ಪ್ರಚಾರಕ್ಕೆ ಬರುವುದಿಲ್ಲ,.. ಜನರ ಆಶೀರ್ವಾದ ನನ್ನ ಮೇಳಿದೆ ..

0
73

ಕನ್ನಡಮ್ಮ ಸುದ್ದಿ-ವಿಜಯಪುರ
ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದೆನೆ. ಜನರ ಆಶೀರ್ವಾದ ನನ್ನ ಮೇಳಿದೆ. ಅದಕ್ಕಾಗಿ ನಾನೂ ಪ್ರಚಾರಕ್ಕೆ ಬರುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಹೊಕ್ಕುಂಡಿಯಲ್ಲಿ ಮುಳವಾಡ ಏತ ನೀರಾವರಿ 3 ನೇ ಹಂತದ ಯೋಜನೆಯಡಿಯಲ್ಲಿ ಬರುವ ಮಲಘಾಣ ಪಶ್ಚಿಮ ಕಾಲುವೆ (93 ಕಿ.ಮೀ.ಯಿಂದ 118.560) ವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಬಲೇಶ್ವರ ವಿಧಾನಸಭಾ ಚುನಾವಣೆಯಲ್ಲಿ ನಾನೂ ಪ್ರಚಾರಕ್ಕೆ ಬರುವುದಿಲ್ಲ. ಈ ಮತಕ್ಷೇತ್ರದಲ್ಲಿ ಹಲವಾರು ಕಾರ್ಯ ಮಾಡಿದ್ದೆನೆ. ಅದನ್ನು ತಿಳಿದ್ದು ಜನರು ಮತ ಹಾಕಲಿ. ಅವರ ಮನೆಗೆ ತೆರಳಿ ಮತ ಕೆಳ್ಳಲ್ಲ ಅರರಿಗೆ ಮನ ತೃಪ್ತಿಯಾಗು ಕಾರ್ಯ ಮಾಡಿದ್ದೆನೇ. ರೈತರ ಜಮೀನುಗಳಿಗೆ ನೀರು ಹರಿಸುತ್ತೇನೆ. ಈ ಬಾರಿ ಪ್ರಚಾರ ಮಾಡುವುದಿಲ್ಲ. ನೀವೇ ನನ್ನನ್ನು ಆಶೀರ್ವದಿಸಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ನೀಡಿಬೇಕು ಎಂದರು.
“ನಾನು ಆತ್ಮಸಾಕ್ಷಿ”ಯಾಗಿ ಕೆಲಸ…!!
ನಾನು ಆತ್ಮಸಾಕ್ಷಿಯಾಗಿ ಕೆಲಸ ಮಾಡಿದ್ದೇನೆ. ಯಾರಿಗೆ ಗೊತ್ತಾಗುತ್ತದೆಯೋ ಇಲ್ಲವೋ ನನ್ನ ಆತ್ಮಸಾಕ್ಷಿಗಂತೂ ನಾನು ಕೆಲಸ ಮಾಡಿದ್ದು ಗೊತ್ತಿದೆ ಎಂದು ಸಚಿವರು ಹೇಳಿದರು.
ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳಿಂದಾಗಿ ನಾನು ನೀರಾವರಿ ಮಹತ್ವ ಕಲಿತೆ. ಅವರಿಂದಲೇ ಪ್ರೇರಣೆ ಪಡೆದುಕೊಂಡೆ. `ಈ ಭೂಮಿ ಒಂದು ಬೊಗಸೆ ನೀರು ಕೊಟ್ಟರೆ ಸಾಕು, ಈ ಭೂಮಿ ಅಮೇರಿಕಾದ ಕ್ಯಾಲಿಪೋರ್ನಿಯ ಮಿರಿಸುತ್ತದೆ ಎಂಬ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯ ನುಡಿಯನ್ನು ಪ್ರತಿಕ್ಷಣ ನನ್ನನು ಪ್ರೇರಣೆ ನೀಡುತ್ತಿತ್ತು. ಅವರ ಕನಸು ನನಗಾಗಿಸಲು ಹೊರಟಿದ್ದನೇ ಎಂದರು.
ನನಗೆ ಕೇಲಸ ಮಾಡಲು ಬಿಡಿ..!
ನನಗೆ ಕೇಲಸ ಮಾಡಲು ಬಿಡಿ ಅದನ್ನು ಬಿಟ್ಟು ಸಭೆ, ಸಮಾರಂಭ, ಜಾತ್ರೆ, ಮದುವೆಗಳಲ್ಲಿ ಭಾಗವಹಿಸಲು ಕರೆಯಬೇಡಿ. ನಾನು ನನ್ನ ಅಧಿಕಾರದ ಕೊನೆ ಕ್ಷೇಣದ ವರಿಗೆ ಕೇಲಸ ಮಾಡಬೇಕು. ಪ್ರತಿ ಕ್ಷೇಣದ ವರಿಗೆ ಜನರಿಗಾಗಿ ದುಡಿಯುತ್ತೇನೆ ಎಂದು ಭಾವುಕರಾದರು.
ನನಗೆ ಮೂರ್ಖ ಅಂದರು:- ಈ ಹಿಂದೆ ಕೃಷ್ಣಾ ನದಿ ನೀರನ್ನು ಕನಮಡಿಗೆ ಹರಿಸಬೇಕೆಂಬ ಕನಸು ಹೊಂದಿದ್ದೇ. ಆಗ ಅನೇಕರು ನನಗೆ ಮೂರ್ಖ ಎಂದು ಹೇಳುತ್ತಿದರು. ಈಗ ಎಲ್ಲರ ಒಪ್ಪುವಂತ ಕಾರ್ಯ ಮಾಡಿದೆ. ಕನಸು ಕಾಣಬೇಕು, ನನಸಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

loading...