ವಿದ್ಯುತ್ ತಗುಲಿ ಇಬ್ಬರು ಸಾವು ಎಂಟು ಜನರು ಗಾಯ

0
78

ಕನ್ನಡಮ್ಮ ಸುದ್ದಿ
ಬೆಳಗಾವಿ: ಗಾಂಧಿ ನಗರದ ಸಾಗರ ಹೋಟೆಲ್ ಬಳಿ ಬ್ಯಾರನ್ ಹಾಕಲು ಹೋಗಿ ಮೇಲಕ್ಕೆ ಎತ್ತಿದ ಕಬ್ಬಿಣದ ಪ್ರೇಮ್‍ಗೆ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದು, 8 ಜನರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡದಿದೆ.

ಪರಶುರಾಮ ಕಠಾರೆ (48) ಮತ್ತು ಗೋಪಾಲ ಸೊಗಲನ್ನವರ (25) ಮೃತ ವ್ಯಕ್ತಿಗಳು. ್ಲ ರವಿ ದೇವಳಕರ ಎಂಬುವವನ್ನು ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಏಳು ಜನರಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...