ಕೆ.ಪಿ.ಸಿ.ಸಿ. ನೂತನ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ: ವಿಜಯೋತ್ಸವ

0
69

ಕನ್ನಡಮ್ಮ ಸುದ್ದಿ-ಅಂಕೋಲಾ: ಯುವಕರ ಕೈಯಲ್ಲಿ ದೇಶದ ಭವಿಷ್ಯ ಅಡಗಿದೆ. ಅದನ್ನು ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೂಲಕ ಸದ್ಬಳಕೆ ಮಾಡಿಕೊಂಡು ಹೊರಹೊಮ್ಮುವಂತಾಗಬೇಕು. ಯುವ ಕಾಂಗ್ರೆಸ್‍ನಿಂದ ಬಂದ ನನಗೆ ಕೆ.ಪಿ.ಸಿ.ಸಿ.ಯ ಅಂಗಳದ ತನಕ ಈ ಉನ್ನತ ಜವಬ್ದಾರಿ ದೊರೆತಿದೆ ಎಂದಾದರೆ, ಅದಕ್ಕೆ ಈ ಕ್ಷೇತ್ರದ ಜನತೆಯ ಪ್ರೀತಿಯೆ ಕಾರಣವಾಗಿದೆ ಎಂದು ಕೆ.ಪಿ.ಸಿ.ಸಿ. ನೂತನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.ಭಾನುವಾರ ಸತ್ಯಾಗ್ರಹ ಸ್ಮಾರಕ ಭವನದ ಎದುರಿನಲ್ಲಿ ಗೋಪಾಲಕೃಷ್ನ ನಾಯಕ ಅವರ ಅಭಿಮಾನಿಗಳು, ನಾಗರಿಕರು, ಹಿತೈಷಿಗಳು, ಗೆಳಯರ ಬಳಗದವರು ಗೋಪಾಲಕೃಷ್ನ ನಾಯಕ ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನನಗೆ ಕೆ.ಪಿ.ಸಿ.ಸಿ. ಯ ಕಾರ್ಯದರ್ಶಿ ಯನ್ನಾಗಿ ಮಾಡಿ ಬಹು ದೊಡ್ಡ ಜವಬ್ದಾರಿಯನ್ನು ನೀಡಿದೆ. ಇದಕ್ಕಾಗಿ ಕೆ.ಪಿ.ಸಿ.ಸಿ.ಯ ಅಧ್ಯಕ್ಷ ಡಾ. ಪರಮೇಶ್ವರ ಹಾಗೂ ನಮ್ಮ ನಾಯಕರಾದ ಉಸ್ತುವಾರಿ ಸಚಿವ ದೇಶಪಾಂಡೆ ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ಇನ್ನು ಮುಂದೆ ಡಾ.ಪರಮೇಶ್ವರ ಹಾಗೂ ಆರ್.ವಿ. ದೇಶಪಾಂಡೆ ಅವರ ಮಾರ್ಗ ದರ್ಶನದಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷ ಬಲಗೊಳಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ, ಜಿಪಂ ಸದಸ್ಯೆ ಸರಳಾ ದೀಕ್ಷಿತ್ ನಾಯಕ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ನಿರ್ದೇಶಕ ಜಿ.ಎಮ್. ಶೆಟ್ಟಿ,. ಜಿ.ಪಂ. ಮಾಜಿ ಸದಸ್ಯರಾದ ಶಾಂತಿ ನಾಯಕ, ಹಿಲ್ಲೂರು, ವಂದಿಗೆ ಗ್ರಾ.ಪಂ. ಅಧ್ಯಕ್ಷ ನಾರಾಯಣ ಹರೀಶ, ಭಾವಿಕೇರಿ ಗ್ರಾಪಂ ಸದಸ್ಯರಾದ ಗೋವಿಂದ ದೂರಿ, ಧನಂಜಯ ನಾಯ್ಕ, ಮಾಜಿ ಸದಸ್ಯ ಅಮರ ನಾಯ್ಕ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಹಿಲ್ಲೂರ ಗ್ರಾಪಂ ಉಪಾಧ್ಯಕ್ಷ ಬಾಬು ಸುಂಕೇರಿ, ಹಾಲಕ್ಕಿ ಸಮಜದ ಅಗಸೂರು ಘಟಕದ ಅಧ್ಯಕ್ಷ ತುಳುಸು ಗೌಡ, ನ್ಯಾಯವಾದಿ ದಿಕ್ಷಿತ ನಾಯಕ, ಅಚವೆ ಗ್ರಾಪಂ ಮಾಜಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಪ್ರಮುಖರಾದ ತ್ರಯಂಬಕ ಬಾಂದೇಕರ, ಪ್ರಶಾಂತ ಬಾಂದೇಕರ, ಚಂದ್ರಕಾಂತ ಮರಾಠಿ, ಚಂದ್ರಕಾಂತ ಮರಾಠಿ, ಕೃಷ್ಣಾ ಮರಾಠೆ, ಗಂಗಾಧರ ಮರಾಠೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದು ಅಭಿನಂದಿಸಿದರು.

loading...