ಹುಟ್ಟುಹಬ್ಬ: ಬೃಹತ್ ರಕ್ತದಾನ ಶಿಬಿರ ಯಶಸ್ವಿ

0
59

ಕನ್ನಡಮ್ಮ ಸುದ್ದಿ-ಅಂಕೋಲಾ: ಪ್ರಶಾಂತ ದೇಶಪಾಂಡೆ ಅವರ ಹುಟ್ಟುಹಬ್ಬದ ನಿಮಿತ್ತ ಅಂಕೋಲಾದಲ್ಲಿ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ತಾಲೂಕಾಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ಅಂದೇ ಮಿಶನರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಲೋಚನಾ ಗಣಪತಿ ಹಳದಿಪುರಕರ ಈಕೆಯು ಜ್ವರದಿಂದ ಅಸ್ವಸ್ಥಗೊಂಡಿದ್ದು, ತ್ವರಿತವಾಗಿ ರಕ್ತದ ಅವಶ್ಯಕತೆಯಿತ್ತು. ತಕ್ಷಣ ಆಕೆಗೆ ಅಗತ್ಯವಿದ್ದ ಓ ಪಾಸಿಟಿವ್ ರಕ್ತವನ್ನು ಸರ್ಕಾರಿ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿ ಆಕೆಯ ಪ್ರಾಣ ಉಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ರಾಜೇಂದ್ರ ನಾಯ್ಕ ಅವರು ಸುಲೋಚನಾ ಅವರನ್ನು ಮಾತನಾಡಿಸಿ ‘ರಕ್ತದ ಅಗತ್ಯವಿದ್ದರೆ ತಕ್ಷಣ ನನ್ನನ್ನು ಸಂಪರ್ಕಿಸಿ. ರಕ್ತದಾನ ಶಿಬಿರದಲ್ಲಿ 32 ಜನರನ್ನು ರಕ್ತದಾನ ಮಾಡಿದ್ದು, ಸ್ಥಳೀಯವಾಗಿ ರಕ್ತನಿಧಿ ಕೇಂದ್ರ ಇಲ್ಲದಿರುವುದರಿಂದ ಕಾರವಾರಕ್ಕೆ ಸಾಗಿಸಲಾಗಿದೆ. ತಕ್ಷಣ ರಕ್ತ ತರಿಸುವ ವ್ಯವಸ್ಥೆಯನ್ನು ಮಾಡಿಸುತ್ತೇನೆ’ ಎಂದು ಹೇಳಿ ಸಾಂತ್ವನ ಹೇಳಿದರು.

loading...