ವೈ.ಟಿ.ಎಸ್.ಎಸ್ ಎನ್.ಎಸ್.ಎಸ್ ವಿದ್ಯಾರ್ಥಿಗಳ ಸಾಧನೆ

0
109

ಕನ್ನಡಮ್ಮ ಸುದ್ದಿ
ಯಲ್ಲಾಪುರ :19 ಎನ್.ಎಸ್.ಎಸ್ ಸಹಯೋಗದೊಂದಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ,ಬೆಂಗಳೂರು ಅವರು ನಡೆಸಿದ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಮಹಾವಿದ್ಯಾಲಯದ ದ್ವಿತೀಯ ವಾಣಿಜ್ಯ ವಿಭಾಗದ ಸ್ನೇಹಾ ನಾಗೇಶ್ ಹಾಗೂ ಸುಮಾ ಮರಾಠಿ ಇವರು ಹೆಚ್ಚಿನ ಅಂಕ ಗಳಿಸಿದ ಹಿನ್ನಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟು ಸಂಸ್ಥೆಗೆ ಗೌರವ ತಂದಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ರೇಷ್ಮಾ ಶೇಖರನ್ನು ಸಂಸ್ಥೆಯ ಅಧ್ಯಕ್ಷÀ ಗಜಾನನ ಬಾಬುರಾವ ಭಟ್ಟ ಹಾಗೂ ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಮತ್ತು ಪ್ರಾಂಶುಪಾಲ ಜಯರಾಮ ಗುನಗಾ,ಉಪಪ್ರಾಂಶುಪಾಲ ಯು.ಎಸ್.ಭಟ್ಟ ಹಾಗೂ ಎಲ್ಲಾ ಉಪನ್ಯಾಸಕರು, ಶಿಕ್ಷಕ,ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

loading...