ಜನಾಂಗೀಯ ಅಧ್ಯಯನಕ್ಕೆ ಸಂಶೋಧನೆ ಅಗತ್ಯ: ಜಲವಳ್ಳಿ

0
80

ಕನ್ನಡಮ್ಮ ಸುದ್ದಿ-ಅಂಕೋಲಾ: ಒಂದು ಸಮಾಜದ ಬಗ್ಗೆ ಕೃತಿಯನ್ನು ಹೊರತರಬೇಕಾದರೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಬೇಕು. ಈ ನಿಟ್ಟಿನಲ್ಲಿ ಕೆ.ಟಿ. ನಾಯಕ ಅವರು ಈ ಕೃತಿಯನ್ನು ರಚಿಸಲು ಸಾಕಷ್ಟು ಶ್ರಮಪಟ್ಟಿದ್ದು, ಈ ಕೃತಿಯಲ್ಲಿ ನಾಡವರ ಬಗೆಗಿನ ಒಳನೋಟ ಹಾಗೇ ವಿವಿಧ ದಾಖಲಾತಿಯನ್ನೊಳಗೊಂಡ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ಸಾಹಿತಿ ಸುಮುಖಾನಂದ ಜಲವಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊನ್ನಾರಾಕಾ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡ ಕೆ.ಟಿ. ನಾಯಕ ಅವರ ಇತಿಹಾಸದೊಳು ನಾಡವರು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಈ ಕೃತಿಯಲ್ಲಿ ನಾಡವರ ಸಂಸ್ಕøತಿ ಹಾಗೂ ವಿವಿಧ ಮಜಲುಗಳನ್ನು ವಿವರಿಸಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಪ್ರಭು ಮಾತನಾಡಿ, ಕೆ.ಟಿ. ನಾಯಕ ಎಂಬ ಅದ್ಭುತ ಪ್ರತಿಭೆ ನಮ್ಮ ನಡುವೆ ಇರುವುದು ಹೆಮ್ಮೆಯ ಸಂಗತಿ. ನಿವೃತ್ತಿಯ ನಂತರ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ರಥೋತ್ಸವಕ್ಕೆ ಮರು ಚಾಲನೆ ನೀಡಿದ ಕೀರ್ತಿ ಇವರಿಗೆ ಸಲ್ಲಿಸುತ್ತದೆ ಎಂದರು.
ಕತೆಗಾರ ಡಾ. ರಾಮಕೃಷ್ಣ ಗುಂದಿ ಆಶಯ ನುಡಿಗಳನ್ನಾಡಿದರು. ಜಾನಪದ ವಿದ್ವಾಂಸ ಡಾ. ಎನ್.ಆರ್. ನಾಯಕ, ಕವಿ ಮೋಹನ ಹಬ್ಬು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ವಿಠೋಬ ನಾಯಕ, ಉದ್ಯಮಿ ಜಯವಂತ ಮಹಾಲೆ, ನಿವೃತ್ತ ಶಿಕ್ಷಕ ಗಣಪತಿ ನಾಯಕ ಮಾತನಾಡಿದರು.
ಜಿ.ಆರ್.ನಾಯಕ ಪ್ರಾರ್ಥನೆ ಹಾಡಿದರು. ಸವಿತಾ ನಾಯಕ ಸ್ವಾಗತಿಸಿದರು. ವಿಠ್ಠಲ ಗಾಂವಕರ ನಿರೂಪಿಸಿ ದರು. ಮಹಾದೇವ ಮಾಸ್ತರ ವಂದಿಸಿದರು. ಇದೇ ಸಂದರ್ಭದಲ್ಲಿ ಕೆ.ಟಿ. ನಾಯಕ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

loading...