ಬೂತ್‍ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ: ಲಕ್ಷ್ಮಣ ಸವದಿ

0
62

ರಾಮದುರ್ಗ: ರಾಜ್ಯದ ಕಾಂಗ್ರೆಸ್ ಸರಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸಂಪೂರ್ಣ ಆಡಳಿತ ಯಂತ್ರ ಕುಸಿದೆ, ಆದ್ದರಿಂದ ಜನರಿಗೆ ಬೇಸರ ಮೂಡಿಸಿದೆ. ಎಲ್ಲ ಕಡೆಗೆ ಬದಲಾವಣೆಯ ಗಾಳಿ ರಾಜ್ಯದಲ್ಲಿ ಬಿಸಿದೆ ಮತ್ತೆ ಬಿಜೆಪಿ ಸರಕಾರವನ್ನು ಜನರು ಬಯಸುತ್ತಿದ್ದಾರೆ. ಕಾರ್ಯಕರ್ತರು ಬೂತ್‍ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸಮಾಡಬೇಕೆಂದು ಮಾಜಿ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ತಾಲೂಕಿನ ಹುಲಕುಂದ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಹೋಬಳಿ ಮಟ್ಟದ ಬಿಜೆಪಿ ವಿಸ್ತಾರಕ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಗುಜರಾತ್ ಮತ್ತು ಉತ್ತರಪ್ರದೇಶದ ಮಾದರಿಯಲ್ಲಿ ಸಂಘಟನೆ ಮಾಡಿದ್ದಾದರೆ ಬರುವ 2018ರ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷವು ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲೂಕಿನಲ್ಲಿ 1ನೇ ಮತಗಟ್ಟೆ ಹುಲಕುಂದದಿಂದ ಪ್ರಾರಂಭವಾಗುತ್ತಿದ್ದರಿಂದ ಇಲ್ಲಿಂದಲೆ ಬಿಜೆಪಿ ವಿಸ್ತಾರಕ ಸಭೆಗೆ ಚಾಲನೆ ನೀಡುತ್ತಿದ್ದು, ಪ್ರತಿಯೊಬ್ಬರ ಮನೆಗೆ ತೆರಳಿ ಅವರ ಸಂಪೂರ್ಣ ಮಾಹಿತಿ ಹಾಗೂ ಅವರು ಎದುರಿಸುತ್ತಿರುವ ಸಂಕಷ್ಟಗಳನ್ನು ಪಟ್ಟಿ ಮಾಡಬೇಕು. ಇದೇ ಮಾದರಿಯಲ್ಲಿಯೇ ಉತ್ತರಪ್ರದೇಶದಲ್ಲಿ ಚುನಾವಣೆ ಪೂರ್ವ ರೈತರ ಸಂಕಷ್ಟಗಳನ್ನು ಪಟ್ಟಿ ಮಾಡಿ ಹೈಕಮಾಂಡೆಗೆ ಸಲ್ಲಿಸಿದ್ದಲಿಂದಲೆ ಅಧಿಕಾರ ಬಂದ ಮೂರು ತಿಂಗಳಲ್ಲಿ 1 ಲಕ್ಷ ರೂ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದ ಕಾಂಗ್ರೆಸ್ ಸರಕಾರ ಮೊಸಳೆ ಕಣ್ಣಿರು ಒರಸಿದಂತೆ ಕಾಟಾಚಾರಕ್ಕೆ 50 ಸಾವಿರ ಸಾಲ ಮನ್ನಾ ಮಾಡಿದೆ. ಆದರೆ ಇನ್ನೂವರೆಗೂ ಸರಕಾರಿ ಸಂಸ್ಥೆಗಳಿಗೆ ಹಣ ಸಂದಾಯವಾಗಿಲ್ಲ. ಕೂಡಲೆ ಹಣ ಸಂದಾಯ ಮಾಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ತುಕಾರಾಮ ಬಲಕುಂದಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಜಿ.ಪಂ.ಸದಸ್ಯರಾದ ರಮೇಶ ದೇಶಪಾಂಡೆ, ಮಾರುತಿ ತುಪ್ಪದ, ರೇಣಪ್ಪ ಸೋಮಗೊಂಡ, ಮುಖಂಡರಾದ ಡಾ.ಕೆ.ವಿ.ಪಾಟೀಲ, ಮಂಜುಳಾ ದೇವರಡ್ಡಿ, ಜಿ.ಜಿ.ಪಾಟೀಲ, ಬಿ.ಎಂ.ತುಪ್ಪದ, ಶಶಿಧರ ಮಾಳವಾಡ, ಪ್ರಶಾಂತಗೌಡ ಪಾಟೀಲ, ಮಲ್ಲಣ್ಣ ಯಾದವಾಡ, ಟಿ.ರಾಜೇಶ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
==ಹೇಳಿಕೆ==
ಹುಲಕುಂದದಲ್ಲಿ ಬಿಜೆಪಿ ವಿಸ್ತಾರಕ ಸಭೆಯಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಿದ್ದ ವೇಳೆ ರೈತನೊಬ್ಬ ಮಹದಾಯಿ ನದಿ ಜೋಡನೆ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಅವರು ಸಮಜಾಯಿಸಿ ಉತ್ತರ ನೀಡಬಹುತ್ತಿತ್ತು, ಆದರೆ ಮಹಾದಾಯಿ ವಿಚಾರ ಹುಲಕುಂದದಲ್ಲೇಕೆ ಎಂದು ಪ್ರಶ್ನಿಸಿ, ಮಹದಾಯಿ ವಿಷಯವನ್ನು ಪ್ರಸ್ತಾಪಿಸದೇ ಪಕ್ಷದ ವಿಚಾರವಾಗಿಯೇ ತಮ್ಮ ಭಾಷಣವನ್ನು ಮುಂದುವರೆಸಿದರು.

loading...