ರೈತರ ಸಾಲ ಮನ್ನಾ ವಿಷಯಕ್ಕೆ ಸರ್ಕಾರ ಉದಾಸೀನತೆ…!

0
51

ಕಾಂಗ್ರೆಸ್ ಮುಖಂಡ ಎಲ್.ಎಲ್. ಉಸ್ತಾದ ಜೆಡಿಎಸ್ ಸೇರ್ಪಡೆಕನ್ನಡಮ್ಮ ಸುದ್ದಿ-ವಿಜಯಪುರ
ಒಂದಕಡೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ವಿಷಯಕ್ಕೆ ಮಾತ್ರ ಉದಾಸೀನತೆ ತೋರುತ್ತದೆ. ಇನ್ನೊಂದಕಡೆ ರಾಜ್ಯ ಸರ್ಕಾರವೂ ರೈತರ ಬಗ್ಗೆ ಸಂಪೂರ್ಣ ನಿಷ್ ಕಾಳಜಿ ವಹಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರಾಸಕ್ತಿ ಧೋರಣೆ ತಾಳಿದ ಕೇಂದ್ರ ಸರ್ಕಾರ ಈ ಬಗ್ಗೆ ಚಕಾರವೆತ್ತಿಲ್ಲ. ಆದರೆ ರಿಲಯನ್ಸ್‍ನಂತಹ ಬಹುರಾಷ್ಟ್ರೀಯ ಕಂಪನಿಗಳ ಕೋಟ್ಯಂತರ ರೂ. ಸಾಲದ ಬಡ್ಡಿಯನ್ನು ಮನ್ನಾ ಮಾಡುವ ಮೂಲಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು.
ರಾಜ್ಯದಲ್ಲಿ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ದ್ರಾಕ್ಷಿ, ದಾಳಿಂಬೆ ಬೆಳೆಗಾರರು ಆರ್ಥಿಕ ಹೊರೆಯಿಂದ ಬಳಲುತ್ತಿದ್ದಾರೆ. ತಮ್ಮನ್ನು ತೊಂದರೆಯಿಂದ ಪಾರುಮಾಡುವಂತೆ ಅವರೇನೂ ಪೂರ್ಣ ಸಾಲಮನ್ನಾ ಮಾಡಿ ಎಂದು ಕೇಳಿಕೊಂಡಿಲ್ಲ, ರಿಪೇಮೆಂಟ್ ಅಡ್ಜೆಸ್ಟ್‍ಮೆಂಟ್ ಅಥವಾ ಬಡ್ಡಿ ಮನ್ನಾಕ್ಕೆ ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆಯೂ ಜೆಡಿಎಸ್ ಕಾರ್ಯಕರ್ತರು ರೈತವಿರೋಧಿಯಾಗಿರುವ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳ ವೈಫಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹಳ್ಳಿ-ಹಳ್ಳಿಗಳಿಗೆ ಹೋಗಿ ಜೆಡಿಎಸ್ ಯಾವ ರೀತಿ ರೈತಪರವಾಗಿದೆ ಎಂಬುದನ್ನು ತಿಳಿಸಬೇಕು ಎಂದರು.
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕರು ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿವೆ ಪ್ರತಿ ವರ್ಷ 50 ಸಾವಿರ ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ತಮ್ಮ ಮಾತಿಗೆ ತಪ್ಪಿ ನಡೆದುಕೊಂಡರು. ರೈತರ ಬಗ್ಗೆ ಸರ್ಕಾರಗಳ ಉದಾಸೀನತೆ ಸರಿಯಲ್ಲ. ಇಂತಹ ರೈತ ವಿರೋಧಿ ಸರ್ಕಾರಗಳಿಗೆ ಜನರು ತಕ್ಕಪಾಠ ಕಲಿಸಬೇಕು. ರಾಜ್ಯ ಸರ್ಕಾರ ರೈತರ ಹೊಲಗಳಿಗೆ ನೀರು ಹರಿಸುವುದಾಗಿ ಹೇಳಿ ಕೋಟ್ಯಂತರ ರೂ. ಲೂಟಿ ಮಾಡಿದೆ ಹೊರತು ರೈತರ ಹೊಲಗಳಿಗೆ ಮಾತ್ರ ನೀರು ಇನ್ನೂ ತಲುಪಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಘಟಕದ ಅಧ್ಯಕ್ಷ ಸೈಯ್ಯದ್ ಮೋಯಿನ್ ಅಲ್ತಾಫ್, ಮಾಜಿ ಸಚಿವ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಸಿ. ಮನಗೂಳಿ, ಜೆಡಿಎಸ್ ಮುಖಂಡರಾದ ಎಸ್.ವಿ. ಪಾಟೀಲ ಸಿಂದಗಿ, ದಿಲಾವರ ಖಾಜಿ, ಮಲ್ಲಿಕಾರ್ಜುನ ಯಂಡಿಗೇರಿ, ಎಸ್.ಎಸ್. ಖಾದ್ರಿ ಇನಾಮದಾರ, ಬಾಗಾಯತ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಷ್ಮಾ ಪಡೇಕನೂರ, ಡಾ.ರಿಯಾಜ್ ಫಾರೂಕಿ, ಚಂದ್ರಕಾಂತ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಮುಖಂಡ ಎಲ್.ಎಲ್. ಉಸ್ತಾದ ಜೆಡಿಎಸ್ ಸೇರ್ಪಡೆ

ಮಾಜಿ ಸಚಿವ ದಿವಂಗತ ಎಂ.ಎಲ್. ಉಸ್ತಾದ ಅವರ ಸಹೋದರ, ಕಾಂಗ್ರೆಸ್ ಹಿರಿಯ ಮುಖಂಡ ಎಲ್.ಎಲ್. ಉಸ್ತಾದ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪಕ್ಷ ಸೇರ್ಪಡೆಯ ನಂತರ ಮಾತನಾಡಿದ್ದ ಅವರು, ಜೆಡಿಎಸ್ ಪಕ್ಷ ರೈತರ, ಬಡವರ ಹಿತರಕ್ಷಣೆ ಬಯಸುವ ಪಕ್ಷವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರ ರೈತಪರ ಕಾಳಜಿ, ಅಭಿವೃದ್ಧಿಪರ ದೃಷ್ಟಿಕೋನವನ್ನು ಮೆಚ್ಚಿ, ಜೆಡಿಎಸ್ ತತ್ವ-ಸಿದ್ಧಾಂತಗಳನ್ನು ಅಪ್ಪಿಕೊಂಡು ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ಟಿಕೇಟ್ ಮೊದಲಾದ ಯಾವುದೇ ಷರತ್ತುಗಳನ್ನು ಹಾಕಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಜೆಡಿಎಸ್ ಪಕ್ಷವನ್ನು ಬಲಪಡಿಸಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

loading...