿ ಅಂದರೆ ಒಂದು ಟಿಎಂಸಿಗಿಂತಲೂ ಕಡಿಮೆ. ಆದರೆ ಈ ಬಗ್ಗೆ ಪರಿಜ್ಞಾನವಿಲ್ಲದೇ ಬಿ.ಎಸ್. ಯಡಿಯೂರಪ್ಪನವರು ಜಿಂದಾಲ್‍ಗೆ 5 ಟಿಎಂಸಿ ನೀರು ಹರಿಸಲಾಗಿದೆ ಎಂದು ಸುಳ್ಳು ಆರೋಪಿಸುತ್ತಿದ್ದಾರೆ ಎಂದರು.
ಮಲಪ್ರಭಾ ಯೋಜನೆ ಜಾರಿಯಾದರೆ ಬಿಜೆಪಿಗೆ ಹಿನ್ನಡೆ..!!
ಮಲಪ್ರಭಾ ಯೋಜನೆ ಜಾರಿಯಾದರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುವ ಷಡ್ಯಂತ್ರ ನಡೆಯುತ್ತಿದೆ. ಮಹಾದಾಯಿ ವಿಷಯದಲ್ಲಿ ಬಿಜೆಪಿ ನಾಯಕರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಮಲಪ್ರಭಾ ಯೋಜನೆ ನನ್ನ ಅವಧಿಯಲ್ಲಿ ಆಧುನೀಕರಣಗೊಂಡು ಪೂರ್ಣಗೊಂಡರೆ ನನಗೆ ಶ್ರೇಯಸ್ಸು ಬರುತ್ತದೆ ಎಂಬ ಕಾರಣಕ್ಕಾಗಿ ಬಿಜೆಪಿ ನಾಯಕರು ನನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಏನ್ನೇ ಆಗಲಿ ಈ ಯೋಜನೆ ಜಾರಿಗೆ ತರುತ್ತೇನೆ ಎಂದರು.
ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ. ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ಸಹ ನೀಡಿದ್ದೇನೆ. ನಾನು ಬಿ.ಎಂ ಪಾಟೀಲ ಮಗ. ಅದರಲ್ಲೂ ವಿಜಯಪುರ ಮಂದ್ದಿ. ನನ್ನ ಬಗ್ಗೆ ಟೀಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ, ನಾನು ತಪ್ಪು ಮಾಡಿಲ್ಲ ಎಂದರು.

loading...