ವಿಸ್ತಾರಕ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಿಸಿ: ಸುರೇಶ

0
31

ಚನ್ನಮ್ಮ ಕಿತ್ತೂರು: ಮುಂದಿನ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿವರಿಷ್ಠರು ಜಾರಿಗೆ ತಂದಿರುವ ವಿಸ್ತಾರಕ ಯೋಜನೆಯನ್ನು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಜಿ ಶಾಸಕ ಸುರೇಶ ಮಾರಿಹಾಳ ಹೇಳಿದರು.
ಇಲ್ಲಿಯ ಮಾರಿಹಾಳ ಕಾಂಪ್ಲೆಕ್ಸ್‍ನಲ್ಲಿ ರವಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಕ್ಷೇತ್ರದಲ್ಲಿ ಮಾಡಲಾಗುತ್ತಿದೆ ಪಂ. ದೀನ ದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಕಾರ್ಯಗಳ ವಿಸ್ತರಣೆಯನ್ನು ಮಾಡಲಾಗುತಿದ್ದು ಕೇಂದ್ರದ ಯೋಜನೆಗಳು ಪ್ರತಿಯೊಂದು ಹಳ್ಳಿಗಳಿಗೂ ಹಾಗೂ ಮನೆ, ಮನೆಗಳಿಗೂ ಮುಟ್ಟಸುವ ಕೆಲಸವಾಗಬೇಕಾಗಿದೆ ಈ ನಿಟ್ಟಿನಲ್ಲಿ ರಾಷ್ಟ್ರಾಧ್ಯಕ್ಷ ಅಮೀತ ಷಾ ರವರ ಮಾರ್ಗದರ್ಶನದಂತೆ ವಿಸ್ತಾರಕರ ಜೊತೆಗೂಡಿ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಪಂ ಉಪಾಧ್ಯಕ್ಷ ಯಲ್ಲಪ್ಪ ವಕ್ಕುಂದ, ರಾಜ್ಯ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯರಾದ ಹನುಮಂತ ಕೊಟಬಾಗಿ, ಉಳವಪ್ಪ ಉಳ್ಳೆಗಡ್ಡಿ, ಸಂದೀಪ ದೇಶಪಾಂಡೆ, ಡಾ.ಬಸವರಾಜ ಪರವಣ್ಣವರ, ಉಮಾಕಾಂತ ಭಾರತಿ, ಮೃತ್ಯುಂಜಯ ಮಾರಿಹಾಳ, ದಿನೇಶ ವಳಸಂಗ, ಬಸವರಾಜ ಸಂಗೊಳ್ಳಿ, ಶಿವಾನಂದ ಹನುಮಸಾಗರ, ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

loading...