ಜಮ್ಮು ಕಾಶ್ಮೀರ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲೂ ಎಸ್‍ಜಿಎಸ್‍ಟಿ ಕಾಯ್ದೆ ಜಾರಿ

0
52

ನವದೆಹಲಿ: ಸ್ಟೇಟ್ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಕಾಯ್ದೆಯನ್ನು ಕೇರಳ ಬುಧವಾರ ಅಂಗೀಕರಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿರುವ ಭಾರತೀಯ ತೆರಿಗೆ ಕಾಯ್ದೆಯನ್ನು ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಂಗೀಕಾರ ಮಾಡಿವೆ. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಸ್ ಜಿ ಎಸ್ ಟಿ ಕಾಯ್ದೆಯನ್ನು ಅಂಗೀಕರಿಸಿವೆ ಮತ್ತು ಈಗ ಜುಲೈ 1 ರಂದು ಅದನ್ನು ಸರಾಗವಾಗಿ ಜಾರಿಗೊಳಿಸಲು ಸಿದ್ಧವಾಗಿವೆ ಎಂದು ವಿತ್ತ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯ ಎಸ್‍ಜಿಎಸ್‍ಟಿ ಕಾಯ್ದೆಯನ್ನು ಅಂಗೀಕರಿಸಲು ಕೇರಳ ಬುಧವಾರ ಗೊತ್ತುವಳಿ ಸೂಚಿಸಿದ್ದು, ಜೂನ್ 15 ರಂದು ಪಶ್ಚಿಮ ಬಂಗಾಳ ಕೂಡ ಇದಕ್ಕೆ ಅನ್ವಯವಾಗುವ ಗೊತ್ತುವಳಿ ಹೊರಡಿಸಿತ್ತು.
“ಆದುದರಿಂದ, ಬಹುತೇಕ ಇಡೀ ದೇಶ, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ, ಈಗ ಜಿ ಎಸ್ ಟಿ ಕಾಯ್ದೆ ಜಾರಿ ಮಾಡಲು ಮುಂದಾಗಿವೆ ಎಂದು ಸಚಿವಾಲಯ ಹೇಳಿದೆ.

loading...