19ರಂದು ಧಾರವಾಡದಲ್ಲಿ ಶಿಕ್ಷಕರ ನೇಮಕಾತಿ ಉದ್ಯೋಗ ಮೇಳೆ : ನಾಗರಾಜ್

0
46

19ರಂದು ಧಾರವಾಡದಲ್ಲಿ ಶಿಕ್ಷಕರ ನೇಮಕಾತಿ ಉದ್ಯೋಗ ಮೇಳೆ : ನಾಗರಾಜ್

ಬೆಳಗಾವಿ: ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ವತಿಯಿಂದ ಇದೇ ಮೇ.19ರಂದು ಧಾರವಾಡದಲ್ಲಿ 12ನೇ ರಾಜ್ಯ ಮಟ್ಟದ ಬೃಹತ್ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ನಾಗರಾಜ್ ಎಚ್.ಎನ್ ಅವರು ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಇದೇ ಮೇ.19 ರವಿವಾರ ಧಾರವಾಡ ನಗರದ ಶಿವಾಜಿ ಸರ್ಕಲ್ ಬಳಿಯಿರುವ ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಭಾರತ್ ಹೈಸ್ಕೂಲ್ ಆವರಣದಲ್ಲಿ ಈ ಬೃಹತ್ ಖಾಸಗಿ ಶಾಲಾ ಶಿಕ್ಷಕರ ನೇಮಕಾತಿ ಉದ್ಯೋಗ ಮೇಳ ನಡೆಯುತ್ತಿದ್ದು, ಬೆಳಗಾವಿ ವಿಭಾಗದ ಶಿಕ್ಷಣ ಸಂಸ್ಥೆಗಳ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ಪೂರ್ವ ಪ್ರಾಥಮಿಕ ಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಸ್ನಾತಕೋತ್ತರ ಪದವಿ ಕಾಲೇಜುಗಳು ಭಾಗವಹಿಸಿ ತಮಗೆ ಬೇಕಾದ ಅರ್ಹ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಶಿಕ್ಷಣ ಸಂಸ್ಥೆಗಳು ಮೇ. 17ರೊಳಗೆ ನೊಂದಣಿ ಮಾಡಿಕೊಳ್ಳಬೇಕು. 9480062375 ಮೊಬೈಲ್ ನಂಬರ್ ಸಂಪರ್ಕಿಸಬೇಕೆಂದು ತಿಳಿಸಿದರು.
ಅದೇ ರೀತಿ ಶಿಕ್ಷಕ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಎನ್ಟಿಸಿ, ಡಿಎಡ್, ಬಿಎಡ್, ಟಿಇಟಿ ಸಿಪಿಎಡ್, ಬಿಪಿಎಡ್, ಎಂಪಿಎಡ್ ಮತ್ತು ಎಳನೇ ತರಗತಿ, ಎಸ್ಎಸ್ಎಲ್ಸಿ, ಪಿಯುಸಿ, ಬಿಎ, ಬಿಎಸ್ಸಿ, ಸಿಎಸ್, ಬಿಕಾಮ್, ಎಂಎ, ಎಂಎಸ್ಸಿ, ಎಂಕಾಮ್, ತೇರ್ಗಡೆಯಾಗಿರಬೇಕು, ಅದರಲ್ಲೂ ಇಂಗ್ಲೀಷ್ ಮಾಧ್ಯಮದ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆಯಿದೆ.
2500ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಕ್ಲರ್ಕಗಳು, ಕಂಪ್ಯೂಟರ್ ಶಿಕ್ಷಕರು, ಸಂಗೀತ, ನೃತ್ಯ, ಚಿತ್ರಕಲೆ ಶಿಕ್ಷಕರು, ಗ್ರಂಥಪಾಲಕರು, ಹಾಸ್ಟೇಲ್ ವಾರ್ಡನಗಳು, ಸಿಪಾಯಿಗಳು, ಆಯಾಗಳು, ಚಾಲಕರು ಸೇರಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಾಗಿದೆ ಎಂದು ಮಾಹಿತಿ ನೀಡಿದರು.

loading...