ಮಾದಕ ವಸ್ತು ಮಾರಾಟ: ಮೂರರು ಸೆರೆ

0
39

ಕನ್ನಡಮ್ಮ ಸುದ್ದಿ
ಬೆಳಗಾವಿ: ನಗರದ ಕೆಎಲ್‍ಇ ಆಸ್ಪತ್ರೆ ಹತ್ತಿರ ಬ್ರೌನ್ ಶುಗರ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸ್‍ರು ದಾಳಿಮಾಡಿ ಮೂರು ಜನರನ್ನು ಬಂಧಿಸಿ, 50 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡ ಘಟನೆ ರವಿವಾರ ನಡದಿದೆ.
ನಗರದ ಬಸವ ಕಾಲನಿಯ ಪಹಿಮ್ ಮೇಸ್ತ್ರಿ (22), ವೀರಭದ್ರ ನಗರದ ರವಿಕಿರಣ ಬಸನಗೌಡ ಪಾಟೀಲ (20) ಮತ್ತು ರಾಮನಗರದ ಅಬ್ದುಲ್ಲಾ ಜಮಾದಾರ (19) ಎಂಬುವವರು ಬಂಧಿತರು. ಅವರಿಂದ 45 ಸಾವಿರ ರೂ. ಮೌಲ್ಯದ 50 ಗ್ರಾಂ ಬ್ರೌನ್ ಶುಗರ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...