ಸ್ವಚ್ಛ ಇಂಧನ-ಉಜ್ವಲ ಜೀವನ-ಚವಡಪ್ಪನವರ

0
61

ಯರಗಟ್ಟಿ:17 ಸ್ಥಳಿಯ ಬಸವೇಶ್ವರ ಗ್ಯಾಸ ಎಜನ್ಸಿಯವರು ಮಾಂತ ದುರದುಂಡೇಸ್ವರ ಮಠದಲ್ಲಿ ಉಜ್ವಲ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ ಮತ್ತು ಅದರ ಕಿಟ್ಟಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಚವಡಪ್ಪನವರ ಮಾತನಾಡಿ ಮನೆ ಅಡುಗೆ ಮಾಡುವಾಗ ಬರುವ ಇಂಧನದಿಂದ ಬಹಳಷ್ಟು ಮಹಿಳೆಯರು ಹಲವಾರು ಕಾಯಿಲೆಗೆ ಗುರಿಯಾಗುತ್ತಿದ್ದರು. ಜಗತ್ತಿನಾದ್ಯಂತ ಸುಮಾರು 19 ಶತಕೊಟಿ ಜನರು ಮೃತ ಪಟ್ಟಿದ್ದಾರೆ. ಇದನ್ನರಿತ ಪ್ರಧಾನ ಮಂತ್ರಿ ನರೆಂದ್ರ ಮೋದಿ ಉಜ್ವಲಯೋಜನೆ ಜಾರಿಗೆತಂದಿದ್ದಾರೆ. ಅದರ ಜೊತೆಗೆ ವಿಮಾ ಪಾಲಸಿಯ ಮಹತ್ವ ತಿಳಿಯುವ ಕಿಟ್ಟ ಕೋಡಾ ಕೊಟ್ಟಿದ್ದಾರೆ. ಎಂದರು.
ಸದಾನಂದ ಹನಬರ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆ ಇಂದ ಮಹಿಳೆಯರ ಆರೊಗ್ಯ ಉತ್ತಮ ವಾಗುತ್ತದೆ. ಮತ್ತು ಈ ಯೋಜನೆ ಜಗತ್ತಿನಲ್ಲಿ ಪ್ರಥಮ ಎಂದರು. ಇದರ ಉಪಯೋಒಗ ಸರಿಯಾಗಿ ಮಾಡಿಕೊಳ್ಳ ಬೇಕು. ಮಕ್ಕಳು ಚಾಲನೆ ಮಾಡದಂತೆ ನೋಡಿಕೊಳ್ಳ ಬೇಕು ಎಂದರು.
ಕಾರ್ಯಕ್ರಮವನ್ನು ಜ್ಯೋತಿ ಬೇಳಗಿಸುವದರೊಂದಿಗೆ ಜಿ.ಪಂ.ಸದಸ್ಯರಾದ ಅಜಿತಕುಮಾರ ದೇಸಾಯಿ ಉದ್ಘಾಟನೇಮಾಡಿದರು. ಅದ್ಯಕ್ಷತೆ ಇ.ಪಂ.ಸದಸ್ಯೆ ವಿದ್ಯಾರಾಣಿ ಸೊನ್ನದ ವಹಿಸಿದ್ದರು. ಮುಖ್ಯ ಅಥಿತಿಯಾಗಿ ತಾ.ಪಂ. ಅದ್ಯಕ್ಷರಾದ ವಿನಯಕುಮಾರ ದೇಸಾಯಿ.ಗ್ರಾ.ಪಂ. ಅದ್ಯಕ್ಷೆ ಕಸ್ತೋರೆವ್ವಾ ಕಡೆಮನಿ. ಉಪಾದ್ಯಕ್ಷೆ ಲಕ್ಷ್ಮಿ ಸೊನ್ನದ. ತಾ.ಪಂ.ಸದಸ್ಯೆ ಮಂಜುಳಾ. ಸೊಪ್ಪಡ್ಲ ಗ್ರಾ.ಪಂ.ಅದ್ಯಕ್ಷ ಸುರೇಶ ಬಂಟನೂರ. ಎ.ಪಿ.ಎಂ.ಸಿ. ಉಪಾದ್ಯಕ್ಷ ಚಂದ್ರಣ್ಣ ಅಳಗೊಡಿ. ಬಸನಗೌಡಾ ಪಾಟೀಲ. ರಾಜೇಂದ್ರ ವಾಲಿ. ಗ್ಯಾಸ ಎಜನ್ಸಿಯ ಮುಖ್ಯೆಸ್ತೆ ಮಲ್ಲವ್ವಾ ಹೊನ್ಯಾಳ ಮುಂತಾದವರು ಉಪಸ್ಥಿತರಿದ್ದರು. ನಿರುಪಣೆ ಶಿವಾನಂದ ಕರ್ಜಗಿಮಠ ಮಾಡಿದರು.

loading...