ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಳಗಾವಿ ಮಕ್ಕಳ ಸಾಧನೆ

0
36

ಕನ್ನಡಮ್ಮ ಸುದ್ದಿ
ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದ ವಿವಾ ಸ್ಪೀಡ್ ರೊಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯೂ ಎಸ್.ಕೆ ರೊಲರ್ ಸ್ಕೇಟಿಂಗ್ ಅಕಾಡೆಮಿ ಸ್ಕೇಟಿಂಗ್ ರಿಂಕ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳಗಾವಿ ರೊಲರ್ ಸ್ಕೇಟಿಂಗ್ ಅಕಾಡೆಮಿಯೂ ಒಟ್ಟು 58 ಪದಕಗಳು ಹಾಗೂ 21 ಚಾಂಪಿಯನ್ ಟ್ರೋಪಿಗಳನ್ನು ಗಳಿಸಿದ್ದಾರೆ.
ಬೆಳಗಾವಿ ರೊಲರ್ ಸ್ಕೇಟಿಂಗ್ ಅಕಾಡೆಮಿ ಗಳಿಸಿದ ಪದಕಗಳು 19 ಚಿನ್ನದ ಪದಕ, 19 ಬೆಳ್ಳಿ ಪದಕ, 9 ಕಂಚಿನ ಪದಕಗಳು ಪಡೆದುಕೊಂಡಿದ್ದಾರೆ. ಕ್ವಾಡ್ ಸ್ಕೇಟಿಂಗ್‍ನಲ್ಲಿ ದ್ರೀಯ ಯಮನಾಪೂರ ಒಂದು ಬೆಳ್ಳಿ, ಒಂದು ಕಂಚು, ತೇಜಸ ಲಮಾಣಿ ಎರಡು ಚಿನ್ನ ವೈಯಕ್ತಿಕ ಚಾಂಪಿಯನ್‍ಶಿಪ್ ಟ್ರೋಫಿ, ನಾಗರಾಜ ದೇಸಾಯಿ ಎರಡು ಚಿನ್ನ ವೈಯಕ್ತಿಕ ಚಾಂಪಿಯನ್‍ಶಿಪ್ ಟ್ರೋಫಿ, ಅನೀತಾ ಪರಶೆಟ್ಟಿ ಒಂದು ಚಿನ್ನ ಪದಕ ಹಲವರು ಬೆಳ್ಳಿ ಪದಕವನ್ನು ಪಡದಿದ್ದಾರೆ.
ಬಿಗಿನರ ಸ್ಕೇಟಿಂಗ್‍ನಲ್ಲಿ ಸರವದ ಶೇಕ ಒಂದು ಚಿನ್ನ, ಬೆಳ್ಳಿ ಚಾಂಪಿಯನ್ ಶಿಪ್ ಟ್ರೋಫಿ, ಪೃಥ್ವಿ ಹಿರೇಮಠ ಎರಡು ಚಿನ್ನ ಪದಕ ವೈಯಕ್ತಿಕ ಚಾಂಪಿಯನ್ ಶಿಪ್ ಟ್ರೋಫಿ, ಸಾಬಾ ತಲ್ಲೂರ, ಅಧರ್ವ ಕದಮ, ಆರುಷ ಕದಮ, ದಿಕ್ಷಾ ಹುಂದ್ರೆ, ವೈಷವಿ ಬೆಳಗಲಿ, ಎರಡು ಬೆಳ್ಳಿ ವೈಯಕ್ತಿಕ ಚಾಂಪಿಯನ್ ಶಿಪ್ ಟ್ರೋಫಿ ಪಡೆದುಕೊಂಡಿದ್ದಾರೆ.
ಇನಲೈನ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರೀತಿ ನವತಿ, ಅಭಿಷೇಕ ನವಲೆ ಎರಡು ಚಿನ್ನ ವೈಯಕ್ತಿಕ ಚಾಂಪಿಯನ್ ಶಿಪ್ ಟ್ರೋಫಿ ಎಂದು ಸ್ಕೇಟಿಂಗ್ ಕೋಚ್ ಸೂರ್ಯಕಾಂತ ಹಿಂಡಲಗೇಕರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...