ಬೀಜಿಂಗ್‌: ಇತ್ತೀಚೆಗಷ್ಟೇ ಉದ್ಘಾಟನೆಯಾದ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ನಡುವಿನ ದೇಶದ ಅತೀ ಉದ್ಧದ ಧೋಲಾ-ಸಾದಿಯಾ ಸೇತುವೆಗೆ ಸಂಬಂಧಿಸಿದಂತೆ ಚೀನಾ ಮತ್ತೆ ಖ್ಯಾತೆ ತೆಗೆದಿದ್ದು, ಗಡಿ ವಿವಾದ ಬಗೆಹರಿಸಿಕೊಳ್ಳಲು ಭಾರತ ಎಚ್ಚರಿಕೆಯ ಮತ್ತು ವಿವೇಚನಾಯುತ ನಡೆ ಮುಂದುವರೆಸಬೇಕು ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳನ್ನು ಬೆಸೆಯುವ ಸೇತುವೆ ಉದ್ಘಾಟಿಸಿದ ಬೆನ್ನಲ್ಲೇ, ಕ್ಯಾತೆ ತೆಗೆದಿರುವ ಚೀನಾ ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕಾದರೆ ಭಾರತ ಎಚ್ಚರಿಕೆಯ ಮತ್ತು ವಿವೇಚನಾಯುತ ನಡೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದೆ. ಗಡಿ ವಿಷಯ ಪರಿಹಾರವಾಗುವುದಕ್ಕೂ ಮುನ್ನ ಭಾರತ ಎಚ್ಚರಿಕೆಯಿಂದ ನಡೆದುಕೊಳ್ಳಲಿದೆ, ಜೊತೆಗೂಡಿ ಕಾರ್ಯನಿರ್ವಹಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ.
ಅಂತೆಯೇ ಗಡಿಯಲ್ಲಿ ಪ್ರಾದೇಶಿಕ ಶಾಂತಿ ಕಾಯ್ದುಕೊಳ್ಳುವ ವಿಶ್ವಾಸವಿದ್ದು, ಪೂರ್ವ ಗಡಿಯಲ್ಲಿ ಚೀನಾದ ಹಿಡಿತ ಸ್ಪಷ್ಟವಾಗಿದೆ ಮತ್ತು ಅಭಾಧಿತವಾಗಿದೆ ಎಂದೂ ವಿದೇಶಾಂಗ ಇಲಾಖೆ ಸ್ಪಷ್ಟ ಪಡಿಸಿದೆ.
ಕಳೆದ ವಾರವಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತೀ ಉದ್ಧದ ಸೇತುವೆ ಧೋಲಾ-ಸಾದಿಯಾ ಸೇತುವೆ ಲೋಕಾರ್ಪಣೆ ಮಾಡಿದ್ದರು. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸೇನಾ ಕಾರ್ಯಾಚರಣೆಗೂ ಬಳಕೆಯಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 8 ಟನ್ ತೂಕದ ಟ್ಯಾಂಕರ್ ಗಳನು ಹೊರುವ ಸಾಮರ್ಥ್ಯ ಈ ಸೇತುವೆಗಿದೆ. ಇದೇ ಕಾರಣಕ್ಕೆ ಚೀನಾ ಈ ಸೇತುವೆಯನ್ನು ಗಂಭೀರವಾಗಿ ಪರಿಗಣಿಸಿದೆ.

loading...