ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

0
71

ಕನ್ನಡಮ್ಮ ಸುದ್ದಿ-ಅಂಕೋಲಾ: ಇಲ್ಲಿಯ ಪುರಸಭೆ ವ್ಯಾಪ್ತಿಯ ಹೊನ್ನೆಕೇರಿ ಗ್ರಾಮದಲ್ಲಿ ಸಮಾಜಿಕ ಕಾರ್ಯಕರ್ತ ಸುನೀಲ್ ಎಸ್.ನಾಯ್ಕ ಇವರ ನೇತೃತ್ವದ ಯುವಕರ ಸಹಕಾರದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವ ಮೂವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಕ್ಲಬ್‍ನ ನೂತನ ಅಧ್ಯಕ್ಷ ಹಾಗೂ ಜೀವ ವಿಮಾ ನಿಗಮದ ಕಾರವಾರ ಶಾಖೆಯ ಮೇಲ್ವಿಚಾರಕ ವಸಂತ ಕೆ.ನಾಯ್ಕ, ಶಿರಸಿ ಶೈಕ್ಷಣಿಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತೆ ಹಳಿಯಾಳ ತಾಲೂಕಿನ ಮುರ್ಕವಾಡ ಶಾಲೆಯ ಶಿಕ್ಷಕಿ ವೀಣಾ ತುಕಾರಾಮ ನಾಯ್ಕ ಹಾಗೂ 2013ನೇ ಸಾಲಿನಲ್ಲಿ ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಮೂಲಕ ಬಂಗಾರದ ಪದಕದ ಪಡೆದುಕೊಂಡ ಸುಪ್ರೀಯಾ ಬಾಬು ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೂರಜ ಬಾಬು ನಾಯ್ಕ ಕಳೆದ ನಾಲ್ಕು ವರ್ಷದಿಂದ ಪೂಣಾದ ಮೈರ್ಕೋಸಾಫ್ಟ್ ಕಂಪನಿಯ ಉದ್ಯೋಗಿಯಾಗಿ ಉನ್ನತ ವ್ಯಾಸಂಗಕ್ಕಾಗಿ ಆಯ್ಕೆಯಾಗಿ ಅಮೆರಿಕಕ್ಕೆ ಕಂಪನಿಯ ಮೂಲಕ ತೆರ ಳಿದ್ದು, ಇವರನ್ನು ಯುವಕರು ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿದ ವಸಂತ ನಾಯ್ಕ ಮಾತನಾಡಿ, ನೀವು ಮಾಡಿರುವ ಸನ್ಮಾನದಿಂದ ಸಾರ್ವಜನಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಇನ್ನಷ್ಟು ಜನಪರವಾದ ಕಾರ್ಯಗಳನ್ನು ಮಾಡ ಲಿಕ್ಕೆ ಹೆಚ್ಚಿನ ಪ್ರೇರಣೆಯನ್ನು ನೀಡುತ್ತದೆ. ಭವ್ಯ ಭಾತರದ ಸಮಗ್ರ ಅಭಿವೃದ್ಧಿಗೆ ಯುವಕರು ಹೆಚ್ಚಿನ ಚಿಂತನೆ ಯನ್ನು ನಡೆಸಬೇಕು. ಸಮಾಜದಲ್ಲಿರುವ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಕಂಕಣ ಬದ್ಧರಾಗಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಸುನೀಲ ಎಸ್.ನಾಯ್ಕ ಮಾತನಾಡಿ, ಯುವಕರ ಪ್ರೋತ್ಸಾಹ ಹಾಗೂ ಸಂಘಟ ನೆಯ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿರುವವರನ್ನು ಗುರುತಿಸಿ ಗೌರವಿಸಲಾಗುವುದು. ರೋಟರಿ ಕ್ಲಬ್‍ನ ನೂತನ ಅಧ್ಯಕ್ಷ ವಸಂತ ನಾಯ್ಕ ಇವರಲ್ಲಿ ಹೊನ್ನೆಕೇರಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ ಯಾಗಿ ನೀಡುವುದಕ್ಕೆ ವಿನಂತಿಸಿಕೊಂಡಾಗ ತಮ್ಮ ಸಮ್ಮತಿಯನ್ನು ನೀಡಿದ್ದಕ್ಕಾಗಿ ಅಭಿನಂದಿಸಿದರು.
ಸನ್ಮಾನಿತರಾದ ವೀಣಾ ನಾಯ್ಕ ಮತ್ತು ಸುಪ್ರೀಯಾ ನಾಯ್ಕ ಮಾತನಾಡಿದರು. ಈ ಸಂದರ್ಭದಲ್ಲಿ ಉಮಾಕಾಂತ ನಾಯ್ಕ, ಪ್ರಸನ್ನ ನಾಯ್ಕ, ಅಕ್ಷಯ ನಾಯ್ಕ, ಶ್ರೀಕಾಂತ ನಾಯ್ಕ, ರಾಜು ನಾಯ್ಕ, ಮಂಜುನಾಥ ನಾಯ್ಕ, ನಿಲೇಶ ನಾಯ್ಕ, ಅಭಿಜಿತ ನಾಯ್ಕ, ಕಾಳಿದಾಸ ಶಿವಲಿಂಗೇಕರ, ಶೀಲ್ಪಾ ನಾಯ್ಕ, ನಂದನ ನಾಯ್ಕ, ತಾ.ಪಂ. ನಿವೃತ್ತ ಅಧಿಕಾರಿ ಬಾಬು ನಾಯ್ಕ, ಸಪ್ನಾ ನಾಯ್ಕ ಹಾಗೂ ರಾಜಮ್ಮ ಶಿವಲಿಂಗೇಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...