ಶಕ್ತ-ಅಶಕ್ತ ಸಾಮಥ್ರ್ಯ ನಿಯಂತ್ರಣದಿಂದ ಸಾಧನೆ ಸಾಧ್ಯ – ಡಿಡಿಪಿಐ ಪುಂಡಲೀಕ

0
84

ಬೆಳಗಾವಿ: ವರ್ತಮಾನವನ್ನು ಚುರುಕು, ಚಿಂತನೆ, ಚೈತನ್ಯದಿಂದ ಕಳೆಯಬೇಕು ಅಂದಾಗ ಸಮರ್ಥ ಭವಿಷ್ಯವನ್ನು ವಿದ್ಯಾರ್ಥಿಗಳು ಅನುಭವಿಸಿ ಆಸ್ವಾದಿಸಬಹುದಾಗಿದೆ. ಸುಂದರÀ ಭವಿಷ್ಯದಲ್ಲಿ ಭೂತಕಾಲವನ್ನು ಅವಲೋಕಿಸುವ ಲಕ್ಷಣವನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆನಂದ ಪುಂಡಲೀಕರು ಹೇಳಿದರು.
ಅವರು ಇಂದು ಸಂಜೆ ನಗರದ ಕೆ.ಎಲ್.ಇ ಸಂಸ್ಥೆಯ ಜಿ.ಎ. ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ 2017-18 ನೆಯ ಸಾಲಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಇಂದಿನ ವಿದ್ಯಾರ್ಥಿಗಳ ಶಕ್ತ-ಅಶಕ್ತ ಸಾಮಥ್ರ್ಯಗಳನ್ನು ನಿಯಂತ್ರಿಸಿಕೊಳ್ಳಬೇಕು. ಧನಾತ್ಮಕ ಚಿಂತನೆ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು. ವಿವಿಧ ಸಂಘಗಳು ವಿದ್ಯಾರ್ಥಿಗಳ ಸಕಾರಾತ್ಮಕ ಚಿಂತನೆಗೆ ಚಾಲನೆ ನೀಡುತ್ತವೆ ಕಾರಣ ಸಂಘಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಸಿದ್ಧರಾಮ ಗದಗ ಮಾತನಾಡಿ, ಶ್ರದ್ಧೆ ಇದ್ದರೆ ಗೆದ್ದೆ ಎನ್ನುವ ಮನೋಭಾವ ಬೆಳೆಸಿಕೊಂಡು ಸತತ ಪ್ರಯತ್ನ, ನಿರಂತರ ಓದುವ ಆಸಕ್ತಿ ಹೊಂದಿ ಕಠಿಣತೆಯನ್ನು ಸರಳಗೊಳಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯ ಮೇಲೆ ಆಜೀವ ಸದಸ್ಯ ಮಹಾದೇವ ಬಳಿಗಾರ, ಉಪನ್ಯಾಸಕರಾದ ಎಸ್.ಎಸ್. ಬಿಂಜವಾಡಗಿ, ಎ.ಬಿ.ಕೊರಬು, ಸಾಂಸ್ಕøತಿಕ ಸಂಘದ ಮುಖ್ಯಸ್ಥೆ ಕಾವೇರಿ ಪಟ್ಟಣ, ಶಾಲಾ ಪ್ರತಿನಿಧಿಗಳಾದ ಅಭೀಷೇಕ ಬಿಕ್ಕುಗೋಳ, ಪ್ರವೀಣಾ ಬೆಡಸೂರ ಉಪಸ್ಥಿತರಿದ್ದರು.
ಶಿವರಾಯ ಏಳುಕೋಟಿ ಪರಿಚಯಿಸಿದರು. ಸುನಿಲ ಹಲವಾಯಿ ಒಕ್ಕೂಟ ವರದಿ ವಾಚಿಸಿದರು. ಅಲ್ಕಾ ಪಾಟೀಲ ನಿರೂಪಿಸಿದರು. ವಿಶಾಲಾಕ್ಷಿ ಅಂಗಡಿ ವಂದಿಸಿದರು.

loading...