ಪ್ರಗತಿ ಸಾಧಿಸುವಲ್ಲಿ ವಿಫಲ: ಸಭೆಗೆ ತಪ್ಪು ಮಾಹಿತಿ ಸಂಸದರಿಂದ ತರಾಟೆ

0
57

ಕನ್ನಡಮ್ಮ ಸುದ್ದಿ-ಕೊಪ್ಪಳ: ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಇತರೆ ಎಲ್ಲಾ ಕೇಂದ್ರ ಪುರಸ್ಕøತ ಜನಕಲ್ಯಾಣ ಕಾರ್ಯಕ್ರಮಗಳನ್ನು ನಿಗದಿ ಕಾ¯ವಾಧಿಯೊಳಗಾಗಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಂಸದ ಕರಡಿ ಸಂಗಣ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರುಜಿಲ್ಲಾ ಪಂಚಾಯತ ಸಂಭಾಂಗಣದಲ್ಲಿ ಶನಿವಾರ ಜರುಗಿದ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ, ಪ್ರಗತಿ ಸಾಧಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು ಇಂತಹ ಅಧಿಕಾರಿಗಳು ವಿರುದ್ಧ ಶಿಸ್ತು ಕ್ರಮಕ್ಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 66 ಜಾನುವಾರುಗಳ ಅಂತ್ರಾಕ್ಞ್ ರೋಗಕ್ಕೆ ಸಾವಿಗಿಡಾಗಿದ್ದು, ಯಾಕೇ ಅವುಗಳಿಗೆ ಪರಿಹಾರವನ್ನು ನೀಡಿಲ್ಲ, ಮತ್ತು ವಿಮೆ ಮಾಡಿಸಲು ರೈತರಿಗೆ ಮಾಹಿತಿ ನಿಡಿಲ್ಲವೆಂದು ಪಶುಸಂಗೋಪನಾ ಅಧಿಕಾರಿಗಳಿಗೆ ಪ್ರಶ್ನಿಶಿದರು, ಎಲ್ಲಾ ಜನುವಾರುಗಳಿಗೆ ವಿಮೆ ಮಾಡಿಸಲು, ರೋಗ ಹತೋಟಿಗೆ ಕ್ರಮಕ್ಕೆ ಹೇಳಿದರು
ಜಿಲ್ಲೆಯಲ್ಲಿ ಎನ್.ಆರ್.ಡಿ.ಡಬ್ಲ್ಯ.ಪಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, ಕೊಳೆವೆ ನೀರು ಸರಬರಾಜು, ಕಿರು ನೀರು ಸರಬರಾಜು, ಪುನಶ್ಚೇತನ, ಅಂತರ್ಜಲ ಅಭಿವೃಧಿ ಇತ್ಯಾಧಿ ಕುಡಿಯುವ ನೀರಿನ ಯೋಜನೆಗಳು ಸುಮಾರು ವರ್ಷಗಳಿಂದ ಅನುಷ್ಠಾನದಲ್ಲಿದ್ದರು ಅವುಗಳಿಂದ ಯಾವ ಸಫಲತೆಯು ಇಲ್ಲ, ಸಾರ್ವಜನಿಕ ಬಳಕೆಗೆ ಇಲ್ಲದಾಗಿವೆ, ಹೀಗಾದರೆ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯವೆಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಂಸದರು ಎಲ್ಲಾ ಯೋಜನೆಗಳನ್ನು ನಿಗದಿ ಕಾಲಾಮೀತಿಯೊಳಗಾಗಿ ಪೂರ್ಣಗೊಳಿಸಬೇಕೆಂದರು
ಕೃಷಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಇತ್ಯಾಧಿ ಇಲಾಖೆಗೆಳ ಮೇಲೆ ನಡೆದ ಚರ್ಚೆಯಲ್ಲಿ ಪ್ರಗತಿ ವರದಿಯಲ್ಲಿ ಅಧಿಕಾರಿಗಳು ಸಭೆಗ ಸರಿಯಾದ ಮಾಹಿತಿಯನ್ನು ನೀಡಿಲ್ಲ, ಅನುಪಾಲನೆಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ, ಇದು ಅಭಿವೃದ್ಧಿ ಹಿನ್ನಡೆಗೆ ಕಾರಣವಾಗುವುದು ಯಾವುದೇ ಕಾರಣಕ್ಕೂ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯ ಮಾಡಬಾರದು, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವದೆಂದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಎಪ್ರೀಲ್2017 ರಿಂದ ಇದುವರೆಗೂ 2017-18 ನೇ ಸಾಲಿಗೆ ಅನುಮೋದಿತ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು, ಇದರಿಂದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ತೊಂದರೆ ಬಗ್ಗೆ ವಿವರಿಸಿದರು. ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಸಿ.ಓ.ವೆಂಕಟರಾಜಾ ಮಾತನಾಡಿ ಜಿಲ್ಲಾಪಂಚಾಯತ ಸಾಮಾನ್ಯ ಸಭೆಯಲ್ಲಿ ಕ್ರೀಯಾ ಯೋಜನೆಗಳಿಗೆ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಬೇಕಾಗಿದ್ದು ಇದರಿಂದ ಅನುದಾನ ಬಿಡುಗಡೆಯಲ್ಲಿ ವಿಳಂಭವಾಗಿದೆ ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಗಳು ವಿಫಲ: 2014-15 ರಿಂದ ಇಲ್ಲಿಯವರೆಗೆ 558 ಘಟಕಗಳು ಇದ್ದು ಇವುಗಳಲ್ಲಿ ಬಹುತೇಕ ಕಾರ್ಯನಿರ್ವಹಿಸುತ್ತಿಲ್ಲ, ಇದರಿಂದ ಯೋಜನೆ ವಿಫಲವಾಗಿ ಹಣ ಪೋಲಾಗುತ್ತಿದೆ, ಕಳಪೆ ಯಂತ್ರೋಪಕರಣ ಇತ್ಯಾದಿ ಕಾರಣಗಳಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ವಿಫಲವಾಗಿದ್ದು, ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಸಂಸದ ಸಂಗಣ್ಣ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ.ರುದೇಶ ಘಾಳಿ, ಉಪವಿಭಾಗಾಧಿಕಾರಿ ಗುರುದತ್ತ ಹೆಗಡೆ, ಇದ್ದರು, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ.ತೋರವಿ. ಯೋಜನಾಧಿಕಾರಿ ರವಿ ಬೀಸರಳ್ಳಿ, ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

loading...