ಮೈನಿಂಗ್ ಕೇಸ್‍ನಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ…!!

0
46

ಕನ್ನಡಮ್ಮ ಸುದ್ದಿ-ವಿಜಯಪುರ
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮೈನಿಂಗ್ ಕೇಸ್‍ನಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ರೂಪಿಸುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೂರಿದರು.
ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ರೂಪಿಸಿರುವ ಷಡ್ಯಂತ್ರ. ಇನ್ನೂ ಕಾಂಗ್ರೆಸ್ ಪಕ್ಷದ ಇಬ್ಬರು ಸಚಿವರು ಹೈದರಾಬಾದಗೆ ತೆರಳಿ ನನ್ನ ವಿರುದ್ಧ ಸಿಡಿ ಮಾಡಿಸಲು ಯತ್ನಿಸಿದ್ದರು, ಅದು ಸಾಧ್ಯವಾಗಲಿಲ್ಲ ಎಂದರು.
ಜೆಡಿಎಸ್ ಹಿರಿಯ ಮುಖಂಡ ಜೆ.ಟಿ. ದೇವೆಗೌಡ ಅವರು ಯಾವ ಕಾರಣಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ನೀಡಲು ಮುಂದಾಗಿದ್ದಾರೋ ಎಂಬುದು ಗೊತ್ತಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಿಕರಿಸಿದರು.
ವಿಜಯಪುರಕ್ಕೆ ಮೈಸೂರಿನಲ್ಲಿ ಕೆಲವೊಂದು ಬೆಳವಣಿಗೆಗಳು ನಡೆದಿವೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳಿಗೆ ಕೆಲವರಿಗೆ ಸಮಾಧಾನ, ಕೆಲವರಿಗೆ ಅಸಮಾಧಾನ ಇರುವುದು ಕಾಮನ್. ಯಾವುದಕ್ಕೂ ಬೆಂಗಳೂರಿಗೆ ಹೋದ ತಕ್ಷಣ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಐತಿಹಾಸಿಕ ಜಿಲ್ಲೆಯಿಂದ ಚುನಾವಣಾ ಕಣದಲ್ಲಿ ಇಳಿಯಲು ಚಿಂತನೆ..!!
ವಿಜಯಪುರ ಜಿಲ್ಲೆಯಲ್ಲಿ ಚುನಾವಣಾ ಕಣದಲ್ಲಿ ಇಳಿಯಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ. ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಸಮೀಕ್ಷಾ ವರದಿ ಆಯಾ ಪಕ್ಷದ ಮುಖಂಡರಿಗೆ ಗೊತ್ತಾಗಿದೆ. ಇನ್ನೂ ನಾನು ಜನರ ಮಧ್ಯದಲ್ಲಿಯೇ ಇರುತ್ತೇನೆ. ಸಮೀಕ್ಷೆ ನಡೆಸಬೇಕಾಗಿರುವ ಅವಶ್ಯಕತೆ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.

loading...