ಮಳೆಗಾಗಿ ಹಗಲು ರಾತ್ರಿ ನಿರಾಹಾರ

0
81

ಕನ್ನಡಮ್ಮ ಸುದ್ದಿ-ನವಲಗುಂದ: ಸತತ ಮೂರು ವರ್ಷಗಳಿಂದ ಅತೀವೃಷ್ಠಿ, ಅನಾವೃಷ್ಠಿ ಹಾಗೂ ಬರಗಾಲದಿಂದ ತತ್ತರಿಸಿರುವ ಜನರು ಮಳೆಗಾಗಿ ಕಾತುರರಾಗಿದ್ದಾರೆ. ಮಳೆ ಬಂದರೆ ಮನುಕುಲದ ಉಳಿವು ಎಂದು ಅಂಬೇಡ್ಕರ ಓಣಿಯ ಹಿರಿಯ ನಿವಾಸಿ ಹನಮವ್ವಾ ದೂಡ್ಡಮನಿ ಉಪವಾಸಕ್ಕೇ ಕುಳಿತಿದ್ದಾರೆ.
ನಗರದ ದುರ್ಗವ್ವನ ಗುಡಿಯ ಮುಂದೆ ಗುರುವಾರ ಬೆಳಿಗ್ಗೆ 9-30 ಘಂಟೆಗೆ ಮಳೆಗಾಗಿ ಕುಳಿತಿರುವ ಇವರು ದಿನದ 24ತಾಸು ಯಾವುದೇ ರೀತಿಯ ಆಹಾರವನ್ನು ಸ್ವೀಕರಿಸದೇ ಮೇಲೆಯು ಏಳದೇ ದೇವರ ಧ್ಯಾನದಲ್ಲಿ ಇದ್ದು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಸೋಮವಾರದವರೆಗೆ ಇವರ ಉಪವಾಸವು ಮುಂದುವರೆಯುವುದೆಂದು ಅಲ್ಲಿ ನೆರೆದಿರುವಂತಹ ಜನರು ಪತ್ರಿಕೆಗೆ ತಿಳಿಸಿದ್ದಾರೆ.

loading...